’ಸಂಜು’ ಆಯ್ತು ಈಗ ಇನ್ನೊಂದು ಸಂಜಯ್ ದತ್ ಸಿನಿಮಾ

Published : Jul 20, 2018, 03:31 PM IST
’ಸಂಜು’ ಆಯ್ತು ಈಗ ಇನ್ನೊಂದು ಸಂಜಯ್ ದತ್ ಸಿನಿಮಾ

ಸಾರಾಂಶ

ಸಂಜು ಬಾಕ್ಸಾಫೀಸ್’ನಲ್ಲಿ ಭರ್ಜರಿ ಯಶಸ್ಸು ಕಾಣುತ್ತಿದೆ. ಸುಮಾರು 300 ಕೋಟಿಗೂ ಹೆಚ್ಚು ಗಳಿಕೆ ಕಂಡಿದೆ. ಈಗ ರಾಮ್ ಗೋಪಾಲ್ ವರ್ಮಾ ಸಂಜಯ್ ದತ್ ಜೀವನಾಧಾರಿತ ಇನ್ನೊಂದು ಸಿನಿಮಾ ಮಾಡಲು ಹೊರಟಿದ್ದಾರೆ. ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ. 

ಬೆಂಗಳೂರು (ಜು. 20): ಬಾಕ್ಸಾಫೀಸ್ ಬ್ಲಾಕ್ ಬಸ್ಟರ್ ಮೂವಿ ’ಸಂಜು’ ಯಶಸ್ಸಿನ ನಂತರ ರಾಮ್ ಗೋಪಾಲ್ ವರ್ಮಾ ಇನ್ನೊಂದು ಚಿತ್ರ ಮಾಡಲು ಮುಂದಾಗಿದ್ದಾರೆ. 

ಸಂಜು ಚಿತ್ರದಲ್ಲಿ ಸಂಜಯ್ ದತ್’ರನ್ನು ಸರಿಯಾಗಿ ಬಿಂಬಿಸಿಲ್ಲ. 1993 ರ ಬಾಂಬ್ ಸ್ಫೋಟ ಪ್ರಕರಣದಲ್ಲಿ ಸಂಜಯ್ ದತ್’ರನ್ನು ಸಾಫ್ಟ್ ಆಗಿ ತೋರಿಸಲಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ. 

ಈ ಬಗ್ಗೆ ನಿರ್ದೇಶಕ ಆರ್’ಜಿವಿ ಮಾತನಾಡಿ, ಸಂಜಯ್ ದತ್’ರ ಜೀವನಾಧಾರಿತ ಕಥೆಯನ್ನು ಇಟ್ಟುಕೊಂಡು ಇನ್ನೊಂದು ಸಿನಿಮಾ ಮಾಡುವೆ. ಅದರಲ್ಲಿ ಅವರನ್ನು ಸರಿಯಾಗಿ ಬಿಂಬಿಸಲಾಗುವುದು ಎಂದು ಹೇಳಿದ್ದಾರೆ. 

ಈ ಚಿತ್ರವನ್ನು ಸಂಜು ಪಾತ್ರವನ್ನು ಯಾರು ಮಾಡುತ್ತಾರೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಇನ್ನೊಂದು ಸಿನಿಮಾ ಮಾಡುವ ಬಗ್ಗೆ ಖುದ್ದು ಸಂಜಯ್ ದತ್ ಇನ್ನೂ ಪ್ರತಿಕ್ರಿಯಿಸಿಲ್ಲ. 

ಇತ್ತೀಚಿಗೆ ಬಿಡುಗಡೆಯಾದ ಸಂಜು ಚಿತ್ರ ನಾಗಾಲೋಟದಲ್ಲಿ ಓಡುತ್ತಿದೆ. ಬಾಕ್ಸಾಫೀಸ್’ನಲ್ಲಿ 300 ಕೋಟಿಗೂ ಹೆಚ್ಚು ಗಳಿಕೆ ಕಂಡಿದೆ. ಪರೇಶ್ ರಾವಲ್ ಸಂಜಯ್ ದತ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅವಕಾಶ ಕಳೆದುಕೊಳ್ಳುವ ಭಯ ನನ್ನನ್ನು ಕಾಡಿತ್ತು: ಸೋಲಿನ ಭೀತಿ ಬಗ್ಗೆ ರಹಸ್ಯ ಬಿಚ್ಚಿಟ್ಟ ಪ್ರಿಯಾಂಕಾ ಚೋಪ್ರಾ
Rajinikanth Birthday.. ಅಬ್ಬಬ್ಬಾ ಸರಳತೆಯ ಶಿಖರ ರಜನಿಕಾಂತ್ ಇಷ್ಟೊಂದು ಕೋಟಿ ಆಸ್ತಿಗೆ ಒಡೆಯನಾ?