ಮತ್ತೆ ಇಂಟರ್ನೆಟ್ ಸೆನ್ಸೇಷನ್ ಆದ ಕಣ್ಸನ್ನೆ ಬೆಡಗಿ

Published : Feb 07, 2019, 12:04 PM ISTUpdated : Feb 07, 2019, 12:23 PM IST
ಮತ್ತೆ ಇಂಟರ್ನೆಟ್ ಸೆನ್ಸೇಷನ್ ಆದ ಕಣ್ಸನ್ನೆ ಬೆಡಗಿ

ಸಾರಾಂಶ

'ಓರು ಅಡಾರ್ ಲವ್' ಚಿತ್ರದ ಟ್ರೈಲರ್‌ನಲ್ಲಿ ಕಣ್ಣು ಹೊಡೆದು, ಫ್ಲೈಯಿಂಗ್ ಕಿಸ್ ಮಾಡಿ ಇಂಟರ್ನೆಟ್‌ನಲ್ಲಿ ಸೆನ್ಸೇಷನ್ ಆಗಿದ್ದ ಪ್ರಿಯಾ ವಾರಿಯರ್ ಇದೀಗ ಕಿಸ್ ಮೂಲಕ ಮತ್ತೆ ಹೆಸರು ಮಾಡುತ್ತಿದ್ದಾರೆ. ಅದೇ ಚಿತ್ರದ ಮತ್ತೊಂದು ಸೀನ್ ಇಂಟರ್ನೆಟ್‌ ಅನ್ನು ಬ್ರೇಕ್ ಮಾಡಿದೆ. ಹೇಗಿದೆ ಸೀನ್, ನೀವೇ ನೋಡಿ...

ಕಳೆದ ವರ್ಷ ವ್ಯಾಲೆಂಟೈನ್ಸ್ ಡೇ ವೇಳೆ ಕಣ್ಸನ್ನೆ ಮೂಲಕವೇ ಪಡ್ಡೆ ಹುಡುಗರ ಹೃದಯ ಗೆದ್ದಿದ್ದ ಪ್ರಿಯಾ ವಾರಿಯರ್ ಈ ವರ್ಷದ ಪ್ರೇಮಿಗಳ ದಿನದ ಹೊತ್ತಿಗೆ ಮತ್ತೆ ಇಂಟರ್ನೆಟ್‌ನಲ್ಲಿ ಸುದ್ದಿ ಮಾಡುತ್ತಿದ್ದಾರೆ. ಕಣ್ಣು ಹೊಡೆದಿದ್ದಕ್ಕಲ್ಲ, ಕಿಸ್‌ನಿಂದ!

ಹೈಸ್ಕೂಲ್ ಹುಡುಗರ ಪ್ರೇಮ ಕಥೆ 'ಓರು ಅಡಾರ್ ಲವ್' ಚಿತ್ರದ ಟೀಸರ್‌ ಬಿಡುಗಡೆಯಾಗುತ್ತಿದ್ದಂತೆ ಪ್ರಿಯಾ ವಾರಿಯರ್ ಇಂಟರ್ನೆ‌ಟ್‌ ಮನೆಮಾತಾದರು. ಪಡ್ಡೆ ಹುಡುಗರ ಹೃದಯದಲ್ಲಿ ಆ ಒಂದು ಕಣ್ಸನ್ನೆಯಿಂದ ಚಿಟ್ಟೆ ಹಾರಿಸಿದ್ದರು. ಈ ಮಲಯಾಳಂ ಚಿತ್ರದ ಟ್ರೈಲರ್‌ನಲ್ಲಿ ಕಣ್ಸನ್ನೆ ಹೆಸರು ಮಾಡಿದ್ದರೆ, ಇದೀಗ ಈ ಚಿತ್ರ ಕನ್ನಡ ಸೇರಿ ಬೇರೆ ಬೇರೆ ಭಾಷೆಗಳಲ್ಲಿ ತೆರೆ ಕಾಣುತ್ತಿದ್ದು, ಕಿಸ್ ಸೀನ್ ವೈರಲ್ ಆಗುತ್ತಿದೆ.

ಪ್ರಿಯಾ ವಾರಿಯರ್ ನೋಡಿದ ಕನ್ನಡ ಚಿತ್ರ ಇದೊಂದೇಯಂತೆ!

ಇದೇ ಫೆ.14ರಂದು ಚಿತ್ರ ಬಿಡುಗಡೆಯಾಗುತ್ತಿದ್ದು, ಚಿತ್ರದ ಹೀರೋ ರೋಷನ್ ಅಬ್ದುಲ್ ರೌಫ್ ಜತೆಗಿನ ಕಿಸ್ ಸೀನ್ ಎಲ್ಲೆಡೆ ಹರಿದಾಡುತ್ತಿದೆ. ಕಳೆದವರ್ಷ ಫ್ಲೈಯಿಂಗ್ ಕಿಸ್ ನೀಡಿದ, ಪ್ರಿಯಾ ಈಗಿನ ವೀಡಿಯೋದಲ್ಲಿ ನೇರವಾಗಿಯೇ ಕಿಸ್ ಮಾಡಿದ್ದಾರೆ. ವೀಡಿಯೋದಲ್ಲಿ ಏನಿದೆ ನೀವೇ ನೋಡಿ...

‘ಓರು ಅಡಾರ್‌ ಲವ್‌’ ಸಿನಿಮಾ ಕನ್ನಡ ಹಾಗೂ ತೆಲುಗಿಗೂ ಡಬ್‌ ಆಗುತ್ತಿದ್ದು, ಮಲಯಾಳಂ ಹೊರತುಪಡಿಸಿ ಬೇರೆ ಭಾಷಾ ಸಂಸ್ಕೃತಿಗೆ ಹೇಗೆ ಹೊಂದುತ್ತದೋ ಕಾದು ನೋಡಬೇಕು.

ಕಣ್ಸನ್ನೆಗೆಲ್ಲ ಕಂಪ್ಲೇಂಟ್ ದಾಖಲಿಸ್ಲಿಕ್ಕಾಗೋತ್ತಾ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಾಮ್ ಚರಣ್ ಮೇಲೆ ದೇಶದಾಚೆಗಿನ ಪ್ರೀತಿ.. ಮೆಗಾ ಪವರ್ ಸ್ಟಾರ್‌ಗಾಗಿ ಭಾರತಕ್ಕೆ ಬಂದ ಆ ವಿದೇಶಿ ಫ್ಯಾನ್ಸ್!
400 ಸಿನಿಮಾಗಳಲ್ಲಿ ನಟಿಸಿದ ದಾಖಲೆ, 100 ಕೋಟಿಗೂ ಹೆಚ್ಚು ಆಸ್ತಿ, 3 ಮದುವೆಯಾದ ಸ್ಟಾರ್ ನಟ ಇವರೇನಾ?