
ಮುಂಬೈ: ಬೆಳೆದ ಮಕ್ಕಳನ್ನು ಪೋಷಕರು ಸ್ನೇಹಿತರಂತೆ ಕಾಣಬೇಕೆನ್ನುತ್ತಾರೆ. ಬಾಲಿವುಡ್ ನಟ ಶಾರುಕ್ ಖಾನ್ ಮಗಳು 18 ವಸಂತಗಳನ್ನು ಪೂರೈಸಿದ್ದು, ಮಗಳ ಹುಟ್ಟುಹಬ್ಬಕ್ಕೆ ಅಪ್ಪ ವಿಶೇಷವಾಗಿ ವಿಶ್ ಮಾಡಿರುವುದು ಸುದ್ದಿಯಾಗುತ್ತಿದೆ.
'ಎಲ್ಲರಂತೆ ನಿನಗೂ ಹಕ್ಕಿಯಂತೆ ಸ್ವಚ್ಛಂದವಾಗಿ ಹಾರಬೇಕೆಂದು ಬಯಸುತ್ತೀ ಎಂದು ಗೊತ್ತು. 16ರ ಹರೆಯಕ್ಕೆ ಕಾಲಿಟ್ಟಾಗಲೇ ಮಾಡ್ತಿದ್ದ ಕೆಲಸವನ್ನು ಇನ್ನು ಮುಂದೆ ನೀನು ಕಾನೂನಿನ ಅಡಿಯಲ್ಲಿಯೇ ಮಾಡಬಹುದು. ಅಡಲ್ಟ್‌ಹುಡ್‌ಗೆ ಸ್ವಾಗತ....' ಎಂದು ಹದಿ ವಯಸ್ಸು ದಾಟುತ್ತಿರುವ ಮಗಳು ಸುಹಾನಾಗೆ ಬಾಲಿವುಡ್ ಬಾದ್ ಷಾ ಶಾರುಕ್ ಖಾನ್ ವಿಶ್ ಮಾಡಿದ್ದಾರೆ.
ಇನ್‌ಸ್ಟಾಗ್ರಾಂ ಪೋಸ್ಟ್ ಮೂಲಕ ಮಗಳಿಗೆ ಹುಟ್ಟುಹಬ್ಬದ ಶುಭ ಕೋರಿದ ಶಾರುಕ್, ಬೆಸ್ಟ್ ಡ್ಯಾಡ್ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಅಮ್ಮನ ಬೆಚ್ಚಗಿನ ಪ್ರೀತಿಗಿಂತ ಅಪ್ಪನ ಆದೇಶ ತುಂಬಿದ ಅಕ್ಕರೆ ಮಕ್ಕಳಿಗೆ ವಿಭಿನ್ನ ಸುಖ ನೀಡುತ್ತದೆ. ಆ ಅಕ್ಕರೆಯನ್ನು ಒಂದೇ ಒಂದು ಕುಹಕವಾಗಿರುವ, ಪ್ರೀತಿ ತುಂಬಿದ ಮೆಸೇಜ್ ಮೂಲಕ ಸುಹಾನಾಗೆ ತಂದೆ ಶಾರುಕ್ ತಲುಪಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.