ರಾಧಿಕಾ ಬಳಿ ಎಲ್ಲವೂ ನಕಲಿ ಚಿನ್ನವಂತೆ, ಇದೊಂದು ಬಿಟ್ಟು...!

Published : Dec 07, 2018, 02:21 PM IST
ರಾಧಿಕಾ ಬಳಿ ಎಲ್ಲವೂ ನಕಲಿ ಚಿನ್ನವಂತೆ, ಇದೊಂದು ಬಿಟ್ಟು...!

ಸಾರಾಂಶ

ತನ್ನ ಅದ್ಭುತ ನಟನೆಯಿಂದಲೇ ಗುರುತಿಸಿಕೊಂಡಿರುವ ನಟಿ ರಾಧಿಕಾ ಅಪ್ಟೆ ತಮ್ಮ ಬಳಿ ಯಾವುದೇ ಚಿನ್ನದ ಆಭರಣಗಳಿಲ್ಲ ಎನ್ನುವ ಮೂಲಕ ಎಲ್ಲರನ್ನೂ ಅಚ್ಚರಿಗೀಡು ಮಾಡಿದ್ದಾರೆ. ಆದರೆ ತನ್ನ ಬಳಿ ಇರುವ ಒಂದೇ ಒಂದು ವಸ್ತು ಚಿನ್ನದ್ದಾಗಿದೆ ಎನ್ನುವ ಮೂಲಕ ಕುತೂಹಲ ಮತ್ತಷ್ಟು ಹೆಚ್ಚಿಸಿದ್ದಾರೆ. 

ಸಿನಿಮಾಗಳಲ್ಲಿ ತನ್ನ ಅದ್ಭುತ ನಟನೆಗಾಗಿಯೇ ಗುರುತಿಸಿಕೊಳ್ಳುವ ನಟಿ ರಾಧಿಕಾ ಆಪ್ಟೆ ತನ್ನ ಬಳಿ ಚಿನ್ನದ ಹಾಗೂ ವಜ್ರದ ಆಭರಣಗಳಿಲ್ಲ ಎಂದು ಹೇಳಿಕೊಂಡಿದ್ದಾರೆ. ತನ್ನ ಬಳಿ ಇರುವ ಚಿನ್ನದ ಆಭರಣವೆಂದರೆ ಅದು ಕೇವಲ ಕೈ ಬೆರಳಲ್ಲಿರುವ ಉಂಗುರವಷ್ಟೇ, ಅದನ್ನು ತಾನು ಖುದ್ದಾಗಿ ಖರೀದಿಸಿದ್ದು ಎಂದಿದ್ದಾರೆ. 'ನನ್ನ ತಾಯಿ ನನಗಾಗಿ ಮಂಗಳಸೂತ್ರ ಖರೀದಿಸಿದ್ದರು. ಆದರೀಗ ಅದು ಎಲ್ಲಿದೆ ಎಂದು ನನಗೂ ತಿಳಿದಿಲ್ಲ' ಎಂದಿದ್ದಾರೆ ನಟಿ.

ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ರಾಧಿಕಾ ಅಪ್ಟೆ 'ನಾನು ಆರಿಸಿಕೊಂಡಿರುವ ವೃತ್ತಿಯಲ್ಲಿ ವಿವಿಧ ಆಭರಣಗಳನ್ನು ಧರಿಸುವ ಅವಕಾಶ ಸಿಗುತ್ತದೆ. ಈ ವಿಚಾರದಲ್ಲಿ ನಾನು ನಿಜಕ್ಕೂ ಅದೃಷ್ಟಶಾಲಿಯಾಗಿದ್ದೇನೆ' ಎಂದಿದ್ದಾರೆ.

'ನಾನು ಪ್ರತಿದಿನ ಡ್ರೆಸ್ಸಿಂಗ್ ಮಾಡಿಕೊಳ್ಳುತ್ತೇನೆ. ಅದ್ಭುತ ಮತ್ತು ಸ್ಪೂರ್ತಿದಾಯಕ ಜನರ ಪರಿಚಯ ನನಗಿದೆ. ಇವರೆಲ್ಲರ ಬದುಕಿನ ಕಥೆಗಳನ್ನು ನಾನು ಕೇಳುತ್ತೇನೆ. ಹೀಗಾಗಿ ಚಿನ್ನದ ಆಭರಣಗಳ ಕುರಿತು ನನ್ನ ಜ್ಞಾನ ವೃದ್ಧಿಸುತ್ತಿದೆ. ಚಿನ್ನದ ಆಭರಣಗಳ ಕುರಿತಾಗಿ ನನ್ನ ಜ್ಞಾನ ವೃದ್ಧಿಸುತ್ತಾ ಹೋದಂತೆ, ಚಿನ್ನ ಖರೀದಿಸುವ ಕುರಿತಾಗಿ ಆಲೋಚಿಸುತ್ತೇನೆ' ಎಂದಿದ್ದಾರೆ ರಾಧಿಕಾ.

ಅವರ ಸಿನಿಮಾಗಳನ್ನು ಗಮನಿಸಿದರೆ ಇತ್ತೀಚೆಗಷ್ಟೇ ತೆರೆಕಂಡ ಅವರ ಎರಡು ಸಿನಿಮಾಗಳು ಯಶಸ್ಸು ಕಂಡಿವೆ. ಇವುಗಳಲ್ಲಿ 'ಅಂಧಾದುನ್' ಸಿನಿಮಾಗದಲ್ಲಿ ಅವರು ಆಯುಷ್ಯಮಾನ್ ಖುರಾನಾರೊಂದಿಗೆ ನಟಿಸಿದ್ದರೆ, 'ಬಾಜಾರ್'ನಲ್ಲಿ ಸೈಫ್ ಅಲಿ ಖಾನ್ ರೊಂದಿಗೆ ನಟಿಸಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Alia Bhatt New Home Photos: ಆಲಿಯಾ ಭಟ್‌, ರಣಬೀರ್‌ ಕಪೂರ್‌ 350 ಕೋಟಿ ರೂ ಮನೆಯನ್ನು ಪದಗಳಲ್ಲಿ ವರ್ಣಿಸೋಕಾಗಲ್ಲ
ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!