
ಕಿಡ್ನಿ ಸಂಬಂಧ ಕಾಯಿಲೆಗೆ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಪೊನ್ನಂಬಲ ಅವರಿಗೆ ಚಿಕಿತ್ಸೆಗೆ ಹಣದ ಕೊರತೆ ಉಂಟಾಗಿತ್ತು. ಇದನ್ನು ಅರಿತು ನಟ ರಜನೀಕಾಂತ್ ಪೊನ್ನಂಬಲಗೆ ನೆರವಾಗಿದ್ದಾರೆ.
ನಟ ಕಮಲ್ ಹಾಸನ್ ಅವರು ಪೊನ್ನಂಬಲ ಅವರ ಮಕ್ಕಳ ಶಿಕ್ಷಣವೆಚ್ಚವನ್ನು ಭರಿಸುವ ಭರವಸೆ ನೀಡಿದ್ದರು. ಇದೀಗ ರಜನಿ ಅವರೂ ನಟನಿಗೆ ನೆರವಾಗಿದ್ದಾರೆ. ಪೊನ್ನಂಬಲ ಜೊತೆಗೆ ರಜನಿಕಾಂತ್ ಮಾತನಾಡಿದ್ದಾರೆ.
'ಲಾಸ್ಟ್ ವಾರ್ನಿಂಗ್, ನನ್ನನ್ನು ಕಾಪಿ ಮಾಡ್ಬೇಡಿ': ನಟಿ ತ್ರಿಷಾಗೆ ಎಚ್ಚರಿಸಿದ ಮಾಡೆಲ್..!
ನೆರವಿನ ಮೊತ್ತವನ್ನು ಬಹಿರಂಗಪಡಿಸುತ್ತಿಲ್ಲ. ಹಾಗೇ ಅವರು ಬೇಗ ಗುಣಮುಖರಾಗಲಿ ಎಂದು ಅವರು ಹಾರೈಸಿದ್ದಾರೆ ಎಂದು ರಜನಿಕಾಂತ್ ಆಪ್ತ ರಿಯಾಸ್ ಅಹ್ಮದ್ ತಿಳಿಸಿದ್ದಾರೆ.
ಪೊನ್ನಂಬಲಂ ತಮ್ಮ ಪಿಆರ್ ಆಫೀಸರ್ ಮೂಲಕ ವಿಡಿಯೋ ರಿಲೀಸ್ ಮಾಡಿದ್ದರು. ಇದರಲ್ಲಿ ನಟ ಆಕ್ಸಿಜನ್ ಮಾಸ್ಕ್ ನೆರವಿನಿಂದ ಉಸಿರಾಡುತ್ತಿರುವುದು ಕಂಡು ಬಂದಿತ್ತು. ಸ್ಟಂಟ್ ಮ್ಯಾನ್ ಆಗಿ ಸಿನಿಮಾರಂಗಕ್ಕೆ ಕಾಲಿರಿಸಿದ ಪೊನ್ನಂಬಲಂ ಅವರು, ಮುತ್ತು, ಅರುಣಾಚಲಂ ಸಿನಿಮಾದಲ್ಲಿ ರಜನಿ ಜೊತೆ ನಟಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.