
ಈ ಬಾರಿಯೂ ಕೂಡ ಕುಟುಂಬದವರು ಹಾಗೂ ಅಭಿಮಾನಿಗಳ ಜತೆಗೆ ತಮ್ಮ ನಿವಾಸದಲ್ಲೇ ಸರಳವಾಗಿ ಹುಟ್ಟು ಹಬ್ಬ ಆಚರಿಸಿಕೊಳ್ಳಲು ನಿರ್ಧರಿಸಿದ್ದಾರೆ ಹರಿಪ್ರಿಯಾ. ಆದರೆ ಈ ಬಾರಿಯ ಹುಟ್ಟು ಹಬ್ಬ ಹೆಚ್ಚು ಮಹತ್ವ ಪಡೆದಿದೆ. ಕನ್ನಡದಲ್ಲಿ ನಾಯಕಿಯಾಗಿ ಇಲ್ಲಿಗೆ 25 ಸಿನಿಮಾಗಳನ್ನು ಪೂರೈಸಿದ್ದಾರೆ.
ಈಗಷ್ಟೇ ಚಿತ್ರೀಕರಣ ಮುಗಿಸಿರುವ ‘ಡಾಟರ್ ಆಫ್ ಪಾರ್ವತಮ್ಮ’ ಅವರು ನಾಯಕಿ ಆಗಿ ಅಭಿನಯಿಸಿದ 25 ನೇ ಸಿನಿಮಾ. ಹಾಗಾಗಿಯೇ ಅಭಿಮಾನಿಗಳ ಪಾಲಿಗೆ ಈ ಬಾರಿಯ ಅವರ ಹುಟ್ಟು ಹಬ್ಬ ವಿಶೇಷ ಎನಿಸಿದ್ದು ಹೌದು.
‘ಹುಟ್ಟು ಹಬ್ಬದ ಆಚರಣೆ ಇದ್ದೇ ಇತ್ತು, ಆದರೆ ಅದು ಕುಟುಂಬದವರ ಜತೆಗೆ ತೀರ ಸರಳವಾಗಿಯೇ ಇರುತ್ತಿತ್ತು. ಅದಕ್ಕೆ ಒಂದಷ್ಟು ವಿಶೇಷತೆ ಸೇರಿಕೊಂಡಿದ್ದು ಮೂರ್ನಾಲ್ಕು ವರ್ಷಗಳ ಈಚೆಗೆ. ಯಾಕಂದ್ರೆ ಹುಟ್ಟು ಹಬ್ಬದ ದಿನ ಮನೆಗೆ ಅಭಿಮಾನಗಳು ಬರಲು ಶುರು ಮಾಡಿದರು. ಅವರ ಒತ್ತಾಯಕ್ಮೆ ಒಂದಷ್ಟು ಆಚರಣೆ ಅನಿವಾರ್ಯವಾಯಿತು. ಅವರ ಒತ್ತಾಯಕ್ಕೆ ಮಣಿದು ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಿಸಿಕೊಳ್ಳುವುದು ಮಾಮೂಲು ಆಯಿತು. ನನ್ನ ಖುಷಿಗಿಂತ ಇದು ಅಭಿಮಾನಿಗಳ ಖುಷಿಗೆ ಬೇಕೆನಿಸಿತು. ಅದೇ ರೀತಿ ಈ ಬಾರಿಯೂ ಹುಟ್ಟು ಹಬ್ಬದ ಆಚರಣೆ ಇರುತ್ತದೆ. ವಿಶೇಷ ಅಂತೇನು ಇಲ್ಲ. ನಾನೀಗ ಅಭಿನಯಿಸಲು ಒಪ್ಪಿಕೊಂಡ ಚಿತ್ರಗಳಿಗೆ ಚಿತ್ರೀಕರಣ ಮುಗಿದಿದೆ. ಅಷ್ಟೂ ಕೂಡ ರಿಲೀಸ್‌ಗೆ ರೆಡಿ ಇವೆ. ಅವರೆಲ್ಲ ಯಾವ ರೀತಿ ಶುಭ ಕೋರುತ್ತಾರೋ ಗೊತ್ತಿಲ್ಲ. ಆದರೆ ಅವರ ಹಾರೈಕೆ ಇದ್ದೇ ಇರುತ್ತದೆ’ ಎನ್ನುತ್ತಾರೆ ಹರಿಪ್ರಿಯಾ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.