ರಾಖಿಗೆ ಕೂಡಿ ಬಂತು ಕಂಕಣ ಭಾಗ್ಯ! ಯಾರು ಆ ವರ ಗೊತ್ತಾ?
ಯಾವಾಗಲೂ ವಿವಾದಗಳಲ್ಲೇ ಹೆಸರು ಮಾಡಿರುವ ರಾಖಿ ಸಾವಂತ್ ಈಗ ಮದುವೆ ಆಗುತ್ತಿದ್ದಾರೆ! ಅಷ್ಟಕ್ಕೂ ಲಕ್ಕಿ ಬಾಯ್ ಯಾರು ಅಂತ ನೀವು ನೋಡಲೇಬೇಕು...
ರಾಖಿ ಸಾವಂತ್ ಸಿನಿಮಾಗಳಲ್ಲಿ ಹೆಸರು ಮಾಡಿದ್ದಕ್ಕಿಂತ ಹೆಚ್ಚಾಗಿ ಹೆಸರು ಮಾಡಿದ್ದು ವಿವಾದಗಳಿಂದಲೇ. ಮಾಡಿದ್ದೆಲ್ಲವೂ ಫ್ಲಾಪ್ ಸಿನಿಮಾಗಳು. ಸಿನಿಮಾಗಳು ಹೆಸರು ತಂದು ಕೊಡದಿದ್ದರೂ ಸೆಕ್ಸಿ ಲುಕ್ ಹೆಸರು ತಂದಿಕೊಟ್ಟಿದೆ. ಇತ್ತೀಚಿಗೆ ತನುಶ್ರೀ ದತ್ತಾ ಮೇಲೆ ಅತ್ಯಾಚಾರದ ಆರೋಪ ಮಾಡಿ #MeToo ಎಂದು ಹೇಳಿಕೊಂಡಿದ್ದರು.
ಹೋದಲ್ಲೆಲ್ಲಾ ಮಾಡೋದು ಕಿರಿಕ್ ಗಳೇ. ವಿದೇಶಿ ಬಾಕ್ಸರ್ ಜೊತೆ ಫೈಟ್ ಮಾಡಿ ಆಸ್ಪತ್ರೆಗೆ ಸೇರಿಕೊಂಡಿದ್ದಳು. ಇದಾದ ನಂತರ ಸೆಕ್ಸ್ ಲೈಫ್ ಗೆ ಗುಡ್ ಬೈ ಹೇಳಿದ್ದಳು. ಇಷ್ಟೆಲ್ಲಾ ಹೈ ಡ್ರಾಮ ಆದ ನಂತರ ಮದುವೆ ಆಸೆ ಬಿಚ್ಚಿಟ್ಟಿದ್ದಾರೆ. ದಿನಾಂಕ ಹಾಗೂ ಮದುವೆ ಪತ್ರಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಅಷ್ಟಕ್ಕೂ ಇವಳನ್ನು ಮದುವೆಯಾಗುವ ಆ ಲಕ್ಕಿ ಬಾಯ್ ಯಾರು?
‘ಇಂಡಿಯಾಸ್ ಗಾಟ್ ಟ್ಯಾಲೆಂಟ್’ ಸೀಸನ್ 8 ರಲ್ಲಿ ಕಂಟೆಸ್ಟಂಟ್ ದೀಪಕ್ ಕಲಾಲ್. ಈ ಕಾರ್ಯಕ್ರಮದಲ್ಲಿ ಹೋಗಿದ್ದ ರಾಖಿಗೆ ಎಲ್ಲರ ಎದುರು ಪ್ರಪೋಸ್ ಮಾಡಿದ್ದರು ದೀಪಕ್. ತಕ್ಷಣವೇ ರಾಖಿ ಒಪ್ಪಿಕೊಂಡರು. ನಂತರ ಇಬ್ಬರು ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಮದುವೆ ಡಿಸೆಂಬರ್ ನಲ್ಲಿ ಎಂದು ಪತ್ರಿಕೆ ಹಂಚಿಕೊಂಡರು.
ಡಿಸೆಂಬರ್ 31 ರಂದು ಲಾಸ್ ಏಂಜಲೀಸ್‌ನಲ್ಲಿ ವಿವಾಹ ಆಗಲಿದ್ದು ಇದಕ್ಕೆ ಬಾಲಿವುಡ್ ಬಾದ್ ಶಾ ಶಾರುಕ್ ಹಾಗೂ ಕರಣ್ ಜೋಹರ್ ಭಾಗಿಯಾಗಲಿದ್ದಾರೆ