ರಕ್ಷಿತ್ ಶೆಟ್ಟಿ ಹೇಳಿದ ರಿಷಭ್ ಶೆಟ್ಟಿಯ ಲವ್ ಸ್ಟೋರಿ

Published : Jun 06, 2017, 10:35 AM ISTUpdated : Apr 11, 2018, 12:50 PM IST
ರಕ್ಷಿತ್ ಶೆಟ್ಟಿ ಹೇಳಿದ ರಿಷಭ್ ಶೆಟ್ಟಿಯ ಲವ್ ಸ್ಟೋರಿ

ಸಾರಾಂಶ

ನಿರ್ದೇಶಕ ರಿಷಭ್‌ ಶೆಟ್ಟಿತುಂಬಾ ಖುಷಿಯಲ್ಲಿದ್ದಾರೆ. ಅದಕ್ಕೆ ಎರಡು ಕಾರಣ. ಒಂದು ಅವರು ನಿರ್ದೇಶಿಸಿದ ‘ಕಿರಿಕ್‌ ಪಾರ್ಟಿ' ಸಿನಿಮಾ ಸೂಪರ್‌ ಡ್ಯೂಪರ್‌ ಹಿಟ್‌ ಆಗಿದ್ದು. ಇನ್ನೊಂದು ಅವರು ಮೆಚ್ಚಿದ ಹುಡುಗಿಯ ಜೊತೆ ಮದುವೆ ಆಗಿದ್ದು. ರಿಷಭ್‌ ಇತ್ತೀಚೆಗೆ ಪ್ರಗತಿ ಶೆಟ್ಟಿಯವರ ಜೊತೆ ಮದುವೆಯಾದ ಸಂದರ್ಭದಲ್ಲಿ ತಮ್ಮದು ಅರೇಂಜ್‌ ಮ್ಯಾರೇಜ್‌ ಎಂದೇ ಹೇಳಿಕೊಂಡಿದ್ದರು. ಆದರೆ ಆ ಅರೇಂಜ್‌ ಮ್ಯಾರೇಜ್‌ ಹಿಂದೆಯೂ ಒಂದು ಲವ್‌ಸ್ಟೋರಿ ಇದೆ ಅನ್ನುವುದು ಗೊತ್ತಾಗಿದ್ದು ರಕ್ಷಿತ್‌ ಶೆಟ್ಟಿ ಹೇಳಿದಾಗಲೇ.

ಇತ್ತೀಚೆಗೆ ನಡೆದ ‘ಕಿರಿಕ್‌ ಪಾರ್ಟಿ' 150ನೇ ದಿನದ ಸಂಭ್ರಮಾಚರಣೆಯಲ್ಲಿ ಅಕುಲ್‌ ಬಾಲಾಜಿಯವರು ರಿಷಭ್‌ ಮತ್ತು ಪ್ರಗತಿಯವರನ್ನು ನಿಲ್ಲಿಸಿ ಲವ್‌ಸ್ಟೋರಿ ಹೇಳುವಂತೆ ಕಾಲೆಳೆಯುತ್ತಿದ್ದರು. ಆದರೆ ರಿಷಭ್‌ ಮತ್ತು ಪ್ರಗತಿ ತಮ್ಮದು ಅರೇಂಜ್‌ ಮ್ಯಾರೇಜು ಅಂತಲೇ ವಾದಿಸುತ್ತಿರುವಾಗ ಫಟಾ ಪೋಸ್ಟರ್‌ ನಿಕ್ಲಾ ಹೀರೋ ಎನ್ನುತ್ತಾ ಎಂಟ್ರಿ ಕೊಟ್ಟರಕ್ಷಿತ್‌ ಶೆಟ್ಟಿಹೇಳಿದ ಲವ್‌ ಸ್ಟೋರಿ ಹೀಗಿದೆ.

ಅದು ‘ರಿಕ್ಕಿ' ಸಿನಿಮಾದ ಬಿಡುಗಡೆ ಸಂದರ್ಭ. ರಿಷಭ್‌ ಮತ್ತು ರಕ್ಷಿತ್‌ ಅಭಿಮಾನಿಗಳು ಬಂದು ಫೋಟೋ ತೆಗೆಸಿಕೊಳ್ಳುತ್ತಿದ್ದರು. ಒಂದು ಕಡೆ ರಕ್ಷಿತ್‌ ಅಭಿಮಾನಿಗಳು ಮತ್ತೊಂದೆಡೆ ರಿಷಭ್‌ ಅಭಿಮಾನಿಗಳು. ಇಂಥದ್ದೊಂದು ಫ್ಯಾನ್‌ ಮೊಮೆಂಟಲ್ಲಿ ಒಂದು ಹುಡುಗಿ ರಿಷಭ್‌ ಹತ್ತಿರ ಬಂದು ಫೋಟೋ ಎಂದಳು. ರಿಷಭ್‌ ಓಕೆ ಎಂದರು. ಫೋಟೋ ಕ್ಲಿಕ್‌ ಆಯಿತು. ಸ್ವಲ್ಪ ಸಮಯದ ನಂತರ ಸೆಲ್ಫೀ ಕಾರ್ಯಕ್ರಮ ಮುಗಿಯಿತು. ಆದರೆ ಸೆಲ್ಫೀ ಹಿಂದಿನ ಕತೆ ಮುಗಿಯಲಿಲ್ಲ. ಸೆಲ್ಫೀ ಸಂದರ್ಭದಲ್ಲೇ ಆ ಹುಡುಗಿ ಹೆಸರು ಗೊತ್ತಾಗಿತ್ತು. ಆಕೆಯ ಹೆಸರೇ ಪ್ರಗತಿ ಶೆಟ್ಟಿ.

ಸಂಜೆ ಹೊತ್ತಲ್ಲಿ ಫೇಸ್‌ಬುಕ್ಕಿನಲ್ಲಿ ಮೆಸೇಜ್‌ ಶುರುವಾಯಿತು. ಆರಂಭದಲ್ಲಿ ಉಭಯ ಕುಶಲೋಪರಿ. ಅನಂತರ ಕಷ್ಟಸುಖ. ಉಳಿದಂತೆ ಬದುಕಿನ ಕುರಿತ ಗಾಢ ಚಿಂತನೆ. ಹೀಗೆಲ್ಲಾ ಆಗಿ ಮಿಡ್ಲಲ್ಲಿ ಲವ್ವಾಗೇ ಬಿಡ್ತು. ಆಮೇಲೆ ತಡ ಮಾಡುವುದೇತಕ್ಕೆ ಅಂತ ಮನೆಯಲ್ಲಿ ವಿಷಯ ತಿಳಿಸಿದರು. ಮನೆಯಲ್ಲೆಲ್ಲಾ ಒಪ್ಪಿ ಮದುವೆಯಾಯಿತು. ಹಾಗೇ ರಿಷಭ್‌ ಮತ್ತು ಪ್ರಗತಿ ಒಂದಾಗಿದ್ದು. 

ವರದಿ: ಕನ್ನಡಪ್ರಭ, ಸಿನಿವಾರ್ತೆ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
ದೇಶಮುದುರು ಹೊಡೆತಕ್ಕೆ ಅಡ್ರೆಸ್ ಇಲ್ಲದಂತಾದ ಪ್ರಭಾಸ್ ಸಿನಿಮಾ.. ಒಂದೇ ವರ್ಷ ಬ್ಯಾಕ್ ಟು ಬ್ಯಾಕ್ ಫ್ಲಾಪ್