
ನವದೆಹಲಿ (ಜು. 22): ದೀಪಾವಳಿ ಆಚರಣೆ ವೇಳೆ ಪಟಾಕಿ ಹಚ್ಚದಿರಿ, ಇದರಿಂದ ಅಸ್ತಮಾ ರೋಗ ಹರಡುತ್ತದೆ ಎಂದು ಬುದ್ಧಿಮಾತು ಹೇಳಿದ್ದ ನಟಿ ಪ್ರಿಯಾಂಕಾ ಚೋಪ್ರಾ, ಮಿಯಾಮಿ ಯಾಚ್ ಬೀಚ್‌ನಲ್ಲಿ ಪತಿ ನಿಕ್ ಜೋನ್ಸ್ ಮತ್ತು ತಾಯಿ ಮಧು ಛೋಪ್ರಾ ಜತೆಗೂಡಿ ಅವರೇ ಧಂ ಹೊಡೆದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ತೀವ್ರ ತರಾಟೆಗೆ ಒಳಗಾಗಿದ್ದಾರೆ.
ಪ್ರಿಯಾಂಕಾ ಕಳೆದ ವರ್ಷ ವಿಡಿಯೋವೊಂದರಲ್ಲಿ ನಾನು 5 ವರ್ಷದವಳಿದ್ದಾಗ ಅಸ್ತಮಾ ರೋಗದಿಂದ ಬಳಲುತ್ತಿದ್ದೆ. ದೀಪಾವಳಿ ವೇಳೆ ಪಟಾಕಿ ಹಚ್ಚದಿರಿ, ಇದು ಅಸ್ತಮಾ ರೋಗಿಗಳಿಗೆ ತೊಂದರೆ ನೀಡುತ್ತದೆ ಎಂದಿದ್ದರು.
ಇದೀಗ ಅವರೇ ಸಿಗರೇಟ್ ಸೇದುವ ಪೋಟೋಗೆ ನೆಟ್ಟಿಗರು ವಿವಿಧ ರೀತಿಯಲ್ಲಿ ವ್ಯಂಗ್ಯವಾಡಿ ಟ್ರೋಲ್ ಮಾಡಿದ್ದಾರೆ. ಪಟಾಕಿಯಿಂದ ಮಾತ್ರವೇ ಅಸ್ತಮಾ ಬರುತ್ತಾ ಎಂದು ನೆಟ್ಟಿಗರು ಪ್ರಶ್ನೆ ಹಾಕಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.