ಸುಕನ್ಯಾ ಎನ್. ಆರ್, ಪತ್ರಿಕೋದ್ಯಮ ವಿದ್ಯಾರ್ಥಿನಿ
ವಿವೇಕಾನಂದ ಕಾಲೇಜು ಪುತ್ತೂರು
ಮಾತು ಪ್ರತಿಯೊಬ್ಬ ಮನುಷ್ಯನ ಮನಸ್ಸಿನ ಭಾವನೆಗಳನ್ನು ಹೊರಹಾಕುವಲ್ಲಿ ವ್ಯಕ್ತಿಯ ವ್ಯಕ್ತಿತ್ವವನ್ನು ತಿಳಿಸಿಕೊಡುತ್ತದೆ. ನಾಲಿಗೆಗೆ ಮೂಳೆ ಇಲ್ಲ ನಿಜ ಆದರೆ ಮಾತಿನಲ್ಲಿ ಹಿಡಿತಾವಿರಬೇಕು ಟೇಕ್ ಇಟ್ ಈಸಿ ಅಂತ ಹೇಳುತ್ತಲೇ 92.7 ಬಿಗ್ ಎಫ್ಎಂ ನಲ್ಲಿ ಸತತವಾಗಿ ಹತ್ತು ವರುಷದಿಂದ ಕರಾವಳಿ(Coastal Karnataka) ಹಾಗೂ ಘಟ್ಟ ಪ್ರದೇಶದ ಜನರ ಮೆಚ್ಚುಗೆಗೆ ಪಾತ್ರರಾಗಿ ಮಾತಿನಲ್ಲೇ ಮನೆ ಮಾಡಿ ಜನರ ಮನ ಗೆದ್ದಿರುವ ವ್ಯಕ್ತಿ ಆರ್ ಜೆ ಎರಲ್.
undefined
ಪಟಪಟ್ ಮಾತಿನ ಮೂಲಕ ಜನರನ್ನ ಮೋಡಿ ಮಾಡುತ್ತಾ ವಿಭಿನ್ನವಾದ ಆಲೋಚನೆ ಮತ್ತು ಮಾತಿನ ದಾಟಿಗೆ ಮನಸೋತ ಅದೆಷ್ಟೋ ಅಭಿಮಾನಿಗಳು ಇವರನ್ನ ಇಷ್ಟಪಡುತ್ತಾರೆ.
92.7 ಬಿಗ್ ಎಫ್ಎಂ ನಲ್ಲಿ ಪ್ರತಿ ಸಂಜೆ 5 ಗಂಟೆಗೆ ಆರಂಭ ವಾಗುವ 'ಟೇಕ್ ಇಟ್ ಈಸ್ ' ಎಂಬ ಪ್ರಸಿದ್ಧ ರೇಡಿಯೋ(Radio) ಕಾರ್ಯಕ್ರಮ ಕೇಳುಗರ ನೆಚ್ಚಿನ ನಿರೂಪಕನಾಗಿ ಸತತ 10 ವರ್ಷ ರೇಡಿಯೋ ಪ್ರಿಯರನ್ನು ಮನರಂಜಿಸುತ್ತಿದ್ದಾರೆ
ಎರಲ್ ನಡೆದು ಬಂದ ಹಾದಿ
ಇವರು ಮೂಲತಃ ಉಡುಪಿ(Udupi) ಜಿಲ್ಲೆಯ ಉದ್ಯಾವರ ಗ್ರಾಮದವರು. ತಮ್ಮ ಬಾಲ್ಯ ಜೀವನವನ್ನು ತಾಯಿಯೊಂದಿಗೆ ಕಳೆದರು. ತಮ್ಮ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಉದ್ಯಾವರ ಸೈಂಟ್ ಫ್ರಾನ್ಸಿಸ್ ಶಾಲೆಯಲ್ಲಿ, ಹಾಗೂ ತಮ್ಮ ಕಾಲೇಜು ಶಿಕ್ಷಣ ವನ್ನ ಉಡುಪಿ ಜಿಲ್ಲೆಯ ಪೂರ್ಣ ಪ್ರಜ್ಞಾ ಕಾಲೇಜಿನಲ್ಲಿ ಹಾಗೂ ಮಣಿಪಾಲದ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ ನಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು.
ರೇಡಿಯೋ ಕ್ಷೇತ್ರದ ಪಯಣ
ಎರಲ್ ಎಂದು ಕೂಡ ತಾನು ರೇಡಿಯೋ ಕ್ಷೇತ್ರಕ್ಕೆ ಬರುವುದಾಗಿ ಊಹೆ ಸಮೇತ ಮಾಡಿಕೊಂಡವರಲ್ಲ ತಮ್ಮ ವಿದ್ಯಾಭ್ಯಾಸದ ನಂತರ 92.7 ಬಿಗ್ ಎಫ್ಎಂ ನಲ್ಲಿ ಆರ್ ಜೆRadio Jockey() ಯಾಗಿ ಸೇರಿಕೊಂಡರು ರೇಡಿಯೋ ಜಾಕಿಯಾಗುವ ಕನಸನ್ನೇ ಕಾಣದ ಎರಲ್ ಅವರು ಆರ್ ಜೆ ಆದ ಬಳಿಕ ತಮ್ಮ ಜೀವನವೇ ಬದಲಾಯಿತು ಎಂದು ಹೇಳುತ್ತಾರೆ.
ಬಿಗ್ ಎಫ್ಎಂ ನಲ್ಲಿ 'ಯು ಮಿ ಆಂಡ್ ಲವ್ ಸಾಂಗ್' ಎಂಬ ಕಾರ್ಯಕ್ರಮವನ್ನು ನಡೆಸಿ ಕೊಂಡುಬರುತಿದ್ದ ಇವರು ಈ ಕಾರ್ಯಕ್ರಮದ ಮೂಲಕ ಜನರ ಮನಸ್ಸಿಗೆ ತುಂಬಾ ಹತ್ತಿರವಾದರು.
'ಅರಸು' ನಟಿ ಮೀರಾ ಜಾಸ್ಮಿನ್ ಕಮ್‌ಬ್ಯಾಕ್; ನಟಿ ಕೈಯಲ್ಲಿದೆ ಗೋಲ್ಡನ್ ವೀಸಾ!
ರೇಡಿಯೋ ಕ್ಷೇತ್ರದಲ್ಲಿ ಮಾತ್ರವಲ್ಲದೆ ನಾಟಕ ಕಲಾವಿದನಾಗಿ ,ದೇಶ_ ವಿದೇಶಗಳಲ್ಲಿ ಕಾರ್ಯಕ್ರಮ ನಿರೂಪಣೆ ಮಾಡುತ್ತಾ ,ಕತೆ ಮತ್ತು ಸಾಹಿತ್ಯ ಬರಹಗಾರನಾಗಿ, ಹಲವಾರು ಜಾಹೀರಾತುಗಳಿಗೆ ದ್ವನಿ ಕೊಡುತ್ತಾ, ಸಿನಿರಂಗದಲ್ಲಿ ಕೂಡ ನಟಿಸಿದ್ದು, ಜೊತೆಗೆ ಸಮಾಜಸೇವ ಕಾರ್ಯಗಳನ್ನು ಮಾಡುತ್ತಿದ್ದಾರೆ
ಹೆಸರಾಂತ ನಟ _ ನಟಿ _ ಕ್ರಿಕೆಟ್ ಆಟಗಾರರ ಬೇಟಿ
ಖ್ಯಾತ ಆಟಗಾರ್ತಿ ಸೈನಾ ನೆಹ್ವಾಲ್ ಅವರ ವಿವಾಹ ಕಾರ್ಯಕರ್ಮದಲ್ಲಿ ಭಾಗಿಯಾಗಿದ್ದು, ವಿರಾಟ್ ಕೊಹ್ಲಿ ಹಸ್ತಾಕ್ಷರ ಇರುವ ಬ್ಯಾಟ್ ನ್ನೂ ಉಡುಗೊರೆಯಾಗಿ ಪಡೆದ್ದಿದು, ಜಾನ್ ಅಬ್ರಹಮ್, ಬಡವರ ಬಂದು ಎಂದೇ ಹೆಸರಾಗಿರುವ ಬಾಲಿವುಡ್ ನಟ ಸೂದ್, ಟೆನಿಸ್ ತಾರೆ ಸಾನಿಯಾ ಮಿರ್ಜಾ ಅನೇಕ ಹೆಸರಾಂತ ಕಲಾವಿದರ ಜೊತೆ ಸ್ನೇಹ ಸರಪಳಿಯನ್ನು ಬೆಸೆದುಕೊಂಡಿ ದ್ದಾರೆ .
400 ಕ್ಕೂ ಹೆಚ್ಚು ಪ್ರತಿಭಾನ್ವಿತ ಕಲಾವಿದರ ಸಂದರ್ಶನ
ಬಾಲಿವುಡ್ ತಾರೆ ರಣಬೀರ್ ಸಿಂಗ್,ನೊಬೆಲ್ ಪ್ರಶಸ್ತಿ ವಿಜೇತ ಕೈಲಾಷ್ , ಇನ್ಫೋಸಿಸ್ ಪ್ರತಿಷ್ಠಾನದ ಸುಧಾ ಮೂರ್ತಿಯವರು, ಡಾಕ್ಟರ್ ವೀರೇಂದ್ರ ಹೆಗ್ಗಡೆ , ಇಸ್ರೋ ವಿಜ್ಞಾನಿ ಮೈಲ್ ಸ್ವಾಮಿ ಅನ್ನ ದುರೈ ,ಖ್ಯಾತ ಸಿನಿಮಾ ತಾರೆ ಯಾರದ ಧನುಷ್,ಯಶ್,ಕಿಚ್ಚ ಸುದೀಪ್ ,ಉಪೇಂದ್ರ, ರಾಷ್ಟ್ರ ಪ್ರಶಸ್ತಿ ವಿಜೇತರಾದ ವಿಜಯರಾಘವೇಂದ್ರ,ದಿಯಾ ಮಿರ್ಜಾ,ಬಾಲಿವುಡ್ ಸಂಗೀತ ನಿರ್ದೇಶಕರಾದ ಸಲೀಂ ಸುಲೇಮಾನ್,ವಿಶಾಲ್ ದಾಡ್ಲನಿ,ಗಾಯಕ ಸೋನು ನಿಗಮ್,ಸೇರಿದಂತೆ ಸರಿ ಸುಮಾರ್ 400 ಅಧಿಕ ಗಣ್ಯ ವ್ಯಕ್ತಿಗಳನ್ನು ಸಂದರ್ಶನ ಮಾಡಿದ್ದಾರೆ.
ಸ್ಪಂದನ ಚಾನೆಲ್ ನಲ್ಲಿ ' ಮೈ ಆಟಗ್ರಾಫ್ ಆರ್ ಜೆ ಎರಲ್' ಎಂಬ ಕಾರ್ಯಕ್ರಮವು ಅತ್ಯಂತ ಜನಪ್ರಿಯತೆನ್ನ ಪಡೆದಿದ್ದು, ತನ್ನದೇ ಹೆಸರಿನಲ್ಲಿ ಒಂದು ಟಿ.ವಿ ಕಾರ್ಯಕರ್ಮವನ್ನ ಹೊಂದಿರುವ ಕರ್ನಾಟಕದ ಮೊದಲ ರೇಡಿಯೋ ಜಾಕಿ ಬಹುಶಃ ದೇಶದ ಏಕೈಕ ರೇಡಿಯೋ ಜಾಕಿ ಆರ್ ಜೆ ಎರಲ್.