ಬೆತ್ತಲೆ ಮದುವೆ ಆಗ್ತಾರಂತೆ ರಾಖಿ ಸಾವಂತ್, ಉದ್ದೇಶ ಮಾತ್ರ...!?

Published : Dec 01, 2018, 12:55 PM IST
ಬೆತ್ತಲೆ ಮದುವೆ ಆಗ್ತಾರಂತೆ ರಾಖಿ ಸಾವಂತ್, ಉದ್ದೇಶ ಮಾತ್ರ...!?

ಸಾರಾಂಶ

ಬಾಲಿವುಡ್‌ನ ವಿವಾದಿತ ನಟಿ ರಾಖಿ ಸಾವಂತ್ ಶೀಘ್ರವೇ ದಾಂಪತ್ಯ ಜೀವನಕ್ಕೆ ಕಾಲಿರಿಸುತ್ತಾರಂತೆ! ಆದರೆ, ಈ ಮದುವೆ ಮಾಡಿಕೊಳ್ಳುವ ರೀತಿಯೂ ಏಕೋ ವಿವಾದಕ್ಕೆ ಕಾರಣವಾಗುವ ಲಕ್ಷಣಗಳಿವೆ...!?

ಬಾಲಿವುಡ್ ನಟಿ ರಾಖಿ ಸಾವಂತ್‌ಗೆ ಮದುವೆ ಆಸೆ ಬಂದಿದ್ದು ಓಕೆ! ಆದರೆ, ಹೀಗೆ ಮದುವೆಯಾಗಬೇಕೆಂದು ಆಸೆ ಏಕೆ ಬಂತೋ ಕಾಣೆ? ಅದೂ ಅವರು ನೀಡುತ್ತಿರುವ ಕಾರಣವೂ ವಿಭಿನ್ನ....

ವಿವಾದಗಳಿಂದಲೇ ಸದ್ದಾಗುತ್ತಿರುವ ರಾಖಿ ಇದೀಗ ಸದ್ದಿಲ್ಲದಂತೆ ಮಾದುವೆಯಾಗೋ ರೀತಿಯ ಸುದ್ದಿಯೂ ಸದ್ದು ಮಾಡುತ್ತಿದೆ. ದುಡ್ಡು ಉಳಿಸುವ ಸಲುವಾಗಿ ಬೆತ್ತಲೆಯಾಗಿ ಮದುವೆ ಆಗುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ. ರಾಖಿ ಭಾವಿ ಪತಿ ಇನ್‌ಸ್ಟಾಗ್ರಾಂನಲ್ಲಿ ಹಾಕಿಕೊಂಡಿರುವ ಈ ಪೋಸ್ಟ್, ವೈರಲ್ ಆಗುತ್ತಿದೆ. ಆದರೆ, ಇಂಥದ್ದೊಂದು ನಿರ್ಧಾರಕ್ಕೆ ಬಂದಿರುವ ಹಿಂದೆ ಮಹತ್ವವಾದ ಉದ್ದೇಶವಿದೆ ಎನ್ನುವುದು ನಿಜಕ್ಕೂ ಆಶ್ಚರ್ಯ ತರುವಂಥದ್ದು.

'ಇಂಡಿಯಾ ಗಾಟ್ ಟ್ಯಾಲೆಂಟ್..' ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡು ಪ್ರಸಿದ್ಧರಾಗಿರುವ ದೀಪಕ್ ಕಲಾಲ್ ಜತೆ ಡಿ.31ರಂದು ಅಮೆರಿಕದ ಲಾಸ್ ಏಂಜೇಲಿಸ್‌ನಲ್ಲಿ ಸಪ್ತಪದಿ ತುಳಿಯುತ್ತಿರುವ ರಾಖಿ ಬೆತ್ತಲೆಯಾಗಿಯೇ ದಾಂಪತ್ಯಕ್ಕೆ ಕಾಲಿಡುತ್ತಾರಂತೆ!

ರಾಖಿಗೆ ಕೂಡಿ ಬಂತು ಕಂಕಣ ಭಾಗ್ಯ! ಯಾರು ಆ ವರ ಗೊತ್ತಾ?

ಬಟ್ಟೆ ದುಡ್ಡು ಬಡವರ ಹೊಟ್ಟೆಗೆ! ‘ರಾಖಿ ಹಾಗೂ ನಾನು ಬೆತ್ತಲೆ ಮದುವೆಯಾಗಲು ಮುಂದಾಗಿದ್ದೇವೆ. ಅದ್ಧೂರಿ ಬಟ್ಟೆ ಮೇಲೆ ಸುರಿಯುವ ಹಣವನ್ನು ಕಾಂಬೋಡಿಯಾ ಹಾಗೂ ಸೋಮಾಲಿಯಾದಲ್ಲಿರುವ ಬಡವರಿಗೆ ದಾನ ಮಾಡಬೇಕೆಂದು ನಿರ್ಧರಿಸಿದ್ದೇವೆ. ಥ್ಯಾಂಕ್ಸ್ ಮೈ ಬೇಬಿ ರಾಖಿ ಸಾವಂತ್, ನೀನು ಬೆತ್ತಲೆ ಮದುವೆಗೆ ಒಪ್ಪಿದಕ್ಕೆ. ಐ ಆ್ಯಮ್ ಪ್ರೌಡ್ ಆಫ್ ಯು ಬೇಬಿ’ ಎಂದು ಕಲಾಲ್ ಹೇಳಿ ಕೊಂಡಿದ್ದಾರೆ.

ಕಲಾಲ್ ಮಾಡಿರುವ ಪೋಸ್ಟನ್ನೇ ರಾಖಿ ಸಹ ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ವಿಭಿನ್ನ ಪ್ರತಿಕ್ರಿಯೆಗಳೂ ವ್ಯಕ್ತವಾಗುತ್ತಿದ್ದು, 'ಯಾರೀ ಅದೃಷ್ಟವಂತ..' ಎಂದು ಕೆಲವರು ಕೇಳಿದರೆ, 'ಪ್ರಳಯವಾಗುವ ಲಕ್ಷಣಗಳಿವು...'ಎಂ ದೂ ಕೆಲವರು ಕಾಮೆಂಟ್ ಮಾಡಿದ್ದಾರೆ.

ಈಗಾಗಲೇ ರಾಖಿ ಕಲಾಲ್ ಜೋಡಿ ಹಾಲಿವುಡ್ ದಿಗ್ಗಜರನ್ನು ಮದುವೆಗೆ ಆಹ್ವಾನಿಸಿದ್ದಾಗಿ ಹೇಳಿಕೊಂಡಿದ್ದು, ಬಾಲಿವುಡ್‌ನಲ್ಲಿ ಶಾರುಖ್ ಹಾಗೂ ಕರಣ್ ಜೋಹಾರ್ ಅವರನ್ನೂ ಆಹ್ವಾನಿಸಿದ್ದಾರೆ.

ಮದುವೆಗೂ ಮುನ್ನ ’ಕನ್ಯತ್ವ’ ಪ್ರೂವ್ ಮಾಡಿದ ರಾಖಿ

ಇನ್ನು ಏನೇನು ಮಾಡುತ್ತಾರೋ ಈ ರಾಖಿ-ಕಲಾಲ್ ಜೋಡಿ ಕಾದು ನೋಡಬೇಕು...

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ಅಂಕಿತಾ ಜೊತೆ ಡಿಸೆಂಬರ್‌ನಲ್ಲಿ ಪಕ್ಕಾ ಮದುವೆ' ಎಂದಿದ್ದ ಸುಶಾಂತ್ ಸಿಂಗ್ ರಜಪೂತ್! ಆದರೆ.. ಆಮೇಲೇನಾಯ್ತು?
Shobhaa De: ಸೈಫ್ ಅಲಿ ಖಾನ್ ಚಾಕು ಇರಿತದ ಪ್ರಕರಣ; ಹಲವು ಸಂಶಯ ಹೇಳಿ ಪ್ರಶ್ನೆಗಳನ್ನು ಕೇಳಿದ ಶೋಭಾ ಡೇ!