ಟಾಲಿವುಡ್‌ನಲ್ಲಿ 'ಘಾಟಿ' ಡಲ್ ಕಲೆಕ್ಷನ್, ಕನ್ನಡದಲ್ಲಿ ಏನಾಯ್ತು? ಪುಷ್ಪಾ ಅರುಣ್‌ ಕುಮಾರ್ ಏನಂತಾರೆ?

Published : Sep 13, 2025, 04:24 PM IST
Anushka Shetty Pushpa Arun Kumar

ಸಾರಾಂಶ

'ಅನುಷ್ಕಾ ಶೆಟ್ಟಿ ಕನ್ನಡದ ನಟಿ ಎಂಬುದು ಕೂಡ ನಾನು ಘಾಟಿ ಸಿನಿಮಾವನ್ನು ಇಲ್ಲಿ ಹಂಚಿಕೆಗೆ ತೆಗೆದುಕೊಳ್ಳಲು ಕಾರಣ. ಜೊತೆಗೆ, ನನ್ನ ನಿರ್ಮಾಣದ ಕೊತ್ತಲವಾಡಿ ಸಿನಿಮಾ ಬಿಡುಗಡೆ ಬಳಿಕ ನನಗೆ ಘಾಟಿ ಸಿನಿಮಾ ಡಿಸ್ಟ್ರಿಬ್ಯೂಷನ್‌ ಆಫರ್ ಬಂತು. ನಾನು ಸಿನಿಮಾದ ಯಾವುದೇ ಕೆಲಸದಲ್ಲಿ ಭಾಗಿಯಾಗಲು ರೆಡಿಯಾಗಿದ್ದೇನೆ.

ಟಾಲಿವುಡ್ ಸ್ಟಾರ್ ನಟಿ, ಕನ್ನಡತಿ ಅನುಷ್ಕಾ ಶೆಟ್ಟಿ (Anushka Shetty) ನಟನೆಯ 'ಘಾಟಿ' ಸಿನಿಮಾದ ಕಥೆ ಏನಾಯ್ತು? ಸೆಪ್ಟೆಂಬರ್ 05 ರಂದು (05 September 2025) ತೆಲುಗು ಹಾಗು ಕನ್ನಡದಲ್ಲಿ ತೆರೆಕಂಡ ಘಾಟಿ (Ghaati) ಸಿನಿಮಾ ಅಷ್ಟೇನೂ ಯಶಸ್ವಿ ಆಗಿಲ್ಲ ಎನ್ನಬಹುದು. ಕಾರಣ, 45 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿರುವ ಘಾಟಿ ಸಿನಿಮಾ, ತೆಲುಗು ರೀಸನ್‌ನಲ್ಲಿ ಇಲ್ಲಿಯವರೆಗೆ ಕೇವಲ 5 ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗುತ್ತಿದೆ. ಟಾಲಿವುಡ್‌ನಲ್ಲೇ ಘಾಟಿ ಚಿತ್ರವು ಇಷ್ಟು ಕಡಿಮೆ ಗಳಿಕೆ ಮಾಡಿದ್ದರೆ ಇನ್ನು ಕರ್ನಾಟಕದ ಕಥೆಯೇನು ಎಂಬ ಮಾತು ಕೇಳಿಬರುತ್ತಿದೆ.

ಅನುಷ್ಕಾ ಶೆಟ್ಟಿ ನಟನೆಯ ಘಾಟಿ ಚಿತ್ರವನ್ನು ಕರ್ನಾಟಕದಲ್ಲಿ ಪುಷ್ಪಾ ಅರುಣ್‌ ಕುಮಾರ್ (Pushpa Arun Kumar) ಅವರು ಹಂಚಿಕೆಗೆ ತೆಗೆದುಕೊಂಡಿದ್ದಾರೆ. ಕನ್ನಡ ವರ್ಷನ್ ಡಿಸ್ಟ್ರಿಬ್ಯೂಶನ್ ತೆಗೆದುಕೊಂಡಿರುವ 'ಕೊತ್ತಲವಾಡಿ' ನಿರ್ಮಾಪಕಿ ಪುಷ್ಪಾ ಅರುಣ್‌ ಕುಮಾರ್ ಅವರಿಗೆ ಇದು ಮೊಟ್ಟಮೊದಲ ಡಿಸ್ಟ್ರಿಬ್ಯೂಷನ್ ವ್ಯವಹಾರ. ಕರ್ನಾಟಕದಲ್ಲಿ ಹಂಚಿಕೆ ಮಾಡಲು ಪುಷ್ಪಾ ಅರುಣ್‌ ಕುಮಾರ್ ಅವರು ಎಷ್ಟು ರೇಟ್‌ಗೆ ತೆಗೆದುಕೊಂಡಿದ್ದಾರೆ ಎಂಬ ರಹಸ್ಯವನ್ನು ಅವರು ರಿವೀಲ್ ಮಾಡಿಲ್ಲ. ಹೀಗಾಗಿ ಪುಷ್ಪಾ ಅರುಣ್‌ ಕುಮಾರ್ ಅವರಿಗೆ ಈ ಚಿತ್ರದ ಡಿಸ್ಟ್ರಿಬ್ಯೂಶನ್‌ನಿಂದ ಲಾಭ ಆಯ್ತೋ ಲಾಸ್ ಆಯ್ತೋ ಎಂಬುದನ್ನು ಹೇಳೋದು ಕಷ್ಟ!

'ಅವರು ನನಗೆ ತಡರಾತ್ರಿ ಕರೆ ಮಾಡುತ್ತಿದ್ದರು' ಎಂದಿದ್ಯಾಕೆ ದರ್ಶನ್? ಗಂಟೆಗಟ್ಟಲೆ ಏನು ಮಾಡ್ತಾ ಇದ್ರಂತೆ?

ಅನುಷ್ಕಾ ಶೆಟ್ಟಿ ನಟನೆಯ 'ಘಾಟಿ' ಸಿನಿಮಾವನ್ನು ಕರ್ನಾಟಕದಲ್ಲಿ ಹಂಚಿಕೆ ಮಾಡಲು ತೆಗೆದುಕೊಂಡಿರುವ ಕನ್ನಡದ ನಿರ್ಮಾಪಕಿ ಪುಷ್ಪಾ ಅರುಣ್‌ ಕುಮಾರ್ ಅವರು ಆ ಬಗ್ಗೆ ಸಂದರ್ಶನವೊಂದರಲ್ಲಿ ಹೀಗೆ ಹೇಳಿದ್ದರು:- 'ಅನುಷ್ಕಾ ಶೆಟ್ಟಿ ಕನ್ನಡದ ನಟಿ ಎಂಬುದು ಕೂಡ ನಾನು ಈ ಘಾಟಿ ಸಿನಿಮಾವನ್ನು ಇಲ್ಲಿ ಹಂಚಿಕೆಗೆ ತೆಗೆದುಕೊಳ್ಳಲು ಕಾರಣ. ಜೊತೆಗೆ, ನನ್ನ ನಿರ್ಮಾಣದ ಕೊತ್ತಲವಾಡಿ ಸಿನಿಮಾ ಬಿಡುಗಡೆ ಬಳಿಕ ನನಗೆ ಘಾಟಿ ಸಿನಿಮಾ ಡಿಸ್ಟ್ರಿಬ್ಯೂಷನ್‌ ಆಫರ್ ಬಂತು. ನಾನು ಸಿನಿಮಾದ ಯಾವುದೇ ಕೆಲಸದಲ್ಲಿ ಭಾಗಿಯಾಗಲು ರೆಡಿಯಾಗಿದ್ದೇನೆ. ಈ ಕಾರಣಕ್ಕೆ ನಾನು ಈ ಅವಕಾಶ ಒಪ್ಪಿಕೊಂಡು ವ್ಯವಹಾರಕ್ಕೆ ನಿಂತಿದ್ದೇನೆ.

ಲಾಭ-ನಷ್ಟದ ಬಗ್ಗೆ ನಾನು ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ:

ಯಾವುದೇ ವ್ಯವಹಾರ, ಅದರಲ್ಲೂ ಸಿನಿಮಾ ಬಿಸಿನೆಸ್ ಎಂದ್ಮೇಲೆ ಲಾಭ-ನಷ್ಟ ಇದ್ದಿದ್ದೇ. ಆದರೆ, ಅದೇ ಕೆಲಸ ಎಂದ ಮೇಲೆ ಸಿಕ್ಕ ಅವಕಾಶ ಉಪಯೋಗಿಸಿಕೊಳ್ಳಲೇಬೇಕು. ಹೀಗಾಗಿ ನಾನು ನನ್ನನ್ನು ಹುಡುಕಿಕೊಂಡು ಬಂದಿರುವ 'ಘಾಟಿ' ಸಿನಿಮಾದ ಹಂಚಿಕೆ ಚಾನ್ಸ್ ಬಳಸಿಕೊಂಡಿದ್ದೇನೆ. ಲಾಭ-ನಷ್ಟದ ಬಗ್ಗೆ ನಾನು ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಸಿನಿಮಾ ಉದ್ಯಮಕ್ಕೆ ನಾನು ಬಂದಿದ್ದೇನೆ. ಇಲ್ಲಿ ಲಾಭ-ನಷ್ಟ ಎರಡನ್ನೂ ಸ್ವೀಕರಿಸಲೇಬೇಕು. ಒಂದರಲ್ಲಿ ನಷ್ಟವಾದರೆ ಇನ್ನೊಂದರಲ್ಲಿ ಲಾಭ ಕಾಣಬಹುದು. ನಾನು ಯಾವುದನ್ನೇ ಆಗಲಿ ಒಮ್ಮೆ ಶುರು ಮಾಡಿದೆ ಎಂದರೆ ಹಿಂದೆ ಹೋಗುವ ಮಾತೇ ಇಲ್ಲ' ಎಂದಿದ್ದರು ಪುಷ್ಪಾ ಅರುಣ್‌ ಕುಮಾರ್.

ಟಾಲಿವುಡ್ ಮಾರ್ಕೆಟ್ ಗಳಿಕೆ ಇಲ್ಲಿಯವೆರೆಗೆ ಕೇವಲ 5 ಕೋಟಿ?

ಚಿಕ್ಕಣ್ಣನಿಗೆ ಮಹೇಶ್ ಕುಮಾರ್ ನಿರ್ದೇಶನ; 'ಫೈಟರ್' ನಿರ್ಮಾಪಕರ ಚಿತ್ರಕ್ಕೆ ಮುಹೂರ್ತ ಫಿಕ್ಸ್!

ಘಾಟಿ ಸಿನಿಮಾ ಡಿಸ್ಟ್ರಿಬ್ಯೂಷನ್ ತೆಗೆದುಕೊಂಡು ಅವರು ಈ ಮಾತುಗಳನ್ನು ಹೇಳಿದಾಗ ಸಿನಿಮಾ ಇನ್ನೂ ಬಿಡುಗಡೆಯೇ ಆಗಿರಲಿಲ್ಲ. ಆದರೆ ಈಗ ರಿಲೀಸ್ ಆಗಿ ಸಿನಿಮಾ ಸೌಂಡ್ ಮಾಡುತ್ತಿಲ್ಲ. ಜೊತೆಗೆ, ಟಾಲಿವುಡ್ ಮಾರ್ಕೆಟ್ ಗಳಿಕೆ ಇಲ್ಲಿಯವೆರೆಗೆ ಕೇವಲ 5 ಕೋಟಿ ಎನ್ನಲಾಗುತ್ತಿದೆ. ಜೊತೆಗೆ, ನಟಿ ಅನುಷ್ಕಾ ಶೆಟ್ಟಿಯವರು ಈ ಚಿತ್ರದ ಪ್ರಚಾರಕ್ಕೆ ಬಂದಿರಲಿಲ್ಲ. ಆದರೆ, ಈ ಬಗ್ಗೆ ಪುಷ್ಪಾ ಅರುಣ್‌ ಕುಮಾರ್ ಅವರನ್ನು ಲಾಭ-ನಷ್ಟದ ಬಗ್ಗೆ ಪ್ರಶ್ನೆ ಕೇಳುವಂತೆಯೇ ಇಲ್ಲ. ಕಾರಣ, ಅವರು ಆ ಬಗ್ಗೆ ನಾನು ಚಿಂತಿಸುವುದಿಲ್ಲ ಎಂದು ಮೊದಲೇ ಹೇಳಿಬಿಟ್ಟಿದ್ದಾರೆ. ಒಟ್ಟಿನಲ್ಲಿ, ಟಾಲಿವುಡ್ 'ಸ್ವೀಟಿ'ಯ 'ಘಾಟಿ' ಸಿನಿಮಾ ಸೂಪರ್ ಹಿಟ್ ಅಂತೂ ಆಗಿಲ್ಲ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸೊಂಟಕ್ಕೆ ಸನ್‌ಗ್ಲಾಸ್‌ ಸಿಕ್ಕಿಸಿಕೊಂಡು ನಟಿಯ ಪೋಸ್‌.. ಟ್ರೋಲಿಗರ ಕಾಮೆಂಟ್ಸ್‌ಗೆ ಕಂಗಾಲಾದ ಸೀರಿಯಲ್‌ ತಾರೆ!
ವೈಷ್ಣವಿ ಗೌಡ Romantic ಅಂತೆ, ಆದ್ರೆ ಮೊದ್ಲು I Love You ಹೇಳಿದ್ದು ಮಾತ್ರ ಗಂಡ…