ರಾಧಾ ಮಿಸ್‌ಗೆ ಲವ್ ಆಯ್ತು ರಮಣ್ ಮೇಲೆ!

Published : Nov 10, 2018, 10:27 AM IST
ರಾಧಾ ಮಿಸ್‌ಗೆ ಲವ್ ಆಯ್ತು ರಮಣ್ ಮೇಲೆ!

ಸಾರಾಂಶ

ವಿಭಿನ್ನ ಹಾವಭಾವ, ಆ ಡಿಫರೆಂಟ್ ಪ್ರೀತಿ...ಏನೋ ರಾಧ ರಮಣದ ಕಥೆಯೇ ಎಲ್ಲರಿಗೂ ಅಚ್ಚು ಮೆಚ್ಚು. ನಟನೆ, ಕಥೆಯ ಕಾರಣದಿಂದ ಸಿಕ್ಕಾಪಟ್ಟೆ ಫ್ಯಾನ್ಸ್ ಗಳಿಸಿರುವ ಈ ಸೀರಿಯಲ್‌ನಲ್ಲಿ ಆಗುತ್ತಿದೆ ಹೊಸ ಟ್ವಿಸ್ಟ್!

ಮದುವೆಯಾಗಿ ಒಂದೂವರೆ ವರ್ಷವಾದರೂ ಯಾಕಪ್ಪಾ ಈ ಮುದ್ದಾದ ಜೋಡಿ ಒಂದಾಗೋಲ್ಲ, ಎಂದು ಕೊಳ್ಳುತ್ತಿದ್ದ 'ರಾಧ ರಮಣ' ಫ್ಯಾನ್ಸ್‌ಗೆ ಟ್ವಿಸ್ಟ್ ಸಿಕ್ಕಿದೆ. ಇನ್ಮೇಲೆ ಈ ಜೋಡಿಯ ರೊಮಾನ್ಸ್ ಆರಂಭವಾಗುತ್ತೆ.

ಅಬ್ಬಾ..! 480 ಸಂಚಿಕೆ ಆದ್ಮೇಲೆ ರಾಧಾ ಮಿಸ್ ಬಾಯಿಂದ ‘ರಮಣ್ ಐ ಲವ್ ಯು’ಎಂಬ ಮಾತು ಬಂದೇ ಬಿಡ್ತು. ಇದಕ್ಕೆ ಕೇಳಿ ರಾಧಾ- ರಮಣ ಫ್ಯಾನ್ಸ್ ಫುಲ್ ಖುಷ್.  ಆದರೆ, ದೀಪಿಕಾ ಮಾತ್ರ ವಿಪರೀತ ಉರಿದುಕೊಂಡಿದ್ದಾಳೆ. ಕಾಂಟ್ರ್ಯಾಕ್ಟ್ ಮದ್ವೆ ಬಗ್ಗೆ ಇದ್ದ ಎಲ್ಲ ಕನ್‌ಫ್ಯೂಷನ್ ಇದೀಗ ಸಾರ್ಟ್ ಔಟ್ ಆಗಿದೆ. 

ಇಷ್ಟು ದಿನಗಳ ಕಾಲ ಹುಟ್ಟದ ಪ್ರೀತಿ ಈಗೇಕೆ ಹುಟ್ತು? ರಮಣ್ ಆ್ಯಕ್ಸಿಡೆಂಟ್‌ನಿಂದ. 

ರಮಣ್ ಆ್ಯಕ್ಸಿಡೆಂಟ್ ವಿಷಯ ಕೇಳುತ್ತಿದ್ದಂತೆ ರಾಧಾ ಮಿಸ್ ತಲೆ ಸುತ್ತಿ ಬೀಳುತ್ತಾಳೆ. ಅದರಿಂದಲೇ ಅವಳಿಗೆಷ್ಟು ಲವ್ ಇತ್ತೆಂಬುವುದು ಅರ್ಥವಾಗುತ್ತೆ! ದೀಪಿಕಾ ಹಾಗು ಸಿತಾರ ದೇವಿ ಕುತಂತ್ರದಿಂದ ಇಬ್ಬರೂ ದೂರಾನೇ ಇದ್ದರು. ಇವರಿಬ್ಬರನ್ನು ಸೇರಿಸಲು ರಮಣ್ ತಂಗಿಯೂ ತವರಿಗೆ ತೆರಳಿದ್ದಳು. ಇದರಿಂದ ಒತ್ತಡಕ್ಕೊಳಗಾಗಿದ್ದ ರಾಧಾ ಮಿಸ್ ರಮಣ್ ಪ್ರೇಮಕ್ಕೆ ಬಿದ್ದೇ ಬಿಟ್ಟರು.

’ರಾಧಾ ರಮಣ’ ಖ್ಯಾತಿಯ ರಾಧಾ ಮಿಸ್ ಗ್ಲಾಮರಸ್ ಫೋಟೋಗಳು

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಗಂಡ-ಹೆಂಡ್ತಿ ಮಲಗಿದ್ರೂ ಬೆಡ್​ರೂಂ ಯಾವಾಗ್ಲೂ ಯಾಕೆ ಓಪನ್​ ಇರ್ಬೇಕು ಗೊತ್ತಾ? ಸೀರಿಯಲ್​ ಪ್ರೇಮಿಗಳು ಉತ್ತರಿಸ್ತಾರೆ ಕೇಳಿ!
ನಟಿ ಮಂಜು ಭಾಷಿಣಿ ಫ್ಯಾನ್ಸ್​ ಕಣ್ಣಿಗೆ ಕಾಣಿಸಿದ್ರೆ ನಿಮ್​ ಕಥೆ ಗೋವಿಂದ: Bigg Boss ಡಾಗ್​ ಸತೀಶ್​ಗೆ ಯಾಕಿಂತ ಎಚ್ಚರಿಕೆ?