10 ವರ್ಷದ ಗೆಳೆಯರ ಹೊಸ ಜೀವನ: ಇಂದು ಸಂಜೆ ಚಿರು, ಮೇಘನಾ ನಿಶ್ಚಿತಾರ್ಥ

Published : Oct 22, 2017, 09:03 AM ISTUpdated : Apr 11, 2018, 12:38 PM IST
10 ವರ್ಷದ ಗೆಳೆಯರ ಹೊಸ ಜೀವನ: ಇಂದು ಸಂಜೆ ಚಿರು, ಮೇಘನಾ ನಿಶ್ಚಿತಾರ್ಥ

ಸಾರಾಂಶ

ಚೆಂದವನದಲ್ಲಿ ಮತ್ತೊಂದು ಚೆಂದದ ವಿವಾಹ. ಚಿರು-ಮೇಘನಾ ಅದ್ಧೂರಿ ಎಂಗೇಜ್ಮೆಂಟ್.ಲೀಲಾ ಪ್ಯಾಲೆಸ್'ನಲ್ಲಿ ಸಂಜೆ ನಡೆಯಲಿದೆ ಅದ್ದೂರಿ ನಿಶ್ಚಿತಾರ್ಥ. ಸುಮಧುರ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ ಚಿತ್ರರಂಗದ ಗಣ್ಯರು.

ಚಿರಂಜೀವಿ ಸರ್ಜಾ.ಕನ್ನಡದ ಯುವ ಸಾಮ್ರಾಟ್.ಮೇಘನಾ ರಾಜ್.ಬಹು ಭಾಷಾ ನಟಿ.ಇವರಿಬ್ಬರ ಗೆಳೆತನಕ್ಕೆ 10 ವರ್ಷದ ಇತಿಹಾಸ. ಭಾವನಾತ್ಮಕವಾಗಿ ಒಂದಾಗಿದ್ದ ಈ ಗೆಳೆಯರು ಈಗ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಡುತ್ತಿದ್ದಾರೆ.

ಚಿರಂಜೀವಿ - ಮೇಘನಾ ನಿಶ್ಚಿತಾರ್ಥ ಇಂದು ಸಂಜೆ ಲೀಲಾ ಪ್ಯಾಲೆಸ್'ನಲ್ಲಿ ಅರೇಂಜ್ ಆಗಿದೆ. ಗುರು-ಹಿರಿಯರ ಸಮ್ಮುಖದಲ್ಲಿಯೇ ಕ್ರೈಸ್ತ ಸಂಪ್ರದಾಯದಂತೆ ಚಿರು ಮತ್ತು ಮೇಘನಾ ಉಂಗುರು ಬದಲಿಸಿಕೊಳ್ಳಲಿದ್ದಾರೆ.

ಮೇಘಾನಾ ಅವರ ಜೆ.ಪಿ.ನಗರದ ಮನೇಲಿ ಹಿಂದು ಸಂಪ್ರದಾಯದಂತೆ ನಿಶ್ಚಿತಾರ್ಥ ಕಾರ್ಯಕ್ರಮಗಳೂ ನಡೆಯುತ್ತಿವೆ.   ಸಂಜೆ ಎಂಗೇಜ್ಮೆಂಟ್ ಅದ್ದೂರಿಯಾಗಿ ನಡೆಯಲಿದೆ. ಚೆಂದನವನದ ಈ ಜೋಡಿಯ ನಿಶ್ಚಿತಾರ್ಥ ಸಂಭ್ರಮದಲ್ಲಿ ಆಪ್ತರು ಸೇರಿ ಚಿತ್ರರಂಗದ ಹಲವರು ಪಾಲ್ಗೊಳ್ಳುತ್ತಿದ್ದಾರೆ. ಇನ್ನು ಡಿಸೆಂಬರ್ 06 ರಂದು ಈ ಜೋಡಿಯ ಮದುವೆ ಎಂಬ ಸುದ್ದಿನೂ ಇದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನಟಿ ಮಂಜು ಭಾಷಿಣಿ ಫ್ಯಾನ್ಸ್​ ಕಣ್ಣಿಗೆ ಕಾಣಿಸಿದ್ರೆ ನಿಮ್​ ಕಥೆ ಗೋವಿಂದ: Bigg Boss ಡಾಗ್​ ಸತೀಶ್​ಗೆ ಯಾಕಿಂತ ಎಚ್ಚರಿಕೆ?
ರಾಜ್ ನಿಧಿಮೋರುಗಾಗಿ ಧರ್ಮ ಬದಲಾಯಿದ್ರಾ ಸಮಂತಾ? ಮದುವೆಯ ರಹಸ್ಯ ರಿವೀಲ್!