‘ಪ್ರೇಮದ ಊರಲ್ಲಿ’ ಸಿನಿಮಾದ ಹಳ್ಳಿ ಮನೆ ಯಾರದ್ದು? ಶೂಟಿಂಗ್‌ಗೆ ಬಾಡಿಗೆ ಪಡೆದಿದ್ದ ಚಿತ್ರತಂಡ ಮಾಲೀಕರಿಗೆ ಕೊಟ್ಟಿದ್ದೆಷ್ಟು ಹಣ?

Published : Nov 18, 2026, 10:45 AM IST
Premada Oorali movie shooting house owner rent details

ಸಾರಾಂಶ

ಕನ್ನಡ ಚಿತ್ರರಂಗದಲ್ಲಿ ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾಗಿ ದೊಡ್ಡ ಮಟ್ಟದ ಯಶಸ್ಸು ಕಂಡಿರುವ ‘ಪ್ರೇಮದ ಊರಲ್ಲಿ’ ಸಿನಿಮಾ ಇದೀಗ ಮತ್ತೊಂದು ಕಾರಣಕ್ಕೆ ಸುದ್ದಿಯಾಗಿದೆ. ಸಿನಿಮಾದಲ್ಲಿ ನಾಯಕ ಸಂತು ವಾಸಿಸುವ ಮನೆಯಾಗಿ ಕಾಣಿಸಿಕೊಂಡ ಮನೆ ಯಾವುದು? ಆ ಮನೆಯ ಮಾಲೀಕರು ಯಾರು?

ಕನ್ನಡ ಚಿತ್ರರಂಗದಲ್ಲಿ ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾಗಿ ದೊಡ್ಡ ಮಟ್ಟದ ಯಶಸ್ಸು ಕಂಡಿರುವ ‘ಪ್ರೇಮದ ಊರಲ್ಲಿ’ ಸಿನಿಮಾ ಇದೀಗ ಮತ್ತೊಂದು ಕಾರಣಕ್ಕೆ ಸುದ್ದಿಯಾಗಿದೆ. ಸಿನಿಮಾದಲ್ಲಿ ನಾಯಕ ಸಂತು ವಾಸಿಸುವ ಮನೆಯಾಗಿ ಕಾಣಿಸಿಕೊಂಡ ಮನೆ ಯಾವುದು? ಆ ಮನೆಯ ಮಾಲೀಕರು ಯಾರು? ಶೂಟಿಂಗ್‌ಗಾಗಿ ಚಿತ್ರತಂಡ ಎಷ್ಟು ದಿನಗಳ ಕಾಲ ಮನೆಯನ್ನು ಬಳಸಿಕೊಂಡಿತ್ತು? ಮನೆಗೆ ಬಾಡಿಗೆಯಾಗಿ ಎಷ್ಟು ಹಣ ನೀಡಿತ್ತು? ಎಂಬ ಕುತೂಹಲ ಸಿನಿಪ್ರಿಯರಲ್ಲಿ ಮೂಡಿದೆ.

ಸಿನಿಮಾದಲ್ಲಿ ಹಳ್ಳಿಯ ಸುಂದರ ವಾತಾವರಣ, ಹಳೆಯ ಶೈಲಿಯ ಮನೆ, ಮನೆಯ ಅಂಗಳ, ಕೊಟ್ಟಿಗೆ ಹಾಗೂ ಸುತ್ತಲಿನ ಗದ್ದೆಗಳನ್ನು ನೋಡಿದ ಪ್ರೇಕ್ಷಕರು ಆ ಸ್ಥಳಗಳನ್ನು ನೇರವಾಗಿ ನೋಡಲು ಆಸಕ್ತಿ ತೋರುತ್ತಿದ್ದಾರೆ. ಇದೀಗ ಯೂಟ್ಯೂಬ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಮನೆಯ ಮಾಲೀಕ ಪಂಚಾಕ್ಷರಿ ಅವರೇ ಮಾತನಾಡಿದ್ದು, ಚಿತ್ರೀಕರಣದ ಹಿಂದಿನ ಹಲವು ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ.

2024ರಲ್ಲಿ ನಡೆದಿತ್ತು ಚಿತ್ರೀಕರಣ

‘ಪ್ರೇಮದ ಊರಲ್ಲಿ’ ಸಿನಿಮಾದ ಚಿತ್ರೀಕರಣ 2024ರಲ್ಲಿ ನಡೆದಿತ್ತು. ಹಾಸನ ಜಿಲ್ಲೆಯ ವೀರಪುರ ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳನ್ನು ಸಿನಿಮಾಕ್ಕಾಗಿ ಬಳಸಿಕೊಳ್ಳಲಾಗಿತ್ತು. ಪಂಚಾಕ್ಷರಿ ಅವರಿಗೆ ಸೇರಿದ ಮನೆ ಸಿನಿಮಾದ ಪ್ರಮುಖ ಸ್ಥಳವಾಗಿತ್ತು. ಮನೆಯ ಮಾಲೀಕರ ಪ್ರಕಾರ, ಮನೆ ನಿರ್ಮಾಣವಾಗಿ ಆಗ ಕೇವಲ ಮೂರು ವರ್ಷಗಳಾಗಿದ್ದವು. ನಿರ್ದೇಶಕರ ಊರು ಈ ಭಾಗದ ಸಮೀಪದಲ್ಲಿರುವುದರಿಂದ ಪರಿಚಯದ ಮೂಲಕ ಚಿತ್ರತಂಡಕ್ಕೆ ಈ ಮನೆ ಸಿಕ್ಕಿತ್ತು.

ಮನೆಯಲ್ಲಿ ಯಾವೆಲ್ಲ ದೃಶ್ಯಗಳನ್ನು ಚಿತ್ರೀಕರಿಸಲಾಗಿತ್ತು?

ಸಿನಿಮಾದಲ್ಲಿ ರಂಗಾಯಣ ರಘು ಅವರು ಸಂತುವಿಗೆ ಹೊಡೆಯುವ ದೃಶ್ಯ ಇದೇ ಮನೆಯ ಒಂದು ಮೂಲೆಯಲ್ಲಿ ಚಿತ್ರೀಕರಿಸಲಾಗಿತ್ತು. ಮನೆಯ ಹಿಂಭಾಗದಲ್ಲಿರುವ ಗದ್ದೆಯಂತಹ ಪರಿಸರವನ್ನೂ ಸಿನಿಮಾದಲ್ಲಿ ಬಳಸಿಕೊಳ್ಳಲಾಗಿದೆ. ಇದಲ್ಲದೆ, ಸಂತು ಮತ್ತು ಇತರ ಪಾತ್ರಗಳಿಗೆ ಸಂಬಂಧಿಸಿದ ಹಲವು ದೃಶ್ಯಗಳು ಇದೇ ಮನೆಯ ಆವರಣದಲ್ಲಿ ನಡೆದಿವೆ. ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಕುರಿಗಳ ಕೊಟ್ಟಿಗೆ, ಹಾಲು ಕರೆಯುವ ದೃಶ್ಯ ಹಾಗೂ ರಂಗಾಯಣ ರಘು ಅವರು ಮಳೆಯ ಸಂದರ್ಭದಲ್ಲಿ ಕುಳಿತುಕೊಳ್ಳುವ ಸನ್ನಿವೇಶವೂ ಇದೇ ಜಾಗದಲ್ಲಿ ಚಿತ್ರೀಕರಣಗೊಂಡಿತ್ತು.

ಚಿತ್ರದ ಚಿತ್ರೀಕರಣದ ಸಮಯದಲ್ಲಿ ಮನೆಗೆ ಬರುವ ಕಲಾವಿದರು ಮತ್ತು ಚಿತ್ರತಂಡದವರಿಗೆ ಮನೆಯವರೇ ಕಾಫಿ, ಟೀ ಹಾಗೂ ಸಂಜೆ ತಿಂಡಿಗಳನ್ನು ಸಿದ್ಧಪಡಿಸಿ ಕೊಡುತ್ತಿದ್ದರು. ಊಟದ ವ್ಯವಸ್ಥೆಯನ್ನು ಹೊರಗಿನಿಂದ ಮಾಡಲಾಗುತ್ತಿತ್ತು ಎಂದು ಪಂಚಾಕ್ಷರಿ ತಿಳಿಸಿದ್ದಾರೆ.

ಮನೆಗೆ ಎಷ್ಟು ಬಾಡಿಗೆ ನೀಡಿದ್ದರು?

ಇಲ್ಲಿಯೇ ಪ್ರೇಕ್ಷಕರಿಗೆ ಹೆಚ್ಚು ಕುತೂಹಲ ಮೂಡಿದೆ. ವಿಡಿಯೋ ಆರಂಭದಲ್ಲಿಯೇ ಮನೆಯ ಮಾಲೀಕರನ್ನು ಉದ್ದೇಶಿಸಿ, ಎಷ್ಟು ತಿಂಗಳು ಬಾಡಿಗೆ ನೀಡಿದ್ದೀರಿ ಎಂದು ಪ್ರಶ್ನೆ ಕೇಳಲಾಗಿದೆ. ಇನ್ನೊಂದೆಡೆ, ಚಿತ್ರದ ಛಾಯಾಗ್ರಾಹಕ ರಾಜಕಾಂತ್ ಎಸ್.ಕೆ. ಅವರು ನೀಡಿರುವ ಸಂದರ್ಶನದಲ್ಲಿ ಚಿತ್ರೀಕರಣದ ಖರ್ಚು ಕಡಿಮೆ ಮಾಡಲು ಸ್ಥಳೀಯರ ಸಹಕಾರ ಪಡೆದಿದ್ದಾಗಿ ತಿಳಿಸಿದ್ದಾರೆ. ಹಲವು ಸ್ಥಳಗಳಲ್ಲಿ ಉಚಿತವಾಗಿ ಚಿತ್ರೀಕರಣಕ್ಕೆ ಅವಕಾಶ ನೀಡಲಾಗಿತ್ತು. ಗದ್ದೆಗಳನ್ನು ಬಳಸಿಕೊಂಡಾಗ ಬೆಳೆಗಳಿಗೆ ನಷ್ಟವಾಗದಂತೆ ಸ್ಥಳೀಯರಿಗೆ ಸಣ್ಣ ಮೊತ್ತದ ಹಣ ನೀಡಲಾಗುತ್ತಿತ್ತು. ಸುಮಾರು 50 ಜನರು ಉಳಿದುಕೊಳ್ಳಬಹುದಾದ ಔತಣಕೂಟದ ಹಾಲ್‌ಗೆ ₹50 ಸಾವಿರ ಬಾಡಿಗೆ ನೀಡಿದ್ದಾಗಿ ಅವರು ವಿವರಿಸಿದ್ದಾರೆ.

ಸಿನಿಮಾ ಯಶಸ್ಸಿನಿಂದ ಊರಿನತ್ತ ಹೆಚ್ಚಿದ ಜನರ ಭೇಟಿ

ಚಿತ್ರ ಬಿಡುಗಡೆಯಾದ ಬಳಿಕ ಶೂಟಿಂಗ್ ನಡೆದ ಹಾಸನದ ಸೀಗೆಗುಡ್ಡ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಮಳೆ ಮಲ್ಲೇಶ್ವರ ದೇವಸ್ಥಾನ, ಸಿನಿಮಾದಲ್ಲಿ ಕಾಣಿಸಿಕೊಂಡ ಮನೆ ಮತ್ತು ಹಳ್ಳಿಯ ಪರಿಸರವನ್ನು ನೋಡಲು ಜನರು ಆಗಮಿಸುತ್ತಿದ್ದಾರೆ. ಆದರೆ ಪ್ರವಾಸಿಗರು ಪ್ಲಾಸ್ಟಿಕ್ ಕವರ್, ಚಿಪ್ಸ್ ಪ್ಯಾಕೆಟ್‌ಗಳನ್ನು ಎಲ್ಲೆಂದರಲ್ಲಿ ಎಸೆಯದೆ ಪರಿಸರವನ್ನು ಸ್ವಚ್ಛವಾಗಿಡಬೇಕು ಎಂಬುದು ಸ್ಥಳೀಯರ ಮನವಿ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಂದಿನ ಕಾಲದಲ್ಲೇ ₹1 ಕೋಟಿ ಕಲೆಕ್ಷನ್ ಮಾಡಿ ಇತಿಹಾಸ ಸೃಷ್ಟಿಸಿದ್ದ ಕನ್ನಡದ ಮೊದಲ ಸಿನಿಮಾ ಯಾವುದು ಗೊತ್ತಾ?
Anirudh Cnotroversy: ಮದುವೆ ಬೆನ್ನಲ್ಲೇ ಹೊಸ ವಿವಾದಕ್ಕೆ ಸಿಕ್ಕಿಹಾಕಿಕೊಂಡ್ರಾ ಅನಿರುಧ್ ರವಿಚಂದರ್?