
'ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು' ಮೂಲಕ ಕನ್ನಡಿಗರಲ್ಲಿ ಸರಕಾರಿ ಶಾಲೆಗಳ ಮಹತ್ವ ತಿಳಿಸುವಲ್ಲಿ ಸಂಪೂರ್ಣ ಯಶಸ್ವಿಯಾಗಿದ್ದಾರೆ ನಿರ್ದೇಶಕ ರಿಷಬ್ ಶೆಟ್ಟಿ. ಅಷ್ಟೇ ಆ ಶಾಲೆಯನ್ನೇ ದತ್ತು ಪಡೆದು, ಒಂದೊಳ್ಳೆ ಕೆಲಸಕ್ಕೆ ಮುನ್ನುಡಿ ಬರೆದಿದ್ದಾರೆ. ಇದೀಗ ರಿಷಬ್ ಸಾಲಿಗೆ 'ಪೊರ್ಕಿ'ಪ್ರಣೀತಾ ಸೇರಿದ್ದಾರೆ.
ಬೆಳೆದದ್ದು ಬೆಂಗಳೂರಾದರೂ, ಪ್ರಣೀತಾಳ ಮೂಲ ಊರು ಹಾಸನ ಸಮೀಪದ ಆಲೂರು. ಯಾರಿಗೆ ತಾನೇ ಹುಟ್ಟೂರಿನ ಬಗ್ಗೆ ಅಭಿಮಾನವಿರೋಲ್ಲ ಹೇಳಿ? ಅದೇ ಪ್ರೀತಿ, ವಿಶ್ವಾಸವನ್ನು ಪ್ರಣೀತಾ ತನ್ನೂರಿನ ಮೇಲೂ ತೋರಿಸಿದ್ದು, ಅಲ್ಲಿಯೇ ಶಾಲೆಯೊಂದನ್ನು ದತ್ತು ಪಡೆದಿದ್ದಾರೆ.
ಅಷ್ಟೇ ಅಲ್ಲ ಆ ಶಾಲೆಯ ಮಕ್ಕಳಿಗೆ ಇಂಗ್ಲಿಷ್ ಹೇಳಿ ಕೊಟ್ಟಿದ್ದಾರೆ. ಶಾಲೆಗೆ 5 ಲಕ್ಷ ರೂ. ವ್ಯಯಿಸಿ, ಸ್ವಚ್ಛ ಶೌಚಾಲಯದ ಜತೆಗೆ ಅಗತ್ಯ ಮೂಲ ಸೌಕರ್ಯವನ್ನು ಪೂರೈಸಿದ್ದಾರೆ.
ಶಾಲೆ ದತ್ತು ಪಡೆಯೋ ಜತೆಗೆ, ಊರಿಗೂ ವಾರಕ್ಕೊಮ್ಮೆಯಾದರೂ ಹೋಗಿ ಬರುವ ಪರಿಪಾಠವನ್ನು ಪ್ರಣೀತಾ ಬೆಳೆಯಿಸಿಕೊಂಡಿದ್ದಾರಂತೆ. ಆ ಮೂಲಕ ಡಬ್ಬಲ್ ಖುಷಿ ಅನುಭವಿಸುತ್ತಿದ್ದಾರೆ ಸ್ಯಾಂಡಲ್‌ವುಡ್‌ನ ಈ ಬೆಡಗಿ.
ಮುಚ್ಚಿ ಹೋಗಲಿದ್ದ ಕನ್ನಡ ಶಾಲೆ ದತ್ತು ಪಡೆದ ರಿಷಬ್ ಶೆಟ್ಟಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.