ಕಮಲ್ ಹಾಸನ್'ಗೆ ತಿರುಗೇಟು ನೀಡಿದ ಜೈಟ್ಲಿ

By Suvarna Web DeskFirst Published Jun 5, 2017, 9:43 PM IST
Highlights

ಜಿಎಸ್‌‌ಟಿ ತೆರಿಗೆ, ಪ್ರಾದೇಶಿಕ ಸಿನಿಮಾಗಳ ಮೇಲೆ ಪರಿಣಾಮ ಬೀರಲಿದ್ದು, ಕೇಂದ್ರ ಸರ್ಕಾರ ತೆರಿಗೆಯನ್ನು ಶೇ. 12 ಅಥವಾ 15ಕ್ಕೆ ಇಳಿಸದಿದ್ದರೆ ಸಿನಿಮಾ ರಂಗವನ್ನು ತ್ಯಜಿಸುವುದಾಗಿ ಕಮಲ್‌ ಹಾಸನ್‌ ಎಚ್ಚರಿಸಿದ್ದರು.

ನವದೆಹಲಿ(ಜೂ.05): ಸರಕು ಮತ್ತು ಸೇವಾ ತೆರಿಗೆಯಲ್ಲಿ ಕೇಂದ್ರ ಸರ್ಕಾರ ಪ್ರಾದೇಶಿಕ ಭಾಷೆಯ ಸಿನಿಮಾಗಳ ಮೇಲೆ ಶೇ. 28 ರಷ್ಟು ತೆರಿಗೆ ಹೆರಿದ್ದಕ್ಕೆ ನಟ ಕಮಲ್‌ ಹಾಸನ್‌ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಇದೀಗ ಕಮಲ್‌ ಹಾಸನ್​​ಗೆ ಕೇಂದ್ರ ಸಚಿವ ಅರುಣ್ ಜೈಟ್ಲಿ ತಿರುಗೇಟು ನೀಡಿದ್ದಾರೆ. ಮಾಧ್ಯಮಗಳನ್ನು ಬಳಸಿಕೊಂಡು ಸರ್ಕಾರದ ಮೇಲೆ ಒತ್ತಡ ಹೇರುವುದರಿಂದ ಯಾವುದೇ ಬದಲಾವಣೆ ಆಗಲ್ಲ. ಪ್ರಚಾರದಿಂದ ಸರ್ಕಾರ ಯಾವುದೇ ಬದಲಾವಣೆ ಮಾಡಲ್ಲ. ನಾವು ಯಾರಿಗೂ ಭಯ ಪಡಬೇಕಿಲ್ಲ ಎಂದು ಕಮಲ್ ಹಾಸನ್ ಹೇಳಿಕೆಗೆ ಜೈಟ್ಲಿ  ಪ್ರತಿಕ್ರಿಯೆ ನೀಡಿದ್ದಾರೆ. ಈ ಮೊದಲು ಸಿನಿಮಾ ತೆರಿಗೆ ಶೇ.19ರಷ್ಟಿತ್ತು. ಇದೀಗ ಜಿಎಸ್‌ಟಿ ಅಡಿ ಶೇ.28ಕ್ಕೆ ಬಂದಿದೆ ಎಂದು ಜೈಟ್ಲಿ ಉತ್ತರಿಸಿದರು. ಜಿಎಸ್‌‌ಟಿ ತೆರಿಗೆ, ಪ್ರಾದೇಶಿಕ ಸಿನಿಮಾಗಳ ಮೇಲೆ ಪರಿಣಾಮ ಬೀರಲಿದ್ದು, ಕೇಂದ್ರ ಸರ್ಕಾರ ತೆರಿಗೆಯನ್ನು ಶೇ. 12 ಅಥವಾ 15ಕ್ಕೆ ಇಳಿಸದಿದ್ದರೆ ಸಿನಿಮಾ ರಂಗವನ್ನು ತ್ಯಜಿಸುವುದಾಗಿ ಕಮಲ್‌ ಹಾಸನ್‌ ಎಚ್ಚರಿಸಿದ್ದರು.

click me!