
‘ಬಾಹುಬಲಿ’ಯಲ್ಲಿ ಮಿಂಚಿ ‘ಸಾಹೋ’ ಚಿತ್ರದಲ್ಲಿ ಚಮಕ್ ಮಾಡಿದ ಖ್ಯಾತ ಟಾಲಿವುಡ್ ಹೀರೋ ಪ್ರಭಾಸ್, ಇರುವರಿಗಿರುವ ಕ್ರೇಜಿ ಅಭಿಮಾನಿಗಳು ದಿನೆ ದಿನೇ ಒಂದಲ್ಲಾ ಒಂದು ವಿಚಿತ್ರ ಸರ್ಕಸ್ ಮಾಡುತ್ತಾ ಸುದ್ದಿಯಲ್ಲಿದ್ದಾರೆ.
ಚಿತ್ರ ವಿಮರ್ಶೆ: 'ಸಾಹೋ'ಗೆ ಸಾಥ್ ಕೊಟ್ರಾ ಕನ್ನಡಿಗರು?
ತೆಲಂಗಾಣದ ಜಂಗಮ್ ಎಂಬ ಊರಿನಲ್ಲಿ ಪ್ರಭಾಸ್ ರನ್ನು ಜೀವನದಲ್ಲಿ ಒಮ್ಮೆ ಆದ್ರೂ ಭೇಟಿ ಮಾಡಲೇ ಬೇಕು ಇಲ್ಲವಾದರೆ ಇಲ್ಲಿಂದಲೆ ಬಿದ್ದು ಸಾಯುವೆ ಎಂದು ಅಭಿಮಾನಿಯೊಬ್ಬ ಪಟ್ಟು ಹಿಡಿದು ನಾಲ್ಕು ಗಂಟೆಗಳ ಕಾಲ ಮೊಬೈಲ್ ಟವರ್ ಮೇಲೆ ನಿಂತು ಆತ್ಮಹತ್ಯೆಗೆ ಯತ್ನ ಮಾಡಿದ್ದಾನೆ. ವಿಚಾರ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ವ್ಯಕ್ತಿಯನ್ನು ರಕ್ಷಣೆ ಮಾಡಿದ್ದಾರೆ. ಇನ್ನು ಈ ವಿಚಾರದ ಬಗ್ಗೆ ಪ್ರಭಾಸ್ ಗೆ ತಿಳಿದಿರುವುದರ ಬಗ್ಗೆ ಖಚಿತ ಮಾಹಿತಿ ಇಲ್ಲ.
ಮಾಲ್ ಮುಂದೆ ‘ಸಾಹೋ’ ಚಿತ್ರ ಪೋಸ್ಟರ್ ಹಾಕುತ್ತಿದ್ದ ಹುಡುಗ ಸಾವು!
ಈ ಹಿಂದೆ ಪ್ರಭಾಸ್ ಬ್ಲಾಕ್ ಬಾಸ್ಟರ್ ಸಿನಿಮಾ ‘ಸಾಹೋ’ ರಿಲೀಸ್ ವೇಳೆ ಚಿತ್ರ ಮಂದಿರದ ಮೇಲೆ ಪೋಸ್ಟರ್ ಹಾಕುವಾಗ ಎಲೆಕ್ಟ್ರಿಕ್ ವೈರ್ ತಾಗಿ ಅಭಿಮಾನಿಯೊಬ್ಬ ಸಾವಿಗೀಡಾಗಿದ್ದ. ಈ ಘಟನೆ ಮಾಸುವ ಮುನ್ನವೇ ಅವರ ಅಭಿಮಾನಿಯೋರ್ವ ಸುದ್ದಿಯಾಗಿದ್ದಾನೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.