
ಅನೇಕ ಬಾಲಿವುಡ್ ನಟಿಯರು ತಮ್ಮ ದಿಟ್ಟ ಹೇಳಿಕೆಗಳಿಗೆ ಹೆಸರುವಾಸಿಯಾಗಿದ್ದಾರೆ. ಈ ಮೂಲಕವೇ ಕಾಂಟ್ರವರ್ಸಿಯನ್ನೂ ಸೃಷ್ಟಿಸಿಕೊಳ್ಳುವುದು ಇದೆ. ಆದರೆ ನಟಿ ಪ್ರಿಯಾಂಕಾ ಚೋಪ್ರಾಗೆ ಇದರಲ್ಲಿ ಯಾವುದೇ ರೀತಿಯ ಆಸಕ್ತಿ ಇಲ್ಲ. ವಿವಾದಾತ್ಮಕ ಹೇಳಿಕೆಗಳನ್ನು ಕೊಡುವುದರಿಂದ ಪ್ರಿಯಾಂಕಾ ಸ್ವಲ್ಪ ದೂರವೇ. ಪ್ರಿಯಾಂಕಾ ಚೋಪ್ರಾ ಬಾಲಿವುಡ್‌ನಿಂದ ಹಾಲಿವುಡ್‌ವರೆಗೆ ಅನೇಕ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಪ್ರಿಯಾಂಕಾ ಚೋಪ್ರಾ ತಮ್ಮ ನಟನೆಯಿಂದ ಸಿನಿಮಾ ಕ್ಷೇತ್ರದಲ್ಲಿ ಹೊಸ ಸ್ಥಾನವನ್ನು ಸೃಷ್ಟಿಸಿಕೊಂಡವರು. ಆದರೂ ಕೆಲವೊಮ್ಮೆ ಕೆಲವೊಂದು ಮಾತುಗಳು ವಿವಾದ ಸೃಷ್ಟಿಸಿಬಿಡುತ್ತವೆ. ಇದೀಗ ಅವರು ಕನ್ಯತ್ವದ ಬಗ್ಗೆ ಮಾತನಾಡಿ, ವಿವಾದ ಸೃಷ್ಟಿಸಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಅವರು ನೀಡಿರುವ ಈ ಹೇಳಿಕೆ ಇದೀಗ ಭಾರಿ ಸದ್ದು ಮಾಡುತ್ತಿದೆ. ವಾದ-ಪ್ರತಿವಾದಗಳ ಸುರಿಮಳೆಯೇ ಆಗುತ್ತಿದೆ. ಸಾಮಾಜಿಕ ಮಾಧ್ಯಮದಲ್ಲಿ ಅವರ ಹೇಳಿಕೆ ಹಲ್ಚಲ್ ಸೃಷ್ಟಿಸಿರುವುದರ ಜೊತೆಗೆ ಬಿಸಿ ಚರ್ಚೆಯೂ ಆಗುತ್ತಿದೆ.
ಅಷ್ಟಕ್ಕೂ ನಟಿ ಪ್ರಿಯಾಂಕಾ ಚೋಪ್ರಾ ಹೇಳಿದ್ದು ಮದುವೆಯಾಗುವ ಪುರುಷರಿಗೆ. ನೀವು ಮದುವೆಯಾಗುವ ಹುಡುಗಿಯರು ಕನ್ಯೆಯರೇ ಎಂದು ನೋಡಲು ಹೋಗಬೇಡಿ. ಮದುವೆಯಾಗಲು ಕನ್ಯೆಯೇ ಬೇಕು ಎನ್ನುವ ಬಗ್ಗೆ ಹೇಳುವುದು ಸರಿಯಲ್ಲ ಎಂದಿರುವ ಅವರು ಇದಕ್ಕೆ ಕಾರಣವನ್ನೂ ಕೊಟ್ಟಿದ್ದಾರೆ. 'ಕನ್ಯತ್ವ' ಒಂದು ರಾತ್ರಿಯ ಆಸ್ತಿ. ಆದ್ದರಿಂದ ತಮಗೆ ಕನ್ಯೆಯೇ ಬೇಕು ಎನ್ನುವುದು ಸರಿಯಲ್ಲ. ಅದರ ಬದಲು ಉತ್ತಮ ನಡವಳಿಕೆ ಮಾತ್ರ ಜೀವನಕ್ಕೆ ಬೇಕಾಗಿದೆ ಎಂದಿದ್ದಾರೆ. ಸಂಬಂಧ ಎನ್ನುವುದೇ ಸಂಪೂರ್ಣ ನಾಶವಾಗುತ್ತಿರುವ, ಅದರಲ್ಲಿಯೂ ಹದಿಹರೆಯದವರಲ್ಲಿ ಡೇಟಿಂಗ್, ಅಕ್ರಮ ಸಂಬಂಧ ಎನ್ನುವುದು ಎಲ್ಲವೂ ಮಾಮೂಲಾಗಿದ್ದು, ಮದುವೆಗೂ ಮುನ್ನವೇ ಎಲ್ಲವನ್ನೂ ಮುಗಿಸುತ್ತಿರುವ ಈ ಕಾಲಘಟ್ಟದಲ್ಲಿ ಖ್ಯಾತ ನಟಿಯೊಬ್ಬಳು ಈ ರೀತಿ ಮಾತನಾಡಿರುವುದನ್ನು ಹಲವರು ಸಹಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಪ್ರಿಯಾಂಕಾ ಚೋಪ್ರಾ ವಿರುದ್ಧ ಹಲವರು ಹರಿಹಾಯುತ್ತಿದ್ದಾರೆ.
ಇನ್ನು ತಮಗಿಂತ ತುಂಬಾ ಚಿಕ್ಕವರಾಗಿರುವ ನಿಕ್ ಅವರನ್ನು ಮದುವೆಯಾಗಿರುವ ಪ್ರಿಯಾಂಕಾರನ್ನು ಟ್ರೋಲ್ ಮಾಡುತ್ತಿರುವ ನೆಟ್ಟಿಗರು, ನೀವ್ಯಾಕೆ ಹಣ ನೋಡಿ ಮದ್ವೆಯಾದ್ರಿ. ಇಂದು ಹಣ ಒಂದಿದ್ದರೆ ಎಂಥವರನ್ನೂ ಮದುವೆಯಾಗುತ್ತಿದ್ದಾರೆ ಹುಡುಗಿಯರು. ನಿಮ್ಮಂಥವರಿಗೆ ಹಣವೇ ಎಲ್ಲವೂ ಆಗಿದೆ. ಹಣ ಯಾಕೆ ಪುರುಷನ ಗುಣ ನೋಡಿ ಮದ್ವೆಯಾಗಬಹುದಲ್ವಾ? ನೀವೆಲ್ಲಾ ಮದುವೆಗೂ ಮುನ್ನವೇ ಕನ್ಯತ್ವ ಕಳೆದುಕೊಂಡಿರುವ ಕಾರಣವನ್ನೇ ಮುಂದಿಟ್ಟುಕೊಂಡು ಬೇರೆಯವರಿಗೂ ಇಂಥ ಕೆಟ್ಟ ಸಲಹೆ ಕೊಡಲು ಬರಬೇಡಿ. ಮೊದಲು ಹಣದ ದುರಾಸೆ ಬಿಟ್ಟು ಆಮೇಲೆ ಉಳಿದವರಿಗೆ ಬುದ್ಧಿಮಾತು ಹೇಳಿ ಎಂದು ಹೇಳುತ್ತಿದ್ದಾರೆ. ಉತ್ತಮ ನಡವಳಿಕೆ ಮಾತ್ರ ಜೀವನಕ್ಕೆ ಬೇಕಾಗಿದೆ ಎಂದಿರುವ ನಟಿಯ ಮಾತನ್ನೇ ಮುಂದಿಟ್ಟುಕೊಂಡು ಮತ್ತೆ ಕೆಲವರು, ಮದುವೆಗೂ ಮುನ್ನವೇ ಯಾರದ್ದೋ ಜೊತೆ ದೈಹಿಕ ಸಂಬಂಧ ಬೆಳೆಸುವವಳು ನಿಮ್ಮ ದೃಷ್ಟಿಯಲ್ಲಿ ಉತ್ತಮ ನಡವಳಿಕೆ ಹೊಂದಿದವಳೇ ಎಂದು ಪ್ರಶ್ನಿಸುತ್ತಿದ್ದಾರೆ.
ಇನ್ನು ನಟಿಯ ಕುರಿತು ಹೇಳುವುದಾದರೆಗೆ, ಇದಾಗಲೇ ಹಲವಾರು ಬ್ಲಾಕ್ ಬಸ್ಟರ್ ಚಿತ್ರ ಕೊಟ್ಟವರು ಪ್ರಿಯಾಂಕಾ. ಮದುವೆಗೂ ಮುನ್ನವೇ ಇವರ ಹೆಸರು ಕೂಡ ಅನೇಕ ಮಂದಿಯ ಜೊತೆ ಕೇಳಿಬಂದಿತ್ತು. ಇದೀಗ ಮಗುವಿನ ಅಮ್ಮ ಕುಡ ಆಗಿದ್ದಾರೆ. ಬಾಲಿವುಡ್‌ನಿಂದ ಹಾಲಿವುಡ್‌ವರೆಗೆ ತಮ್ಮ ನಟನೆಯಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಮಿಸ್ ವರ್ಲ್ಡ್ ಪುಸ್ತಕದೊಂದಿಗೆ ಪ್ರಾರಂಭವಾದ ಅವರ ವೃತ್ತಿಜೀವನವು ಇಂದು ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. 2025 ವರ್ಷವು ಅವರ ವೃತ್ತಿಜೀವನಕ್ಕೆ ಅನೇಕ ಹೊಸ ಆರಂಭಗಳ ವರ್ಷವಾಗಲಿದೆ. ಈ ವರ್ಷ, ಅವರು ಚಲನಚಿತ್ರೋದ್ಯಮದಲ್ಲಿ ಅನೇಕ ಪ್ರಮುಖ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದಾರೆ ಮತ್ತು ಕೆಲವು ದೊಡ್ಡ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುವ ಅವಕಾಶವನ್ನು ಪಡೆದಿದ್ದಾರೆ. ಪ್ರಿಯಾಂಕಾ ಅವರ ಪ್ರಮುಖ ಚಿತ್ರಗಳಲ್ಲಿ ಒಂದು "ದಿ ಬ್ಲಫ್". ಈ ಚಿತ್ರವು 19 ನೇ ಶತಮಾನದಲ್ಲಿ ಕೆರಿಬಿಯನ್ ಸಮುದ್ರದಲ್ಲಿ ನಡೆಯುತ್ತದೆ, ಇದರಲ್ಲಿ ನಾವು ಮಹಿಳಾ ಕಡಲುಗಳ್ಳರ ಪಾತ್ರವನ್ನು ನೋಡುತ್ತೇವೆ. ಈ ಪಾತ್ರವು ಅವರ ಆಕ್ಷನ್ ಮತ್ತು ನಟನಾ ಕೌಶಲಕ್ಕೆ ಹೆಸರುವಾಸಿಯಾಗಿದೆ. ಈ ಚಿತ್ರವು ಅಕ್ಟೋಬರ್ 10, 2025 ರಂದು ಬಿಡುಗಡೆಯಾಗಲಿದೆ. ಅವರ ಇನ್ನೊಂದು ಪ್ರಮುಖ ಯೋಜನೆ "ಹೆಡ್ಸ್ ಆಫ್ ಸ್ಟೇಟ್". ಇದರಲ್ಲಿ ಅವರು, ಪ್ರಸಿದ್ಧ ಹಾಲಿವುಡ್ ನಟರಾದ ಜಾನ್ ಸೆನಾ ಮತ್ತು ಇದ್ರಿಸ್ ಎಲ್ಬಾ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ರೋಸಿ ಹಾ ಚಿತ್ರಪತ್ ಜುಲೈ 2, 2025 ರಂದು ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.