Divorce ಬಳಿಕ ಶೂಟಿಂಗ್‌ನಲ್ಲಿ ಸಮಂತಾ ಕಣ್ಣೀರಾಗಿದ್ಯಾಕೆ? ಅವರನ್ನು ಕಾಡುವ ನೋವೇನು?

Suvarna News   | Asianet News
Published : Oct 09, 2021, 02:53 PM IST
Divorce ಬಳಿಕ ಶೂಟಿಂಗ್‌ನಲ್ಲಿ ಸಮಂತಾ ಕಣ್ಣೀರಾಗಿದ್ಯಾಕೆ? ಅವರನ್ನು ಕಾಡುವ ನೋವೇನು?

ಸಾರಾಂಶ

ಟಾಲಿವುಡ್‌ ಸ್ಟಾರ್ ನಟಿ ಸಮಂತಾ ಪಾಲಿಗೆ ಸದ್ಯದ ದಿನಗಳು ದುಃಸ್ವಪ್ನವಾಗಿವೆ. ಡಿವೋರ್ಸ್ ಬಳಿಕ ಮೊದಲ ಸಲ ಶೂಟಿಂಗ್‌ಗೆ ಮರಳಿದ ಸ್ಯಾಮ್ ಕಣ್ತುಂಬ ನೀರು ತುಂಬಿಕೊಂಡಿದ್ದರು. ಅದಕ್ಕೆ ಕಾರಣ ಏನಿರಬಹುದು..  

ನಾಗಚೈತನ್ಯ (Naga Chiatanya) ಹಾಗೂ ಸಮಂತಾ ರುತ್ ಪ್ರಭು (Samantha Ruth Prabhu) ಅಂದರೆ ಟಾಲಿವುಡ್‌ನ ಮುದ್ದಾದ ಜೋಡಿ ಅಂತಲೇ ಫೇಮಸ್. ಅವರಿಬ್ಬರೂ ಜೊತೆಯಾಗಿ ಕಾಣಿಸಿಕೊಂಡ ಫೋಟೋಸ್ ಕ್ಷಣಮಾತ್ರದಲ್ಲಿ ವೈರಲ್ (Viral) ಆಗುತ್ತಿತ್ತು. ಈ ಜೋಡಿಯನ್ನು ಜನ ಯಾವ ಮಟ್ಟಿಗೆ ಹಚ್ಚಿಕೊಂಡಿದ್ದಾರೆ ಅನ್ನೋದಕ್ಕೆ ಈ ಘಟನೆಗಳೇ ಸಾಕ್ಷಿ. ಆದರೆ ಈ ಮುದ್ದಾದ ಜೋಡಿ ಬೇರ್ಪಟ್ಟಿರೋದು, ಸ್ನೇಹವನ್ನುಳಿಸಿಕೊಂಡೇ ಸಪರೇಟ್ ಆಗಿ ಬದುಕಲು ಮುಂದಾಗಿರೋದು ಈಗ ಹಳೇ ಸುದ್ದಿಗಳ ಪಟ್ಟಿಗೆ ಸೇರಿದೆ.

ಅವರಿಬ್ಬರ ವಿಚ್ಛೇದನದ (Divorce) ಬಗ್ಗೆ ಸಾಕಷ್ಟು ಕಾಲದಿಂದ ಗಾಳಿ ಸುದ್ದಿ ಇತ್ತಾದರೂ ಅದೆಲ್ಲ ಸುಳ್ಳು, ಈ ದಂಪತಿ (Couple) ತಮ್ಮ ಪ್ರೇಮದ ಕುಡಿಗಾಗಿ ನಿರೀಕ್ಷೆ ಮಾಡುತ್ತಿದ್ದಾರೆ, ಸಮಂತಾ ಸದ್ಯದಲ್ಲೇ ತಾಯಾಗಲಿದ್ದಾರೆ ಅನ್ನೋ ಮಾತುಗಳೂ ಕೇಳಿಬಂದವು. ಆದರೆ ಡಿವೋರ್ಸ್ಅನ್ನು ಇಬ್ಬರೂ ಘೋಷಿಸಿದ್ದು ಈ ಎಲ್ಲ ಆಸೆಗಳಿಗೆ ತಣ್ಣೀರೆರಚಿದೆ. ಒಂದಿಷ್ಟು ಭಿನ್ನಾಭಿಪ್ರಾಯದ ಕಾರಣಕ್ಕೆ ಕೆಲವು ಕಾಲದಿಂದ ಈ ಜೋಡಿ ಬೇರೆ ಬೇರೆಯಾಗಿಯೇ ಇದ್ದರು. ಆಗ ಸಮಂತಾ ತಮ್ಮ ನೋವನ್ನು ಎಲ್ಲೂ ಹೊರಗೆ ಹಾಕಿರಲಿಲ್ಲ. ಬದಲಿಗೆ ತಮ್ಮ ಗ್ಲಾಮರಸ್ ಫೋಟೋಸ್ (Glamorous Photos), ಮಳೆಯಲ್ಲಿ ಸೈಕಲಿಂಗ್ (Cycling) ಮಜಾ ಮಾಡುವ ಫೋಟೋ ಪೋಸ್ಟ್ ಮಾಡಿ ತಾನು ಖುಷಿಯಾಗಿದ್ದೇನೆ ಅಂತ ತೋರಿಸಿಕೊಳ್ಳೋ ಪ್ರಯತ್ನ ಮಾಡುತ್ತಿದ್ದರು. 

'ಅಫೇರ್ , ಅಬಾರ್ಶನ್'  ವಿಚ್ಛೇದನದ ನಂತರ ಮೌನ ಮುರಿದ ಸಮಂತಾ

ಆದರೆ ಈಗ ಅವರಿಗೆ ಈ ಥರ ಗಿಮಿಕ್ ಮಾಡೋದೂ ಸಾಧ್ಯ ಆಗುತ್ತಿಲ್ಲ. ನೋವನ್ನು, ಫ್ರರ್ಸ್ಟೇಶನ್‌ಅನ್ನು (Frustration) ಎಷ್ಟೇ ಮರೆಮಾಚಿದರೂ ಅದು ಒಂದಿಲ್ಲೊಂದು ರೂಪದಲ್ಲಿ ಹೊರ ಬರುತ್ತಲೇ ಇದೆ. ಹಾಗೆ ನೋಡಿದರೆ ಸಮಂತಾ ಡಿವೋರ್ಸ್ ಘೋಷಣೆ ಮಾಡಿದ ಕೆಲವೇ ದಿನಗಳಲ್ಲಿ ಇನ್‌ಸ್ಟಾದಲ್ಲಿ ತನ್ನ ಹಾಸಿಗೆಯನ್ನು ತಾನೇ ಸರಿಪಡಿಸಿಕೊಳ್ಳಬೇಕು ಅಂತ ಸಾಂಕೇತಿಕವಾಗಿ ಹೇಳುವ ಮೂಲಕ ಇನ್ನು ಮೇಲೆ ತಾನು ಶಿಸ್ತಿನ ಜೀವನ ಮೈಗೂಡಿಸಿಕೊಳ್ಳಬೇಕು, ತನ್ನ ಕೆಲಸವನ್ನು ತಾನೇ ಮಾಡಬೇಕು, ಸ್ವತಂತ್ರವಾಗಿರಬೇಕು ಎನ್ನುವ ರೀತಿಯ ಮಾತುಗಳನ್ನು ಪೋಸ್ಟ್ ಮಾಡಿದ್ದರು. ಈ ಮೂಲಕ ತಾನು ಇನ್ನಷ್ಟು ಪ್ರೊಫೆಶನಲ್ ಆಗಿರುತ್ತೇನೆ ಅನ್ನೋ ರೀತಿಯ ಮಾತುಗಳನ್ನು ಆಡಿದ್ದರು. 


ಅಂದುಕೊಂಡ ಹಾಗೇ ಡಿವೋರ್ಸ್ ಘೋಷಿಸಿದ ಮೇಲೆ ಮೊದಲ ಸಲ ಶೂಟಿಂಗ್‌ಗೆ ಬಂದಿದ್ದಾರೆ. ಹೈದರಾಬಾದ್‌ನ (Hyderabad) ಮುಕರಂಜಾ ಜ್ಯೂನಿಯರ್ ಕಾಲೇಜು ಆವರಣದಲ್ಲಿ ಅವರ ಚಿತ್ರಕ್ಕೆ ಸೆಟ್ ಹಾಕಿದ್ದಾರೆ. ಬಾಲಿವುಡ್ (Bollywood) ಮೂಲದ ವಿಶೇಷ್ ವರ್ಮಾ ಈ ಚಿತ್ರದ ನಿರ್ದೇಶಕರು. ತಾನು ನೀಡಿದ ಡೇಟ್ಸ್ ಗೆ ಸರಿಯಾಗಿ ಶೂಟಿಂಗ್ (Shooting) ಸೆಟ್‌ಗೆ ಆಗಮಿಸಿದ ಸಮಂತಾ, ಮೇಕಪ್ (makeup) ಹಚ್ಚಿಕೊಳ್ಳುವಾಗಲೆಲ್ಲ ಕಣ್ಣೀರು ಒರೆಸಿಕೊಳ್ಳುತ್ತಿದ್ದರು. ಸೆಟ್‌ಗೆ ಆಗಮಿಸಿದಾಗ ತಡೆದುಕೊಳ್ಳಲಾಗದೇ ಗಳಗಳನೆ ಅತ್ತಿದ್ದಾರೆ. ಆದರೆ ಒಂದು ಹಂತದಲ್ಲಿ ಈ ನೋವನ್ನು ಮೀರಿ ಕ್ಯಾಮೆರಾದೆದುರು ನಿಂತಿದ್ದಾರೆ. ನಿರ್ದೇಶಕರು ಆಕ್ಷನ್ ಹೇಳಿದ ಕೂಡಲೇ ಅವರು ಪಾತ್ರದೊಳಗೆ ಸೇರಿಹೋಗಿ ಅದ್ಭುತ ಅಭಿನಯ ನೀಡಿದ್ದಾರೆ. ಇದನ್ನು ನಿರ್ದೇಶಕ ವಿಶೇಷ್ ಸೇರಿದಂತೆ ಸೆಟ್‌ನಲ್ಲಿರುವವರೆಲ್ಲ ಕಂಡು, ಸಮಂತಾ ಅವರನ್ನು ಅಭಿನಂದಿಸಿದ್ದಾರೆ. ಕೆಲಸದ ಮೇಳಿನ ಸಮಂತಾ ಅವರ ಶ್ರದ್ಧೆ , ಪ್ರೀತಿಯನ್ನು (Love) ಕಂಡು ಅವರಿಗೆಲ್ಲ ಅಚ್ಚರಿಯಾಗಿದೆ. ಸಮಂತಾ ಪಾತ್ರದೊಳಗೆ ಸೇರಿಕೊಂಡರೆ, ಎಂಥಾ ಅಮೋಘ ಅಭಿನಯ ನೀಡುತ್ತಾರೆ ಅನ್ನೋದು ಫ್ಯಾಮಿಲಿ-2 ಸೇರಿದಂತೆ ಅವರ ಚಿತ್ರ ನೋಡಿದವರಿಗೆಲ್ಲ ಗೊತ್ತು. ಅಂಥಾ ಪರ್ಫಾಮರ್ ಮತ್ತೆ ನಟನೆಗೆ ಮರಳಿರುವುದು ಸಮಂತಾ ಅಭಿಮಾನಿಗಳಿಗೆ (Fans) ಖುಷಿ ಕೊಟ್ಟಿದೆ. ಅವರು ಸಂಸಾರದಲ್ಲಾದ ಸಮಸ್ಯೆಯನ್ನೆಲ್ಲ ಮರೆತು ಉತ್ತಮ ನಟಿಯಾಗಿ (Best actress) ಮೆರೆಯಲಿ. ಯಾವ ಒತ್ತಡವೂ (Stress) ಇಲ್ಲದೇ ಉತ್ತಮ ಚಿತ್ರಗಳನ್ನು ನೀಡಲಿ ಎಂಬ ಹಾರೈಕೆ ಸಮಂತಾ ಅಭಿಮಾನಿಗಳದ್ದು. 

Sai Pallavi: ಕೂದಲು ಉದುರದಿರಲಿ ಎಂದು ದಿನವೂ ದೇವ್ರಿಗೆ ಪ್ರಾರ್ಥಿಸ್ತಾರೆ ಪ್ರೇಮಂ ನಟಿ

ಸದ್ಯ ವಿಘ್ನೇಶ್ ಶಿವನ್ (Vinesh Shivan) ನಿರ್ದೇಶನದ ಕಾತು ವಾಕುಲಾ ರಂಡು ಕಾದಲ್ ಚಿತ್ರದಲ್ಲಿ ಸಮಂತಾ ನಟಿಸುತ್ತಿದ್ದಾರೆ. ನಯನತಾರಾ (Nayantara), ವಿಜಯ್‌ ಸೇತುಪತಿ (Vijay Setupati) ಅವರೊಂದಿಗೆ ಸಮಂತಾ ಅವರೂ ಮುಖ್ಯ ಪಾತ್ರ ಮಾಡುತ್ತಿದ್ದಾರೆ. ಗುಣಶೇಖರ ನಿರ್ದೇಶನದ "ಶಾಕುಂತಲ' ಚಿತ್ರದಲ್ಲೂ ಶಾಕುಂತಲೆಯಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ರಿಲೀಸ್‌ಗೆ ರೆಡಿಯಾಗುತ್ತಿದೆ. 

ತಾಯಿ ಜೊತೆ ಆಸ್ತಿಗಾಗಿ ಮನಸ್ತಾಪ ಮಾಡಿಕೊಂಡ್ರಾ ಸೈಫ್‌ ಅಲಿ ಖಾನ್?

"

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?