ರಾಧಿಕಾ ಆಪ್ಟೆ ಹೊಟ್ಟೆಪಾಡಿನ ಕಥೆ!

Published : Oct 29, 2018, 10:09 AM IST
ರಾಧಿಕಾ ಆಪ್ಟೆ ಹೊಟ್ಟೆಪಾಡಿನ ಕಥೆ!

ಸಾರಾಂಶ

‘ಬಜಾರ್’ ಸಿನಿಮಾದ ಗಾರ್ಜಿಯಸ್ ಲುಕ್ ಮೂಲಕ ಹವಾ ಕ್ರಿಯೇಟ್ ಮಾಡಿರುವ ರಾಧಿಕಾ ಆಪ್ಟೆ ಹಿಂದೆಂದಿಗಿಂತಲೂ ಹೆಚ್ಚು ಗ್ಲಾಮರಸ್ ಆಗಿ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

ತನಗೆ ‘ಪ್ಯಾಡ್‌ಮ್ಯಾನ್’ ನಂಥ ಸಾಮಾಜಿಕ ಕಳಕಳಿ ಚಿತ್ರಕ್ಕಿಂತ ಇಂಥಾ ಮನೋರಂಜನಾತ್ಮಕ ಚಿತ್ರದ ನಟನೆಯೇ ಇಷ್ಟ ಅನ್ನೋದರ ಹಿಂದೆ ಈ ಪಾತ್ರದ ಜನಪ್ರಿಯತೆ ಇದೆ. ಎಲ್ಲಕ್ಕಿಂತ ಮುಖ್ಯವಾಗಿ ಇಷ್ಟು ಸ್ಲಿಮ್ ಆ್ಯಂಡ್ ಬ್ಯೂಟಿಫುಲ್ ಆಗಿ ಕಾಣೋಕೆ ಎಷ್ಟೆಲ್ಲ ಕಷ್ಟಪಟ್ಟಿದ್ದಾರೆ ಅನ್ನೋ ಡೀಟೈಲ್ಸ್ ಇಲ್ಲಿದೆ.

ಚೆನ್ನಾಗಿ ತಿನ್ಬೇಕು ಫಸ್ಟ್

‘ಹೊಟ್ಟೆ ತುಂಬ ತಿನ್ನೋದು ಬಹಳ ಮುಖ್ಯ. ನಾವ್ಯಾಕೆ ಇಷ್ಟು ಕಷ್ಟಪಡೋದು ಹೇಳಿ. ಹೊಟ್ಟೆಪಾಡಿಗೆ ತಾನೇ. ಅಂಥ ಹೊಟ್ಟೆಗೆ ಅನ್ಯಾಯವಾಗುವುದು ನನಗಿಷ್ಟ ಇಲ್ಲ.’ ಅಂತಾರೆ ರಾಧಿಕಾ ಆಪ್ಟೆ. ಆರೋಗ್ಯಕರ ಆಹಾರ ತಿನ್ನಬೇಕು ಅನ್ನೋದು ಬಿಟ್ಟರೆ ಹೆಚ್ಚಿನ ರಿಸ್ಟ್ರಿಕ್ಷನ್ ಹಾಕಲ್ಲ. ಹೊಟ್ಟೆಗೆ ಎಷ್ಟು ಬೇಕೋ ಅಷ್ಟು ತಿನ್ನೋದು, ಬೇಡದ್ದಷ್ಟು ತಿನ್ನಲ್ಲ. ಹಾಗಾಗಿ ಹೆಚ್ಚು ದಪ್ಪಗಾಗಲ್ಲ. ಹಸಿರು ತರಕಾರಿಗಳು ಇವರ ಫೇವರೆಟ್. ಅದರಲ್ಲೂ ಮನೆಯಲ್ಲೇ ತರಕಾರಿ ಬೆಳೆದು ತಿನ್ನೋ ಕ್ರೇಜ್ ಇದೆ. ಫ್ರೆಶ್ ಹಣ್ಣು, ಸ್ವೀಟ್‌ಗಳನ್ನೂ ಇಷ್ಟ ಪಡುತ್ತಾರೆ. 

ಆಮೇಲೆ ಎಕ್ಸರ್‌ಸೈಸ್

ತಿನ್ನೋ ವಿಷಯದಲ್ಲಿ ಹೇಗೆ ಮೋಸ ಮಾಡಲ್ವೋ ಎಕ್ಸರ್‌ಸೈಸ್ ವಿಷಯದಲ್ಲೂ ಅಷ್ಟೇ. ನಿತ್ಯ ಯೋಗ ಮತ್ತು ರನ್ನಿಂಗ್ ತಪ್ಪಿಸಲ್ಲ. ಜಿಮ್‌ಗೆ ಹೋದ್ರೆ ಮಿನಿಮಮ್ ಒಂದು ಗಂಟೆ ವರ್ಕೌಟ್ ಮಾಡುತ್ತಾರೆ. ವಾರದಲ್ಲಿ ಮೂರು ದಿನ ಸ್ವಿಮ್ಮಿಂಗ್ ಮಾಡುತ್ತಾರೆ. ಇಷ್ಟು ಎಕ್ಸರ್ ಸೈಸ್ ಮಾಡಿದರೆ ಸಾಕು, ಫಿಟ್ ಆಗಿ ಇರಬಹುದು ಅನ್ನೋದು ರಾಧಿಕಾ ಮಾತು.

ಎತ್ತರ: 5’3 | ತೂಕ: 54 ಕೆಜಿ | ಸುತ್ತಳತೆ: 34-26-35 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಪರಭಾಷೆಗೆ ಹಾವಳಿ ಕೊಡುವ ಚಿತ್ರ ಮಾಡಬೇಕು: 45 ಟ್ರೇಲರ್‌ಗೆ ತಲಾ 1 ಕೋಟಿ+ ಹಿಟ್ಸ್‌, ಭಾರಿ ಮೆಚ್ಚುಗೆ!
30-40ನೇ ವಯಸ್ಸಿಗೆ ಬದುಕಿನ ಪಯಣ ಮುಗಿಸಿದ ಜನಪ್ರಿಯ ಕನ್ನಡ ನಟರು