ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆಯಾಗಿದೆ. 500 ವರ್ಷಗಳ ಭಾರತೀಯರ ಕಾಯುವಿಕೆ ಅಂತ್ಯವಾಗಿದೆ. ಈ ಸಂದರ್ಭದಲ್ಲಿ ಭಾರತದ ಖ್ಯಾತ ಗಾಯಕಿ ಸಿನಿಮಾ ಹಾಡಿನ ಜೊತೆ ಜೊತೆಗೆ ಸಾವಿರಾರು ಭಕ್ತಿಗೀತೆಗಳಿಗೆ ಧ್ವನಿಯಾಗಿರುವ ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರು ನಮ್ಮ ಜೊತೆಗಿಲ್ಲ ಆದರೆ ಅವರು ಧ್ವನಿ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆಯಾಗಿದೆ. 500 ವರ್ಷಗಳ ಭಾರತೀಯರ ಕಾಯುವಿಕೆ ಅಂತ್ಯವಾಗಿದೆ. ಈ ಸಂದರ್ಭದಲ್ಲಿ ಭಾರತದ ಖ್ಯಾತ ಗಾಯಕಿ ಗಾನ ಕೋಗಿಲೆ ಎಂದೇ ಖ್ಯಾತಿ ಗಳಿಸಿದ ಲತಾ ಮಂಗೇಶ್ಕರ್ ಅವರು ನಮ್ಮ ಜೊತೆಗಿಲ್ಲ ಆದರೆ ಅವರು ಧ್ವನಿ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಕಲೆಗೆ ಸಾವಿಲ್ಲ ಎಂಬ ಮಾತಿದೆ. ಅದೇ ರೀತಿ ಈ ಶುಭ ಸಂದರ್ಭದಲ್ಲಿ ಲತಾ ಮಂಗೇಶ್ವರ್ ಅವರು ನಮ್ಮ ಜೊತೆಗಿಲ್ಲದಿದ್ದರೂ ಅವರು ತಮ್ಮ ಧ್ವನಿಯ ಮೂಲಕ ತಾವು ಹಾಡಿದ ಸಾವಿರಾರು ಹಾಡುಗಳ ಮೂಲಕ ನಮ್ಮ ನಡುವೆ ಜೀವಂತವಾಗಿದ್ದಾರೆ. ಅವರ ಧ್ವನಿಯನ್ನು ಜನ ಮರೆಯಲು ಇಷ್ಟಪಡುವುದಿಲ್ಲ, ಇದೇ ಕಾರಣಕ್ಕೆ ಅವರ ಧ್ವನಿಯಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿ ರಾಮ್ ಆಯೇಂಗೆ ಹಾಡನ್ನು ಸೃಷ್ಟಿ ಮಾಡಿದ್ದು, ಎಐ ನಿರ್ಮಿತ ಈ ಲತಾ ಮಂಗೇಶ್ಕರ್ ಅವರ ಧ್ವನಿ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ.
ರಾಮ್ ಆಯೇಂಗೆ.. ಲತಾ ಮಂಗೇಶ್ಕರ್ ಧ್ವನಿಯಲ್ಲಿ ಎಐ ಸೃಷ್ಟಿಸಿದ ಹಾಡು ಫುಲ್ ವೈರಲ್
ಮೂಲತಃ ಈ ಹಾಡನ್ನು ಖ್ಯಾತ ಗಾಯಕ ಮಿಶಾಳ್ ಮಿಶ್ರಾ ಅವರು ಹಾಡಿದ್ದಾರೆ. 2023ರಿಂದಲೂ ಈ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಜನ ಕೇಳಲು ಬಯಸುವ ಹಾಡುಗಳ ಟ್ರೆಂಡಿಗ್ ಲಿಸ್ಟ್‌ನಲ್ಲಿದೆ. ಹೀಗಾಗಿ ಈಗಾಗಲೇ ಹಿಟ್ ಆಗಿರುವ ಈ ಹಾಡನ್ನು ಜನ ತಮ್ಮ ಪ್ರೀತಿಯ ಗಾಯಕಿ ಲತಾ ಮಂಗೇಶ್ಕರ್ ಧ್ವನಿಯಲ್ಲಿ ಕೇಳಲು ಆಸೆ ಪಟ್ಟಿದ್ದು, ಜನರ ಆಸೆಯನ್ನು ಎಐ ಮೂಲಕ ತೀರಿಸಿದ್ದಾರೆ ಡಿಜಿ ಎಂಆರ್‌ಎ ಎಂಬುವವರು. ಕೃತಕ ಬುದ್ಧಿಮತ್ತೆಯನ್ನು ಬಳಸಿ ಲತಾ ಮಂಗೇಶ್ಕರ್ ಧ್ವನಿಯಲ್ಲಿ ಇವರು ರಾಮ್ ಆಯೇಂಗೆ ಹಾಡನ್ನು ಸೃಷ್ಟಿಸಿದ್ದು, ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯ ಶುಭ ಸಂದರ್ಭದಲ್ಲಿ ಲತಾ ಮಂಗೇಶ್ಕರ್ ಧ್ವನಿಯ ಈ ಹಾಡು ವೈರಲ್ ಆಗಿದೆ.
ಇನ್ನು ಈ ಹಾಡನ್ನು ಯೂಟ್ಯೂಬ್‌ನಲ್ಲಿ ಹರಿಬಿಡಲಾಗಿದೆ. ಕೃತಕ ಬುದ್ಧಿಮತ್ತೆ ಬಳಸಿ ಲತಾ ಮಂಗೇಶ್ಕರ್ ಧ್ವನಿಯಲ್ಲಿ ಮೂಡಿ ಬಂದಿರುವ ಈ ರಾಮ್ ಆಯೇಂಗೆ ಹಾಡು ಈಗ ಇಂಟರ್‌ನೆಟ್‌ನಲ್ಲಿ ಸಂಚಲನ ಸೃಷ್ಟಿಸಿದೆ. ಜೊತೆಗೆ ಸಾವಿರಾರು ಜನ ಈ ವೀಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿ ಕಾಮೆಂಟ್ ಮಾಡ್ತಿದ್ದಾರೆ. ಇದು ನಾನು ಇದುವರೆಗೆ ಕೇಳಿದ ಅತ್ಯುತ್ತಮ ಹಾಡು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಧ್ವನಿ ಅಮೃತ ಸಮಾನವಾಗಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಕಾಮೆಂಟ್‌ಗಳು ಜನ ಇಂದಿಗೂ ಲತಾ ಅವರನ್ನು ಅದೆಷ್ಟು ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎಂಬುದನ್ನು ತೋರಿಸುತ್ತಿದೆ.
ಲತಾ ಮಂಗೇಶ್ಕರ್ ಇಚ್ಛೆಯಂತೆ ತಿರುಮಲ ದೇವಸ್ಥಾನಕ್ಕೆ ಬಾರೀ ಮೊತ್ತದ ದಾನ
ಕೆಲ ದಿನಗಳ ಹಿಂದಷ್ಟೇ ಪ್ರಧಾನಿ ಮೋದಿ ಅವರು ಟ್ವಿಟ್ಟರ್‌ನಲ್ಲಿ ಲತಾ ಮಂಗೇಶ್ಕರ್ ಅವರು ಹಾಡಿದ ಶ್ರೀ ರಾಮರ್ಪನ ಮತ ರಾಮೋ ಮಾತಪಿತ ರಾಮಚಂದ್ರ ಎಂಬ ಹಾಡನ್ನು ಪೋಸ್ಟ್ ಮಾಡುವ ಮೂಲಕ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆಯ ಹಿಂದಿನ ದಿನ ಲತಾ ಅವರನ್ನು ನೆನಪು ಮಾಡಿಕೊಂಡಿದ್ದರು. ಈ ವೇಳೆ ಇಡೀ ದೇಶವೇ ರಾಮ ಮಂದಿರದಲ್ಲಿ ರಾಮನ ಪ್ರಾಣ ಪ್ರತಿಷ್ಠಾಪನೆಗೆ ಕಾತುರದಿಂದ ಕಾಯುತ್ತಿದೆ. ಈ ಶುಭ ಸಂದರ್ಭದಲ್ಲಿ ಲತಾ ಮಂಗೇಶ್ಕರ್ ಅವರನ್ನು ನಾವು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ನರೇಂದ್ರ ಮೋದಿ ಬರೆದುಕೊಂಡಿದ್ದರು.