ನೀಲಿತಾರೆ ಸನ್ನಿ ಲಿಯೋನ್ ಈಗ ವೀರ ಮಹಾದೇವಿಯಾಗಿದ್ದಾಳೆ!

Published : May 24, 2018, 03:38 PM IST
ನೀಲಿತಾರೆ ಸನ್ನಿ ಲಿಯೋನ್  ಈಗ ವೀರ ಮಹಾದೇವಿಯಾಗಿದ್ದಾಳೆ!

ಸಾರಾಂಶ

‘ವೀರ ಮಹಾದೇವಿ’ ಎಂಬ ಕನ್ನಡ ಹೆಸರಿನ ಪೋಸ್ಟರ್‌ಗಳನ್ನು ನೀವು ಅಲ್ಲಲ್ಲಿ ನೋಡಿರುತ್ತೀರಿ. ನೋಡಿ ಅಚ್ಚರಿಯೂ ಆಗುತ್ತೀರಿ. ಅದಕ್ಕೆ ಕಾರಣ ಪೋಸ್ಟರ್‌ಗಳಲ್ಲಿ  ಕಾಣಿಸಿಕೊಂಡಿರುವ ಸನ್ನಿ ಲಿಯೋನ್. 

‘ವೀರ ಮಹಾದೇವಿ’ ಎಂಬ ಕನ್ನಡ ಹೆಸರಿನ ಪೋಸ್ಟರ್‌ಗಳನ್ನು ನೀವು ಅಲ್ಲಲ್ಲಿ ನೋಡಿರುತ್ತೀರಿ. ನೋಡಿ ಅಚ್ಚರಿಯೂ ಆಗುತ್ತೀರಿ. ಅದಕ್ಕೆ ಕಾರಣ ಪೋಸ್ಟರ್‌ಗಳಲ್ಲಿ ಕಾಣಿಸಿಕೊಂಡಿರುವ ಸನ್ನಿ ಲಿಯೋನ್.

ಆಧುನಿಕ ದಿರಿಸುಗಳಲ್ಲೇ ಕಾಣಿಸಿಕೊಳ್ಳುತ್ತಿದ್ದ  ಸನ್ನಿ ಲಿಯೋನ್ ಈ ಸಲ ಮಾತ್ರ ಯುದ್ಧ  ಭೂಮಿಯಲ್ಲಿ ಖಡ್ಗ ಹಿಡಿದುಕೊಂಡಿದ್ದಾರೆ. ನೋಡಿದವರನೇಕರು ಇದು ಡಬ್ಬಿಂಗ್ ಸಿನಿಮಾ ಅಂದುಕೊಂಡಿದ್ದರು. ಆದರೆ ಇದು ಬೇರೆ ಯಾವುದೋ ಭಾಷೆಯಿಂದ ಡಬ್ ಆಗುತ್ತಿರುವ ಸಿನಿಮಾ ಅಲ್ಲ. ಕನ್ನಡ ಸೇರಿದಂತೆ ಏಕಕಾಲಕ್ಕೆ ಐದು ಭಾಷೆಗಳಲ್ಲಿ ತಯಾರಾಗುತ್ತಿರುವ  ಸಿನಿಮಾ. ಸದ್ಯಕ್ಕೆ ಶೂಟಿಂಗ್ ಹಂತದಲ್ಲಿರುವ ಈ ಚಿತ್ರಕ್ಕೆ ಬೆಂಗಳೂರು, ಮೈಸೂರು ಸೇರಿದಂತೆ ಉತ್ತರ ಕರ್ನಾಟಕದ ಕೆಲ ಭಾಗಗಳಲ್ಲಿ  ಚಿತ್ರೀಕರಣ ನಡೆಯಲಿದೆ.

100 ಕೋಟಿ ರೂಪಾಯಿ ವೆಚ್ಚದಲ್ಲಿ ಸಿದ್ದವಾಗುತ್ತಿರುವ ಈ ಐತಿಹಾಸಿಕ ನೆರಳಿನ ಚಿತ್ರಕ್ಕೆ ಸಿ ವಡಿವುದೈಯನ್ ಎಂಬುವವರು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಪೋಸ್ಸೇ ಸ್ಟೀಫನ್  ನಿರ್ಮಾಣ ಮಾಡುತ್ತಿದ್ದಾರೆ. 150 ದಿವಸಗಳ ಚಿತ್ರೀಕರಣ ನಡೆಯಲಿದೆ. ವೀರ ಮಹಾದೇವಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಸನ್ನಿ ಲಿಯೋನ್ ಲುಕ್ ಈಗಾಗಲೇ ಬಿಡುಗಡೆಯಾಗಿದೆ.

ಕನ್ನಡ, ತೆಲುಗು, ಮಲಯಾಳಂ, ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಲಾಗುತ್ತಿದೆ. ಎಲ್ಲಾ ಭಾಷೆಗೂ ಸಲ್ಲುವಂತಹ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಈ ಚಿತ್ರದ ಯುದ್ಧ ಸನ್ನಿವೇಶಗಳಿಗೆ ಆಂಧ್ರ ಪ್ರದೇಶ, ಕೇರಳ, ತಮಿಳುನಾಡು ರಾಜ್ಯಗಳಿಂದ ಕುದುರೆ ಹಾಗೂ ಆನೆಳನ್ನು ತರಿಸಿ ಚಿತ್ರೀಕರಣ ಮಾಡಲಾಗುವುದು ಎಂದು ಮೂಲಗಳು ಹೇಳಿವೆ. ಕೇರಳ ರಾಜ್ಯದ ಕಾಡುಗಳಲ್ಲಿ ಚಿತ್ರೀಕರಣ ನಡೆಯಲಿದೆ.   

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಸಮರ್ಜಿತ್ ಲಂಕೇಶ್-ಮೋಹನ್ ಲಾಲ್ ಜೋಡಿ: ವೃಷಭ ಚಿತ್ರದ ಅದ್ದೂರಿ ಟ್ರೇಲರ್ ಅನಾವರಣ
ಕ್ಯಾಪ್ಟನ್ಸಿ ಟಾಸ್ಕ್‌ಗಾಗಿ ರಕ್ತ ಹರಿಸಿದ ಸ್ಪರ್ಧಿಗಳು: ರಜತ್-ಚೈತ್ರಾ ನಡುವೆ ತಂದಿಕ್ಕಿ ತಮಾಷೆ ನೋಡಿದ ಗಿಲ್ಲಿ