
ಜೋಗಿ ಪ್ರೇಮ್ ನಿರ್ದೇಶನ, ಧ್ರುವ ಸರ್ಜಾ ನಾನೆಯ KD ಸಿನಿಮಾದಲ್ಲಿ ನಟ ಕಿಚ್ಚ ಸುದೀಪ್ ನಟಿಸಲಿದ್ದಾರೆ. ಈ ಮೊದಲು, ಧ್ರುವ ಸರ್ಜಾ ಸಿನಿಮಾದಲ್ಲಿ ಮುಖ್ಯವಾದ ಪಾತ್ರವೊಂದನ್ನು ನಟ ದರ್ಶನ್ ತೂಗುದೀಪ ಅವರು ನಿರ್ವಹಿಸಲಿದ್ದಾರಎ ಎನ್ನಲಾಗಿತ್ತು. ಆದರೆ, ನಟ ದರ್ಶನ್ ಅವರು ಸದ್ಯಕ್ಕೆ ಜೈಲು ಸೇರಿರುವುದರಿಂದ ಆ ಪಾತ್ರ ನಟ ಸುದೀಪ್ ಪಾಲಾಗಿದೆ ಎನ್ನಲಾಗುತ್ತಿದೆ. ಈ ಮೊದಲು ನಟ ದರ್ಶನ್ ಕೆಡಿ ಚಿತ್ರದಲ್ಲಿ ನಟಿಸುತ್ತಾರೆ ಎಂದೇ ಸುದ್ದಿಯಾಗಿತ್ತು.
ಹೌದು, ಕೆಡಿ ಸಿನಿಮಾದಲ್ಲಿ ಇಂದಿನಿಂದ ಹೈದ್ರಾಬಾದ್ ನಲ್ಲಿ ಸುದೀಪ್ ದ್ರುವ ಕಾಂಬಿನೇಶನ್ ಶೂಟಿಂಗ್ ಶುರುವಾಗಲಿದೆ. ಈ ಚಿತ್ರದ ಸಿನಿಮಾ ಚಿತ್ರೀಕರಣದಲ್ಲಿ ಸುದೀಪ್ ಭಾಗಿಯಾಗಲಿದ್ದಾರೆ ಎನ್ನಲಾಗಿದೆ. ಕೆಡಿ ಪಾರ್ಟ್ 2ಗೆ ಲೀಡ್ ಕೊಡೊ ದೃಶ್ಯಗಳ ಶೂಟಿಂಗ್ ನಡೆಯಲಿದೆ ಎನ್ನಲಾಗುತ್ತಿದೆ. ಕೆಡಿ ಚಿತ್ರದ ಪಾರ್ಟ್ 2 ಸಿನಿಮಾದಲ್ಲಿ ನಟ ಕಿಚ್ಚ ಸುದೀಪ್ ಸಿನಿಮಾದ ಪೂರ್ತಿ ಭಾಗದಲ್ಲಿಯೂ ಇರುತ್ತಾರೆ ಎನ್ನಲಾಗಿದೆ.
ಕೆಡಿ ಸಿನಿಮಾದಲ್ಲಿ ಸುದೀಪ್ ಅವರಿಗೆ ಒಪ್ಪುವ ಪಾತ್ರದ ಸೃಷ್ಟಿಯಾಗಿದೆ ಎನ್ನಲಾಗುತ್ತಿದೆ. ನಿರ್ದೇಶಕ ಜೋಗಿ ಪ್ರೆಮ್ ನಟ ಕಿಚ್ಚ ಸುದೀಪ್ ಅವರಿಗೆ ಅತ್ಯುತ್ತಮ ಪಾತ್ರ ಸೃಷ್ಟಿಸಿ ಕಥೆ ಮಾಡಿರೋ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅದು ಎಂಥ ಪಾತ್ರ, ಸಿನಿಮಾದಲ್ಲಿ ಆ ಪಾತ್ರದ ಹೆಸರೇನು ಎಂಬ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ. ನಟ ಕಿಚ್ಚ ಸುದೀಪ್ ಅವರಿಗೆ ಈ ಪಾತ್ರ ನೀವೇ ಮಾಡಬೇಕು ಎಂದು ದುಂಬಾಲು ಬಿದ್ದು ನಟಿಸಲು ಪ್ರೇಮ್ ಒಪ್ಪಿಸಿದ್ದಾರೆ ಎನ್ನಲಾಗಿದೆ.
ನಟ ಧ್ರುವ ಸರ್ಜಾ ಅವರು ಅವರು ಕಿಚ್ಚ ಸುದೀಪ್ ಅವರಿಗೆ ತಮ್ಮನ ಥರ ಇದ್ದಾರೆ ಎನ್ನಲಾಗುತ್ತಿದೆ. ಅವರಿಬ್ಬರ ನಡುವೆ ಸಂಬಂಧ ಆಪ್ತವಾಗಿದ್ದು, ಇದೀಗ ಸಿನಿಮಾದಲ್ಲಿ ಕೂಡ ಒಟ್ಟಾಗಿ ನಟಿಸುತ್ತಿದ್ದಾರೆ. ಈ ಮೂಲಕ ಅವರಿಬ್ಬರ ಅಭಿಮಾನಿಗಳಿಗೆ ಸಖತ್ ಸಂತೋಷ ಉಂಟಾಗಿದೆ ಎನ್ನಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.