
ರಾಧಿಕಾ ಈಗ ತುಂಬಾ ತೆಳ್ಳಗೆ ಇದ್ದರೂ, ನಾವೀಗ ಹೇಳುತ್ತಿರುವುದು 2012ರ ಸಮಾಚಾರ. ಆಗ ಆಗಿದ್ದು ಏನೆಂದರೆ, ರಾಧಿಕಾಗೆ ಆಯುಷ್ಮಾನ್ ಖುರಾನ ಜೊತೆಗೆ ನಾಯಕಿಯಾಗಿ ನಟಿಸಲು ‘ವಿಕಿ ಡೋನರ್’ ಚಿತ್ರದ ಆಫರ್ ಬಂದಿರುತ್ತದೆ. ಇದನ್ನು ರಾಧಿಕಾ ಒಪ್ಪಿರುತ್ತಾರೆ ಕೂಡ.
ಚಿತ್ರ ಒಪ್ಪಿಕೊಂಡ ನಂತರ ಒಂದು ತಿಂಗಳು ವಿದೇಶಕ್ಕೆ ಹಾರಿದ್ದ ರಾಧಿಕಾ ಅಲ್ಲಿ ಮೋಜು-ಮಸ್ತಿಗೆ ಇಳಿದು ಸಿಕ್ಕಾಪಟ್ಟೆಬಿಯರ್ ಹೀರಿದ್ದಾರೆ. ಪರಿಣಾಮ ಒಂದೇ ತಿಂಗಳಿನಲ್ಲಿ ರಾಧಿಕಾ ತೂಕ ಹೆಚ್ಚಾಗಿದೆ. ಚಿತ್ರ ಒಪ್ಪಿಕೊಂಡ ಬಳಿಕ ರಾಧಿಕಾ ಇಷ್ಟೊಂದು ದಪ್ಪ ಆಗಿರುವುದನ್ನು ಕಂಡ ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕರು ರಾಧಿಕಾರನ್ನು ತಿರಸ್ಕರಿಸಿದ್ದಾರೆ. ಇದೇ ಪಾತ್ರ ಮುಂದೆ ಯಾಮಿ ಗೌತಮ್ ಪಾಲಾಗಿದ್ದು ಇತಿಹಾಸ.
ಪತಿಯಿಂದ ದೂರ ಇರೋ ರಾಧಿಕಾ: ಪುಕ್ಸಟೆ ಸಲಹೆ ಬೇಡ ಎಂದ ನಟಿ
ಹೀಗೆ ವಿದೇಶದಲ್ಲಿ ಕುಡಿದ ಬಿಯರ್ ಹೇಗೆ ಒಂದು ಚಿತ್ರದ ಅವಕಾಶವನ್ನೇ ಕಸಿದುಕೊಂಡಿತು. ಅಂದಿನಿಂದ ತಾನು ತೂಕದ ವಿಚಾರದಲ್ಲಿ ಸಾಕಷ್ಟುಎಚ್ಚರ ವಹಿಸಿರುವುದಾಗಿಯೂ ಹೇಳಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.