
ದುಬೈ[ಜು.22]: ಭಾರತ ಮೂಲದ ಹಾಸ್ಯನಟ ಮಂಜುನಾಥ್ ನಾಯ್ಡು (36) ದುಬೈನಲ್ಲಿ ವೇದಿಕೆ ಮೇಲೆ ಹಾಸ್ಯ ಮತ್ತು ನಟನೆ ಮಾಡುತ್ತಲೇ ಹೃದಯ ಸ್ತಂಭನದಿಂದ ಸಾವಿಗೀಡಾದ ಘಟನೆ ಶುಕ್ರವಾರ ನಡೆದಿದೆ. ಆದರೆ ಇದನ್ನು ವೀಕ್ಷಿಸುತ್ತಿದ್ದ ಸಭಿಕರು ಇದೂ ಕೂಡ ನಟನೆಯ ಭಾಗ ಎಂದು ಅದನ್ನು ನೋಡುತ್ತಲೇ ಕುಳಿತಿದ್ದರು.
ಕೆಲ ಹೊತ್ತಿನ ನಂತರ ನಾಯ್ಡು ಜತೆಗಾರರು ಹೋಗಿ ನೋಡಿದಾಗ ಆಗಲೇ ಮಂಜುನಾಥ ಪ್ರಾಣಪಕ್ಷಿ ಹಾರಿಹೋಗಿದ್ದು ಬೆಳಕಿಗೆ ಬಂದಿದೆ. ವೇದಿಕೆ ಮೇಲೆ ಬೆಂಚ್ ಮೇಲೆ ಕುಳಿತು ಹಾಸ್ಯಧಾರೆ ಹರಿಸುತ್ತಿದ್ದ ಮಂಜುನಾಥ್, ಮಾತಿನ ಮಧ್ಯೆ ತಮ್ಮ ಆರೋಗ್ಯದ ಸ್ಥಿತಿ ಗಂಭೀರವಾಗಿದೆ, ಅದರ ಬಗ್ಗೆ ತಮಗೆ ಭಯಂಕರ ಆತಂಕವಿದೆ ಎಂದು ಹೇಳಿಕೊಳ್ಳುತ್ತಿದ್ದರು.
ಹೀಗೆ ಹೇಳಿಕೊಳ್ಳುತ್ತಲೇ ಬೆಂಚ್ನಿಂದ ನೆಲಕ್ಕೆ ಮಂಜುನಾಥ್ ಉರುಳಿದ್ದು, ಅದು ಹಾಸ್ಯದ ಭಾಗ ಎಂದೇ ತಿಳಿದಿದ್ದ ಸಭಿಕರಿಗೆ ನಂತರದಲ್ಲಿ ನೈಜತೆಯ ಅರಿವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.