
ಹೈದ್ರಾಬಾದ್(ಸೆ.29): ಟಾಲಿವುಡ್ ಡಾರ್ಲಿಂಗ್ ಪ್ರಭಾಸ್. ಬಾಹುಬಲಿ ಅಂತಲೇ ಖ್ಯಾತರಾಗಿದ್ದಾರೆ. ಬಾಹುಬಲಿ ನಂತರ ಬಾಹುಬಲಿ-2ನಲ್ಲೂ ರಂಜಿಸಲಿದ್ದಾರೆ. ಬರುವ ತಿಂಗಳು ಪ್ರಭಾಸ್ ಜನ್ಮ ದಿನ. ಅಂದೇ ನಿರ್ದೇಶಕ ರಾಜ ಮೌಳಿ ತೆಲುಗು ಬಾಹುಬಲಿ-2 ಚಿತ್ರದ ಟೀಜರ್ ರಿಲೀಸ್ ಮಾಡುತ್ತಿದ್ದಾರೆ. ಆದರೆ, ಎಲ್ಲರಿಗೂ ಒಂದು ಕುತೂಹಲ ಇದೆ.ಬಾಹುಬಲಿ-2 ನಂತರ ಪ್ರಭಾಸ್ ಯಾವ ಚಿತ್ರ ಒಪ್ಪಿಕೊಂಡಿದ್ದಾರೆ ಅಂತ. ಅದಕ್ಕೆ ಉತ್ತರ ಸಿಕ್ಕಿದೆ.ಅದು ಮತ್ತೊಂದು ಬಿಗ್ ಬಜೆಟ್ ಸಿನಿಮಾ. ಹೆಸರು ಸಿದ್ಧ.
ಸಿದ್ಧ ಸಿನಿಮಾ 100 ಕೋಟಿ ಬಜೆಟ್ನಲ್ಲಿ ನಿರ್ಮಾಣವಾಗಲಿದೆ. ತೆಲುಗು, ತಮಿಳು ಮತ್ತು ಹಿಂದಿಯಲ್ಲೂ ಬರಲಿದೆ. ರನ್ ರಾಜಾ ರನ್ ಚಿತ್ರದ ಯುವ ನಿರ್ದೇಶಕ ಸುಜೀತ್ ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಫೋಟೋ ಶೂಟ್ ಕೂಡ ಆಗಿದೆ. ಪ್ರಭಾಸ್ ನ ಆ ವಿವಿಧ ಫೋಟೋಗಳೂ ಈಗ ವೈರಲ್ ಆಗಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.