
ಬೆಂಗಳೂರು(ಮಾ.24): ಕನ್ನಡದ ರಾಜಕುಮಾರ ಅಬ್ಬರ ಶುರು ಆಗಿದೆ. ರಾಜ್ಯದ 300 ಥಿಯೇಟರ್ನಲ್ಲಿ ರಾಜರತ್ನನ ರಾಜಭಾರ ಆರಂಭಗೊಳ್ಳಲಿದೆ. ಕಾತರದಿಂದಲೇ ಕಾಯುತ್ತಿರುವ ಅಭಿಮಾನಿ ಬಳಗವೂ ರಾಜನ ಸ್ವಾಗತಕ್ಕೆ ಸಜ್ಜಾಗಿ ನಿಂತಿದೆ. ರಾಜ್ಯಾದ್ಯಂತ 300 ಥಿಯೇಟರ್ ಗಳಲ್ಲಿ ರಾಜಕುಮಾರನ ರಾಜಭಾರ ಶುರುವಾಗಲಿದೆ. ಬೆಳಗ್ಗೆ 7 ಗಂಟೆಯಿಂದಲೇ ಹಲವೆಡೆ ಚಿತ್ರ ಪ್ರದರ್ಶನವೂ ಶುರುವಾಗಿದೆ.
ರಾಜಕುಮಾರ ಪುನೀತ್ ಬದುಕಿನ ಮಹತ್ವದ ಚಿತ್ರವಾಗಿದ್ದು, ಇಡೀ ಅಪ್ಪು ಅಭಿಮಾನಿ ಬಳಗದಲ್ಲೂ ಅತೀ ಹೆಚ್ಚು ಕುತೂಹಲ ಕೆರಳಸಿದ್ದು, ಪುನೀತ್ ಡಾನ್ಸಿಂಗ್ ಟಾಲೆಂಟ್ ಈ ಚಿತ್ರದಲ್ಲಿ ಅನಾವರಣಗೊಂಡಿದೆ. ಕೌಟುಂಬಿಕ ಕಥೆ ಹೊಂದಿರುವ ರಾಜಕುಮಾರ ಚಿತ್ರವನ್ನ ಸಂತೋಷ್ ಆನಂದ್ ರಾಮ್ ನಿರ್ದೇಶನದ ಮಾಡಿದ್ದಾರೆ.
ಬಹುತಾರಾ ಬಳಗವೇ ಈ ಚಿತ್ರದಲ್ಲಿದೆ. ವಿ.ಹರಿಕೃಷ್ಣ ಸಂಗೀತ ಮೋಡಿ, ವಿಜಯ್ ಪ್ರಕಾಶ್ ಹಾಡಿರೋ ಬೊಂಬೆ ಹಾಡು ಎಲ್ಲರನ್ನೂ ಖುಷಿ ತಂದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.