ಅರ್ಧಕ್ಕೆ ನಿಂತಿದ್ದ ಚಿತ್ರಕ್ಕೆ ಮರುಜೀವ ಕೊಟ್ಟ ಪುನೀತ್‌!

Published : Jan 12, 2019, 10:13 AM IST
ಅರ್ಧಕ್ಕೆ ನಿಂತಿದ್ದ ಚಿತ್ರಕ್ಕೆ ಮರುಜೀವ ಕೊಟ್ಟ ಪುನೀತ್‌!

ಸಾರಾಂಶ

ಪ್ರಜ್ವಲ್‌ ದೇವರಾಜ್‌ ಪತ್ನಿ ರಾಗಿಣಿ ಚಂದ್ರನ್‌ ಅಭಿನಯದಲ್ಲಿ ಸೆಟ್ಟೇರಿದ್ದ ‘ವಿಜಯದಶಮಿ’ ಸಿನಿಮಾ ಏನಾಯಿತು? ಚಿತ್ರೀಕರಣ ಶುರುವಾಗಿ ಎರಡ್ಮೂರು ದಿನಕ್ಕೆ ನಿರ್ಮಾಪಕರು ಚಿತ್ರವನ್ನು ಕೈ ಬಿಟ್ಟು ಹೋಗಿದ್ದಾರೆ. ಚಿತ್ರ ಟೇಕಾಫ್‌ ಆಗಲಿಲ್ಲ ಎಂದುಕೊಳ್ಳುತ್ತಿರುವಾಗಲೇ ಪುನೀತ್‌ರಾಜ್‌ಕುಮಾರ್‌ ‘ವಿಜಯದಶಮಿ’ಗೆ ಸಾಥ್‌ ನೀಡಲು ಬಂದಿದ್ದಾರೆ.

ಅರ್ಥಾತ್‌ ರಘು ಸಮಥ್‌ರ್‍ ನಿರ್ದೇಶನದ ಈ ಚಿತ್ರಕ್ಕೆ ಅಪ್ಪು ಮರು ಜೀವ ಕೊಡುತ್ತಿದ್ದಾರೆ. ಆದರೆ, ಚಿತ್ರದ ಹೆಸರು ಬದಲಾಗಲಿದೆ. ಈಗಾಗಲೇ ಫಿಕ್ಸ್‌ ಆಗಿದ್ದ ‘ವಿಜಯದಶಮಿ’ ಬದಲು ಬೇರೊಂದು ಹೆಸರನ್ನು ನಾಮಕರಣ ಮಾಡಿ ರೀ-ಲಾಂಚ್‌ ಮಾಡುವ ಯೋಚನೆ ಪಿಆರ್‌ಕೆ ಪ್ರೊಡಕ್ಷನ್‌ನ ಪುನೀತ್‌ ರಾಜ್‌ಕುಮಾರ್‌ ಅವರ ಯೋಚನೆ.

ರಘು ಸಮಥ್‌ರ್‍ ಅವರ ಈ ಸಿನಿಮಾ ಮಹಿಳಾ ಪ್ರಧಾನವಾದ ಚಿತ್ರ. ಮೊದಲ ಬಾರಿಗೆ ರಾಗಿಣಿ ಚಂದ್ರನ್‌ ನಾಯಕಿಯಾಗಿ ನಟಿಸುತ್ತಿರುವ ಸಿನಿಮಾ. ಚಿತ್ರಕ್ಕೆ ಬೇಕಾದ ಪೂರ್ವ ತಯಾರಿ ಮಾಡಿಕೊಂಡೇ ಚಿತ್ರೀಕರಣ ಮಾಡಲಾಗಿತ್ತು. ಆದರೆ, ಯಾಕೋ ಮೊದಲೇ ಗೊತ್ತು ಮಾಡಲಾಗಿದ್ದ ನಿರ್ಮಾಪಕರು ಚಿತ್ರವನ್ನು ಮುಂದುವರಿಸಲಿಲ್ಲ. ಹೀಗಾಗಿ ಇದೇ ಸಿನಿಮಾ ಈಗ ಪವರ್‌ಸ್ಟಾರ್‌ ಕೈಗೆ ಬಂದಿದೆ.

ಆ ಮೂಲಕ ಅಪ್ಪು, ಮಹಿಳಾ ಪ್ರಧಾನ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಹಾಗೆ ನೋಡಿದರೆ ಇದು ಅವರ ಬ್ಯಾನರ್‌ನ ನಾಲ್ಕನೇ ನಿರ್ಮಾಣದ ಸಿನಿಮಾ. ಹೇಮಂತ್‌ ನಿರ್ದೇಶನದಲ್ಲಿ ‘ಕವಲುದಾರಿ’, ರಾಜ್‌ ಬಿ ಶೆಟ್ಟಿನಟನೆಯ ‘ಮಾಯಾಬಜಾರ್‌’ ಹಾಗೂ ಪನ್ನಗಭರಣ ನಿರ್ದೇಶನದ, ಡ್ಯಾನೀಶ್‌ ಸೇಠ್‌ ಅಭಿನಯದ ಚಿತ್ರಗಳು ಶುರುವಾಗಿವೆ. ಯಾವ ಚಿತ್ರವೂ ಇನ್ನೂ ಬಿಡುಗಡೆಯಾಗಿಲ್ಲ. ಆದರೆ, ಈ ಸಾಲಿಗೆ ಈಗ ರಾಗಿಣಿ ಚಂದ್ರನ್‌ ಸಿನಿಮಾ ಸೇರಿಕೊಂಡಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಮೋಸ ಮಾಡೋದು ಹೇಳ್ಕೊಟ್ಟಿಲ್ಲ:‌ ಪತಿ ಯುವ ರಾಜ್‌ಕುಮಾರ್‌, ಆ ನಟಿ ಬಗ್ಗೆ ಶ್ರೀದೇವಿ ಬೈರಪ್ಪ ಖಡಕ್‌ ಪೋಸ್ಟ್
ಮರ್ಡರ್ ಕೇಸ್ ಟ್ರಯಲ್ ಶುರು.. ಡಿಜಿಪಿ ಅಲೋಕ್ ಬಳಿ ದರ್ಶನ್ ಹೇಳಿದ್ದೇನು? ಸೀಕ್ರೆಟ್ ಇಲ್ಲಿದೆ..