33 ವರ್ಷಗಳ ನಂತರ ಸಿಕ್ಕ ಮ್ಯಾರೇಜ್ ಸರ್ಟಿಫಿಕೇಟ್; ಕಣ್ಣೀರು ಹಾಕಿದ ಪರಿಮಳಾ ಜಗ್ಗೇಶ್

Published : Mar 22, 2017, 09:00 AM ISTUpdated : Apr 11, 2018, 01:10 PM IST
33 ವರ್ಷಗಳ ನಂತರ ಸಿಕ್ಕ ಮ್ಯಾರೇಜ್ ಸರ್ಟಿಫಿಕೇಟ್; ಕಣ್ಣೀರು ಹಾಕಿದ ಪರಿಮಳಾ ಜಗ್ಗೇಶ್

ಸಾರಾಂಶ

ಅಂತೂ ಇಂತೂ ವೀಕೆಂಡ್‌ ವಿತ್‌ ರಮೇಶ್‌ ಕಾರ್ಯಕ್ರಮದಿಂದಾಗಿ ಜಗ್ಗೇಶ್‌ ದಂಪತಿ 33 ವರ್ಷಗಳ ಹಿಂದೆ ಹೋಗುವಂತಾಯಿತು. ಅವರ ಅಭಿಮಾನಿಗಳಿಗೆ ಈ ಸಾಹಸಕತೆಯನ್ನು ಮತ್ತೊಮ್ಮೆ ನೆನೆದು ಖುಷಿಪಡುವ ಅವಕಾಶ ದೊರಕಿತು.

ಜಗ್ಗೇಶ್‌ ರಿಜಿಸ್ಟರ್‌ ಮದುವೆಯಾಗಿ ಇವತ್ತಿಗೆ ಸರಿಯಾಗಿ 33 ವರ್ಷ. ಮೂವತ್ತಮೂರು ವರ್ಷಗಳ ಹಿಂದೇ ಇದೇ ದಿನ ಜಗ್ಗೇಶ್‌ ಅವರು ಪರಿಮಳಾ ಅವರ ಜೊತೆ ರಿಜಿಸ್ಟರ್‌ ಮದುವೆಯಾಗಿದ್ದರು. ಇದನ್ನು ಅವರ ಭಾಷೆಯಲ್ಲೇ ಹೇಳುವುದಾದರೆ ಎತ್ತಾಕಿಕೊಂಡು ಹೋಗಿ ಮದುವೆಯಾಗಿದ್ದರು. ಜಗ್ಗೇಶ್‌ ಅವರ ಈ ಸಾಹಸ ಕತೆ ಬಹುತೇಕರಿಗೆ ಗೊತ್ತಿದೆ. ಆ ಸಂದರ್ಭದಲ್ಲಿ ಪತ್ರಿಕೆಯಲ್ಲಿ ಕೂಡ ಸುದ್ದಿಯಾಗಿತ್ತು. ದೊಡ್ಡ ಗಲಾಟೆಯಾಗಿತ್ತು. ಈ ಗಲಿಬಿಲಿಯಿಂದಾಗಿ ಜಗ್ಗೇಶ್‌ ಮತ್ತು ಪರಿಮಳಾ ಅವರು ಮದುವೆ ನೋಂದಣಿ ಆಫೀಸಿನಲ್ಲಿ ತಮ್ಮ ಮ್ಯಾರೇಜ್‌ ಸರ್ಟಿಫಿಕೇಟ್‌ ತೆಗೆದುಕೊಳ್ಳುವುದನ್ನು ಮರೆತಿದ್ದರು. ಮದುವೆಯಾದ ನಂತರ ಆ ಕಡೆ ತಲೆ ಹಾಕಿಯೂ ಮಲಗಿರಲಿಲ್ಲ. ಹಾಗಾಗಿ ಈ ಮೂವತ್ತು ವರ್ಷಗಳಲ್ಲಿ ಅವರ ಮ್ಯಾರೇಜ್‌ ಸರ್ಟಿಫಿಕೇಟ್‌ ಅವರಿಗೆ ದೊರಕಿರಲಿಲ್ಲ.

ಇತ್ತೀಚೆಗೆ ವೀಕೆಂಡ್‌ ವಿತ್‌ ರಮೇಶ್‌ ಕಾರ್ಯಕ್ರಮದಲ್ಲಿ ಜಗ್ಗೇಶ್‌ ಭಾಗವಹಿಸಿದ್ದರು. ಕಾರ್ಯಕ್ರಮ ನಡೆಯುತ್ತಿದ್ದಂತೆಯೇ ರಮೇಶ್‌ ಅವರು ಜಗ್ಗೇಶ್‌ ಅವರ ಮ್ಯಾರೇಜ್‌ ಸರ್ಟಿಫಿಕೇಟ್‌ ತೋರಿಸಿದ್ದಾರೆ. ಅದನ್ನು ನೋಡಿ ಜಗ್ಗೇಶ್‌'ಗೆ ಪರಮಾಶ್ಚರ್ಯ. ಪರಿಮಳಾ ಜಗ್ಗೇಶ್‌ ಅವರಂತೂ ಕಣ್ಣೀರು ಹಾಕಿಬಿಟ್ಟರಂತೆ. ನಾವು ಮದುವೆಯಾಗಿದ್ದಕ್ಕೆ ಇದುವರೆಗೂ ಪುರಾವೆ ಇರಲಿಲ್ಲ ಅಂತ ಖುಷಿಯಾಗಿದ್ದಾರೆ.

ಅಂತೂ ಇಂತೂ ವೀಕೆಂಡ್‌ ವಿತ್‌ ರಮೇಶ್‌ ಕಾರ್ಯಕ್ರಮದಿಂದಾಗಿ ಜಗ್ಗೇಶ್‌ ದಂಪತಿ 33 ವರ್ಷಗಳ ಹಿಂದೆ ಹೋಗುವಂತಾಯಿತು. ಅವರ ಅಭಿಮಾನಿಗಳಿಗೆ ಈ ಸಾಹಸಕತೆಯನ್ನು ಮತ್ತೊಮ್ಮೆ ನೆನೆದು ಖುಷಿಪಡುವ ಅವಕಾಶ ದೊರಕಿತು.

epaper.kannadaprabha.in

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Boss ಬಗ್ಗೆ ನಂಬಲಸಾಧ್ಯ, ಯಾರೂ ಹೇಳದ ಗುಟ್ಟುಗಳನ್ನು ರಿವೀಲ್​ ಮಾಡಿದ ಅಭಿಷೇಕ್​ ಶ್ರೀಕಾಂತ್​
ಶಿರಸಿ ಸಾಯಿಬಾಬಾಗೆ ಬಲು ದುಬಾರಿಯ ಚಿನ್ನದ ಕಿರೀಟ ಅರ್ಪಿಸಿದ ನಟಿ ಮಾಲಾಶ್ರೀ: ಕಾರಣವೂ ರಿವೀಲ್​!