
ಬೆಂಗಳೂರು : ‘ಶ್ರೀಮನ್ನಾರಾಯಾಣ’ ಚಿತ್ರದ ಚಿತ್ರೀಕರಣದ ವೇಳೆ ನಟ ರಕ್ಷಿತ್ ಶೆಟ್ಟಿಕುದುರೆ ಸವಾರಿ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಆಯ ತಪ್ಪಿ ಬಿದ್ದು ಗಾಯಗೊಂಡಿದ್ದಾರೆನ್ನಲಾದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬೆಂಗಳೂರಿನ ಕಂಠೀರವ ಸ್ಟುಡಿಯೋ ಆವರಣದಲ್ಲಿ ಚಿತ್ರೀಕರಣ ನಡೆಯುತ್ತಿದ್ದಾಗ ಈ ಘಟನೆ ನಡೆದಿದೆ ಎಂಬ ಊಹಾಪೋಹವಿದೆ.ಆದರೆ, ಇದು ದೊಡ್ಡ ಪ್ರಮಾಣದಲ್ಲಿ ಸದ್ದು ಮಾಡುತ್ತಿದ್ದಂತೆಯೇ ಎಚ್ಚೆತ್ತಿರುವ ಚಿತ್ರ ತಂಡ ‘ಈ ಸುದ್ದಿಯಲ್ಲಿ ಸತ್ಯಾಂಶವಿಲ್ಲ’ ಎಂದು ಸ್ಪಷ್ಟನೆ ನೀಡಿದೆ.
‘ಇದು ಎರಡು ತಿಂಗಳ ಹಿಂದೆಯೇ ನಡೆದ ಘಟನೆ ಮಾಧ್ಯಮಗಳಲ್ಲಿ ಸುದ್ದಿಯಾದಂತೆಯೇ ಚಿತ್ರೀಕರಣದ ವೇಳೆ ನಡೆಯಿತ್ತೆನ್ನಲಾದ ಆ ಘಟನೆಯಿಂದ ನಾಯಕ ರಕ್ಷಿತ್ ಶೆಟ್ಟಿಅವರಿಗಾಗಲಿ ಅಥವಾ ಅವರು ಸವಾರಿ ಮಾಡುತ್ತಿದ್ದ ಕುದುರೆಗಾಗಲಿ ಯಾವುದೇ ತರಹದ ಗಾಯ ಆಗಿಲ್ಲ. ಚಿಕ್ಕದೊಂದು ಘಟನೆಯನ್ನು ಸುಮ್ಮನೆ ವೈಭವೀಕರಿಸಲಾಗುತ್ತಿದೆ’ ಎಂದು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಸ್ಪಷ್ಟನೆ ನೀಡಿದ್ದಾರೆ.
‘ಆ ದಿನ ಆಗಿದ್ದು ಇಷ್ಟುಮಾತ್ರ. ಚಿತ್ರೀಕರಣ ನಡೆಯುತ್ತಿದ್ದಾಗ ರಕ್ಷಿತ್, ಕುದುರೆ ಸವಾರಿ ಮಾಡಬೇಕಿತ್ತು. ಕುದುರೆ ಏರಲು ಹೋದಾಗ ಕೊಂಚ ಜಾರಿದರು. ತಕ್ಷಣವೇ ಮತ್ತೊಂದು ಟೇಕ್ ತೆಗೆದುಕೊಂಡು ಚಿತ್ರೀಕರಣ ಮುಗಿಸಿದರು. ಅದು ಬಿಟ್ಟರೆ ಅವರು ಕುದುರೆ ಹತ್ತಿ ಅಲ್ಲಿಂದ ಬಿದ್ದಿದ್ದಾರೆನ್ನುವುದಾಗಲಿ, ಆ ಘಟನೆಯಿಂದ ಗಾಯಗೊಂಡಿದ್ದಾರೆನ್ನುವುದಾಗಲಿ ಯಾವುದರಲ್ಲೂ ಸತ್ಯಾಂಶವಿಲ್ಲ’ ಎಂದರು ಅವರು ತಿಳಿಸಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.