ಕನ್ನಡ ಚಿತ್ರಗಳ ಕಡೆಗಣನೆ :ಬುಕ್'ಮೈ ಶೋ ವಿರುದ್ಧ ನಿರ್ಮಾಪಕ ಮಂಜು ಆಕ್ರೋಶ

By Suvarna Web DeskFirst Published Oct 23, 2017, 8:37 PM IST
Highlights

ನಮ್ಮ ಸಿನಿಮಾಗಳನ್ನು ತುಳಿಯುವ ಕೆಲಸ ಬುಕ್'ಮೈ ಶೋ'ನಿಂದ ಆಗುತ್ತಿದೆ. ಕನ್ನಡ ಸಿನಿಮಾಗಳು ಚೆನ್ನಾಗಿದ್ದರೂ ಪರ್ಸೆಟೆಂಜ್ ಕೊಡುವುದಿಲ್ಲ.

ಬೆಂಗಳೂರು(ಅ.23): ಪರಭಾಷೆಯವರಿಂದ ಹಣವನ್ನು ಪಡೆದು ಕನ್ನಡ ಸಿನಿಮಾಗಳನ್ನು ಮೂಲೆಗುಂಪು ಮಾಡುತ್ತಿರುವ ಬುಕ್'ಮೈ ಶೋ ವಿರುದ್ಧ ನಿರ್ಮಾಪಕ ಕೆ.ಮಂಜು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅನ್ಯ ಭಾಷೆಯ ವಿತರಕರಿಂದ ಹಣವನ್ನು ಪಡೆದು ಅವರ ಸಿನಿಮಾಗಳಿಗೆ ಹೆಚ್ಚು ಪರ್ಸೆಂಟೇಜ್ ಕೊಡುತ್ತಿದ್ದು, ನಮ್ಮ ಸಿನಿಮಾಗಳನ್ನು ತುಳಿಯುವ ಕೆಲಸ ಬುಕ್'ಮೈ ಶೋ'ನಿಂದ ಆಗುತ್ತಿದೆ. ಕನ್ನಡ ಸಿನಿಮಾಗಳು ಚೆನ್ನಾಗಿದ್ದರೂ ಪರ್ಸೆಟೆಂಜ್ ಕೊಡುವುದಿಲ್ಲ.

ಈ ರೀತಿ ಆದರೆ ನಿರ್ಮಾಪಕರ ಗತಿಯೇನು?  ಒಳ್ಳೆ ಸಿನಿಮಾಗಳು ಇದ್ದರೂ ಸಹ ಕನ್ನಡ ಚಿತ್ರಗಳಿಗೆ ಕರ್ನಾಟಕದಲ್ಲೆ ಬೆಂಬಲ ಇಲ್ಲ. ಈ ತಾರತಮ್ಯ ಧೋರಣೆಯ ವಿರುದ್ಧ ವಾಣಿಜ್ಯ ಮಂಡಳಿಯಲ್ಲಿ ದೂರು ಕೊಡುವುದಾಗಿ ತಿಳಿಸಿದ್ದಾರೆ. ಕೆ. ಮಂಜು ನಿರ್ಮಾಣದ ಕನ್ನಡ ಚಿತ್ರ 'ಸತ್ಯಹರಿಶ್ಚಂದ್ರ' ಇತ್ತೀಚಿಗಷ್ಟೆ ಬಿಡುಗಡೆಯಾಗಿದ್ದು,  ಆನ್'ಲೈನ್ ಬುಕ್ಕಿಂಗ್ ಸಂಸ್ಥೆ ಈ ಚಿತ್ರವನ್ನು ಕಡೆಗಣಿಸಿರುವುದರಿಂದ ಮಂಜು ಕೋಪಗೊಂಡಿದ್ದಾರೆ.  

click me!