ಸ್ಯಾಂಡಲ್‌ವುಡ್‌ನಲ್ಲೂ ಮೋಡಿ ಮಾಡಲಿದ್ದಾರೆ ’ಕಣ್ಸನ್ನೆ ಹುಡುಗಿ’

Published : Jan 02, 2019, 04:11 PM ISTUpdated : Jan 02, 2019, 04:16 PM IST
ಸ್ಯಾಂಡಲ್‌ವುಡ್‌ನಲ್ಲೂ ಮೋಡಿ ಮಾಡಲಿದ್ದಾರೆ ’ಕಣ್ಸನ್ನೆ ಹುಡುಗಿ’

ಸಾರಾಂಶ

ಕಣ್ಸನ್ನೆ ಮೂಲಕ ಭಾರೀ ಸುದ್ದಿಯಾಗಿದ್ದರು ಪ್ರಿಯಾ ವಾರಿಯರ್ | ಕನ್ನಡದಲ್ಲೂ ಮೋಡಿ ಮಾಡಲಿದ್ದಾರೆ ಕಣ್ಸನ್ನೆ ಹುಡುಗಿ | ಸದ್ಯದಲ್ಲೇ ಬರಲಿದೆ ಪ್ರಿಯಾ ವಾರಿಯರ್ ಚಿತ್ರ 

ಬೆಂಗಳೂರು (ಜ. 02): ಹೆಣ್ಣಿನ ಕಣ್ಣೋಟಕ್ಕೆ ಮಾರು ಹೋಗದವರು ಯಾರಿದ್ದಾರೆ ಹೇಳಿ. ಹುಡುಗರ ಎದೆಯಲ್ಲಿ ಪ್ರೀತಿಯನ್ನು ಹುಟ್ಟಿಸುವ ತಾಕತ್ತಿರೋದು ಆ ಕುಡಿ ನೋಟಕ್ಕೆ ಮಾತ್ರ. ತಮ್ಮ ಕಣ್ಸನ್ನೆ ಮೂಲಕವೇ ಹುಡುಗರ ಎದೆಗೆ ಲಗ್ಗೆ ಇಟ್ಟ, ಭಾರೀ ಸುದ್ದಿಯಾದ ಹುಡುಗಿ ಪ್ರಿಯಾ ವಾರಿಯರ್.

ಯಶ್- ರಾಧಿಕಾ ಮಗಳ ಹೆಸರು ಇದೇ ಅಂತೆ! 

ಇವರ ಕಣ್ಸನ್ನೆ ಹುಡುಗರ ನಿದ್ದೆಗೆಡಿಸಿತ್ತು. ಈಗ ಪ್ರಿಯಾ ವಾರಿಯರ್ ಸ್ಯಾಂಡಲ್‌ವುಡ್‌ನಲ್ಲೂ ಮೋಡಿ ಮಾಡಲು ಬರಲಿದ್ದಾರೆ. ಪ್ರಿಯಾ ವಾರಿಯರ್ ಮಲಯಾಳಂನಲ್ಲಿ ’ಒರು ಅಡಾರು ಲವ್’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಟೀಸರ್ ಕೂಡಾ ರಿಲೀಸಾಗಿದೆ. ಈ ಚಿತ್ರ ಕನ್ನಡಕ್ಕೆ ’ಕಿರಿಕ್ ಲವ್ ಸ್ಟೋರಿ’ ಎಂಬ ಹೆಸರಿನಲ್ಲಿ ಬರುತ್ತಿದೆ. 

ಹೊಸ ವರ್ಷವನ್ನು ಸೆಲಬ್ರಿಟಿಗಳು ವೆಲ್‌ಕಮ್ ಮಾಡಿದ್ದು ಹೀಗೆ

ಇದುವರೆಗೂ ಕೇವಲ ತೆಲುಗು, ತಮಿಳು ಸಿನಿಮಾಗಳು ಕನ್ನಡಕ್ಕೆ ಡಬ್ ಆಗುತ್ತಿತ್ತು. ಆದರೆ ಮಲಯಾಳಂ ಚಿತ್ರವೊಂದು ಕನ್ನಡಕ್ಕೆ ಬರ್ತಾ ಇರೋದು ಬಹಳ ಅಪರೂಪ. 

ಅಂದಹಾಗೆ ’ಒರು ಅಡಾರು ಲವ್’ ಚಿತ್ರವನ್ನು ಒಮರ್ ಲುಲು ನಿರ್ದೇಶಿಸಿದ್ದು ವ್ಯಾಲಂಟೈನ್ಸ್ ಡೇ ದಿನ ಪ್ರೇಮಿಗಳಿಗೆ ಗಿಫ್ಟ್ ಕೊಡಲು ನಿರ್ಧರಿಸಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ನಿಮ್ಮ ಪ್ರೀತಿಯ ಪ್ರತಿ ಹನಿ ಅವರಿಗೆ ತಲುಪಿಸುತ್ತೇನೆ..' ಡೆವಿಲ್‌ ವೀಕ್ಷಿಸಿ ಮನತುಂಬಿ ಬರೆದ ವಿಜಯಲಕ್ಷ್ಮೀ ದರ್ಶನ್‌
ದರ್ಶನ್ 'ದಿ ಡೆವಿಲ್' ನಾಯಕಿ ರಚನಾ ರೈ ಸಾಮಾನ್ಯರಲ್ಲ, ಸ್ಪೆಷಲ್ ಲೇಡಿ!