ರಾಧಿಕಾ ಕುಮಾರಸ್ವಾಮಿ ಸ್ಯಾಂಡಲ್'ವುಡ್'ಗೆ ಕಮ್'ಬ್ಯಾಕ್ ; ಚಿತ್ರ ಯಾವುದು ಗೊತ್ತಾ?

Published : Jul 30, 2017, 09:51 PM ISTUpdated : Apr 11, 2018, 01:06 PM IST
ರಾಧಿಕಾ ಕುಮಾರಸ್ವಾಮಿ ಸ್ಯಾಂಡಲ್'ವುಡ್'ಗೆ ಕಮ್'ಬ್ಯಾಕ್ ; ಚಿತ್ರ ಯಾವುದು ಗೊತ್ತಾ?

ಸಾರಾಂಶ

ಸ್ಯಾಂಡಲ್’ವುಡ್ ‘ನ ಬ್ಯೂಟಿಫುಲ್ ಲೇಡಿ ರಾಧಿಕಾ ಕುಮಾರಸ್ವಾಮಿ, ಬಹಳ ದಿನಗಳ ಬಳಿಕ ಕನ್ನಡ ಚಿತ್ರರಂಗಕ್ಕೆ ಮರಳಿದ್ದಾರೆ.

ಬೆಂಗಳೂರು (ಜು.30): ಸ್ಯಾಂಡಲ್’ವುಡ್ ‘ನ ಬ್ಯೂಟಿಫುಲ್ ಲೇಡಿ ರಾಧಿಕಾ ಕುಮಾರಸ್ವಾಮಿ, ಬಹಳ ದಿನಗಳ ಬಳಿಕ ಕನ್ನಡ ಚಿತ್ರರಂಗಕ್ಕೆ ಮರಳಿದ್ದಾರೆ.

ಒಂದಿಷ್ಟು ವಿವಾದಗಳು ಹಾಗೂ ವೈಯಕ್ತಿಕ ವಿಚಾರವಾಗಿ ಸುದ್ದಿಯಾದ ಬ್ಯೂಟಿಫುಲ್ ಲೇಡಿ ರಾಧಿಕಾ ಕುಮಾರಸ್ವಾಮಿ ಸ್ವೀಟಿ  ಸಿನಿಮಾ ಮೂಲಕ ಸ್ಯಾಂಡಲ್'ವುಡ್ 'ನಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರುಮಾಡಿದ್ದರು. ನಂತರ ರುದ್ರ ತಾಂಡವದ ಸಿನಿಮಾ ನಂತರ ಕಾಣಿಯಾಗಿ ಬಿಟ್ಟಿದ್ದರು.  ಈಗ 'ಕಂಟ್ರಾಕ್ಟ್ ' ಸಿನಿಮಾದಿಂದ ಮತ್ತೆ ಚಿತ್ರರಂಗಕ್ಕೆ ಗುಡ್ ಕಮ್ ಬ್ಯಾಕ್ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಮಾಡರ್ನ್ ಗರ್ಲ್​ ಪಾತ್ರದಲ್ಲಿ ರಾಧಿಕಾ ಕುಮಾರಸ್ವಾಮಿ

ಕ್ಯಾಚೀ ಟೈಟಲ್ ಇಟ್ಟುಕೊಂಡು ಬರ್ತಿರೋ ಕಂಟ್ರಾಕ್ಟ್ ಸಿನಿಮಾದಲ್ಲಿ, ರಾಧಿಕಾ ಕುಮಾರಸ್ವಾಮಿ ಮಾಡರ್ನ್ ಗರ್ಲ್​ ಪಾತ್ರವನ್ನ ಮಾಡ್ತಾ ಇದ್ದಾರೆ. ಅರ್ಜುನ್ ಸರ್ಜಾ ಹಾಗೂ ತೆಲುಗು ಖ್ಯಾತ ನಟ ಜೆ ಡಿ ಚಕ್ರವರ್ತಿ ಪೇರ್  ಆಗಿ ರಾಧಿಕಾ ಕುಮಾರಸ್ವಾಮಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯಕ್ಕೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ರಾಧಿಕಾ ಕುಮಾರಸ್ವಾಮಿ ಹಾಗೂ  ತೆಲುಗು ನಟ ಜೆಡಿ ಚಕ್ರವರ್ತಿ ನಡುವಿನ ರೊಮ್ಯಾಟಿಂಕ್ ದೃಶ್ಯಗಳನ್ನ ನಿರ್ದೇಶಕ ಸಮೀರ್ ಚಿತ್ರಿಸಿಕೊಳ್ಳುತ್ತಿದ್ದಾರೆ.

ರಾಧಿಕಾ ಕುಮಾರಸ್ವಾಮಿ ಉತ್ತಮ ನಟಿಯೂ ಹೌದು  ಜೊತೆಗೆ ಗುಡ್ ಡ್ಯಾನ್ಸರ್. ಹೋಟೆಲ್'ನಲ್ಲಿ ನಡೆಯುವ ಸಿಕ್ವೇನ್ಸ್'ನಲ್ಲೂ ರಾಧಿಕಾ ಕುಮಾರಸ್ವಾಮಿ ಲೈಲಾ ಹಾಡಿಗೆ ಸೊಂಟ ಬಳುಕಿಸಿದ್ದಾರೆ.  ಶರಪಂಜರ, ಭಕ್ತಿ ಪ್ರಧಾನ ಚಿತ್ರಗಳು ಹೀಗೆ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕು ಅನ್ನೋದು ರಾಧಿಕಾ ಕುಮಾರಸ್ವಾಮಿ ಬಹು ದಿನದ ಆಸೆಯಂತೆ.

ಇನ್ನು ತೆಲುಗು ಹಾಗೂ ಹಿಂದಿಯಲ್ಲಿ  ಡಿಮ್ಯಾಂಡ್ ಕ್ರಿಯೇಟ್ ಮಾಡಿಕೊಂಡಿರುವ ಜೆಡಿ ಚಕ್ರವರ್ತಿ ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ.  ಟ್ರಯಾಂಗಲ್‌ ಲವ್ ಸ್ಟೋರಿ ಕಥೆ ಆಧರಿಸಿರೋ ಕಂಟ್ರಾಕ್ಟ್  ಕನ್ನಡ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಶೂಟಿಂಗ್ ನಡೆಯುತ್ತಿದೆ. ಈ ಚಿತ್ರದ ಮೂಲಕ  ರಾಧಿಕಾ ಕುಮಾರಸ್ವಾಮಿ ಸೌತ್ ಸಿನಿಮಾ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಒಟ್ಟಾರೆ ರಾಧಿಕಾ ಕುಮಾರಸ್ವಾಮಿಯ ಈ ಕಮ್ ಬ್ಯಾಕ್ ಗಾಂಧಿನಗರ ಅಲ್ಲದೇ ಅವರ ಅಭಿಮಾನಿಗಳಿಗೆ ಖುಷಿ ತಂದಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Boss Win​ ಆಗೋರು ಇವರೇ, ಆದ್ರೆ ಆಗಬೇಕಾಗಿದ್ದು ಅವರು- Suraj Singh​ ಹೇಳಿದ ಆ ಹೆಸರು ಯಾವುದು?
BBK 12: ನಾಮಿನೇಷನ್‌ನಲ್ಲಿ ಕಾವ್ಯಾ ಹಿಂದೆ ಹೋಗಿ ತನ್ನ ಗುಂಡಿ ತಾನೇ ತೋಡಿಕೊಂಡ್ರಾ ಗಿಲ್ಲಿ ನಟ?