
ನಿರ್ದೇಶಕ ರಘುವರ್ಧನ್ ಅವರೇ ಈ ಚಿತ್ರದ ನಿರ್ಮಾಣಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಜತೆಗೆ ಕತೆ, ಚಿತ್ರಕತೆ ಬರೆದು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಸದ್ಯಕ್ಕೀಗ ವಿನಯ್ ರಾಜ್‌ಕುಮಾರ್ ಜತೆಗೆ ರಘವರ್ಧನ್ ಸಿನಿಮಾ ಮಾಡುವುದು ಬಹುತೇಕ ಖಚಿತವಾಗಿದೆ. ಆದರೆ ಚಿತ್ರಕ್ಕೆ ನಾಯಕಿ ಯಾರು ಎನ್ನುವುದು ಈವರೆಗೂ ಕನ್‌ಫಮ್‌ರ್ ಆಗಿಲ್ಲ. ನಾಯಕಿಯ ಹುಡುಕಾಟದಲ್ಲಿರುವ ನಿರ್ದೇಶಕರು, ಆಗಸ್ಟ್ ಕೊನೆಯಲ್ಲಿ ಅಥವಾ ಸೆಪ್ಟೆಂಬರ್ ತಿಂಗಳ ಮೊದಲ ವಾರಕ್ಕೆ ಸಿನಿಮಾ ಶುರು ಮಾಡುವ ತವಕದಲ್ಲಿದ್ದಾರೆ.
ರಗಡ್ ಬಾಕ್ಸರ್ ಆದ ವಿನಯ್ ರಾಜ್‌ಕುಮಾರ್!
‘ಮಿಸ್ಟರ್ ಎಲ್‌ಎಲ್‌ಬಿ’ ಚಿತ್ರದ ನಂತರ ರಘುವರ್ಧನ್ ತಮ್ಮದೇ ಬ್ಯಾನರ್‌ನಲ್ಲಿ ನಿರ್ಮಿಸಿ, ನಿರ್ದೇಶಿಸುತ್ತಿರುವ ಚಿತ್ರವಿದು. ಈ ಬಾರಿ ಹೊಸ ಬಗೆಯ ಕತೆಯನ್ನೇ ಆಯ್ಕೆ ಮಾಡಿಕೊಂಡು ಸಿನಿಮಾ ಮಾಡುತ್ತಿದ್ದಾರಂತೆ. ಹಾಗೆಯೇ ಜನಪ್ರಿಯ ಕಲಾವಿದರ ಜತೆಗೆ ಅನುಭವಿ ತಂತ್ರಜ್ಞರನ್ನೆ ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳುತ್ತಿದ್ದಾರಂತೆ.ಸಂಗೀತ, ಛಾಯಾಗ್ರಹಣ ಹಾಗೂ ಸಂಕಲನದ ಪೈಕಿ ಈಗಾಗಲೇ ಸಂಗೀತ ನಿರ್ದೇಶಕರ ಆಯ್ಕೆ ನಡೆದಿದೆ. ಕನ್ನಡದ ಹೆಸರಾಂತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಛಾಯಾಗ್ರಹಣ ಹಾಗೂ ಸಂಕಲನಕ್ಕೆ ಯಾರು ಎನ್ನುವುದು ಮಾತ್ರ ಬಾಕಿಯಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.