
ಡಬ್ಬಿಂಗ್ ನೀನೇ ಮಾಡು ಅಂತ ಒಪ್ಪಿಕೊಂಡುಬಿಟ್ಟೆ. ಆ ಮೇಲೆ ಗೊತ್ತಾಯಿತು. ಇವರ ಧ್ವನಿಯನ್ನು ಸಾಕೋದು ಒಂದೇ, ರೆಬೆಲ್‌ಸ್ಟಾರ್ ಅಂಬರೀಶ್ ಅವರನ್ನು ನಿಭಾಯಿಸೋದು ಒಂದೇ ಅಂತ... - ಹೀಗೆ ಹೇಳಿದ್ದು ನಿರ್ದೇಶಕ ಕಮ್ ನಿರ್ಮಾಪಕ ಪ್ರೇಮ್.
ಅದು ‘ದಿ ವಿಲನ್’ ಚಿತ್ರಕ್ಕೆ ಸಂಬಂಧಿಸಿದ ವಿಷಯ. ಈ ವಿಷಯದ ಕೇಂದ್ರಬಿಂದು ನಟಿ ರಕ್ಷಿತಾ. ಚಿತ್ರದ ನಾಯಕಿ ಆ್ಯಮಿ ಜಾಕ್ಸನ್ ಪಾತ್ರಕ್ಕೆ ನಟಿ ರಕ್ಷಿತಾ ಡಬ್ಬಿಂಗ್ ಮಾಡುತ್ತಿದ್ದಾರೆ. ಹೀಗೆ ಹೇಳಿದರು ಅಚ್ಚರಿ ಪಡುವವರೇ ಹೆಚ್ಚು. ಆದರೂ ಇದು ನಿಜ. ಈಗಾಗಲೇ ಡಬ್ಬಿಂಗ್ ಶುರು ಮಾಡಿದ್ದಾರೆ.
ರಕ್ಷಿತಾ ಡಬ್ಬಿಂಗ್ ಹೇಗಿದೆ? ಪಾತ್ರಕ್ಕೆ ಸೂಟ್ ಆಗುತ್ತಾ? ಮನೆಯವರನ್ನೇ ಡಬ್ಬಿಂಗ್ ಆರ್ಟಿಸ್ಟ್ ಮಾಡಿಬಿಟ್ರಲ್ಲ? ಎಂದು ಪ್ರೇಮ್ ಅವರನ್ನು ಕೇಳಿದಾಗ ಅವರು ಹೇಳಿದ್ದು ಹೀಗೆ ‘ಆ್ಯಮಿ ಜಾಕ್ಸನ್ ಪಾತ್ರಕ್ಕೆ ಡಬ್ ಮಾಡುತ್ತೇನೆ ಎಂದಾಗ ನಾನು ಒಪ್ಪಿಕೊಂಡೆ. ಆ ಮೇಲೆ ಗೊತ್ತಾಗಿದ್ದು ಈ ರಕ್ಷಿತಾರನ್ನು ಡಬ್ಬಿಂಗ್ ಆರ್ಟಿಸ್ಟ್ ಆಗಿ ಸಾಕೋದು ಒಂದೇ, ರೆಬೆಲ್ ಸ್ಟಾರ್ ಅಂಬರೀಷ್ ಅವರನ್ನು ನಿಭಾಯಿಸೋದು ಒಂದೇ ಅಂತ. ರಕ್ಷಿತಾ ನನ್ನ ಪಾಲಿಗೆ ರೆಬೆಲ್ ಸ್ಟಾರ್ ಇದ್ದಂತೆ. ಅವರು ಬಂದಾಗಲೇ ನಾವು ರೆಡಿಯಾಗಿ ಡಬ್ಬಿಂಗ್ ಮಾಡಿಸಬೇಕು. ಆದರೆ, ಡಬ್ಬಿಂಗ್ ಚೆನ್ನಾಗಿ ಮಾಡುತ್ತಿದ್ದಾರೆ.
ಆ್ಯಮಿ ಜಾಕ್ಸನ್ ಪಾತ್ರಕ್ಕೆ ತುಂಬಾ ಸೂಟ್ ಆಗುತ್ತದೆ. ಹೀಗಾಗಿ ತಡವಾದರೂ ಸರಿ, ರಕ್ಷಿತಾ ಅವರಿಂದಲೇ ಡಬ್ಬಿಂಗ್ ಪೂರ್ತಿ ಮಾಡಿಸುತ್ತೇನೆ. ದಿನಕ್ಕೆ ಎರಡು, ಮೂರು ದೃಶ್ಯಗಳಿಗೆ ಡಬ್ ಮಾಡುತ್ತಾರೆ’ ಎನ್ನುತ್ತಾರೆ ನಿರ್ದೇಶಕ ಪ್ರೇಮ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.