ವೈರಲ್ ಆಯ್ತು 'ಮೋದಿ ಬಯೋಪಿಕ್' ಫಸ್ಟ್ ಲುಕ್!

Published : Jan 08, 2019, 12:45 PM IST
ವೈರಲ್ ಆಯ್ತು 'ಮೋದಿ ಬಯೋಪಿಕ್' ಫಸ್ಟ್ ಲುಕ್!

ಸಾರಾಂಶ

  ಅತ್ತ 'ಆ್ಯಕ್ಸಿಡೆಂಟಲ್ ಪಿಎಂ' ಚಿತ್ರ ರಿಲೀಸ್‌ಗೆ ಸನ್ನದ್ಧವಾಗಿದ್ದು, ವಿರೋಧವೂ ವ್ಯಕ್ತವಾಗುತ್ತಿದೆ. ಇತ್ತ 'ಪಿಎಂ ನರೇಂದ್ರ ಮೋದಿ' ಚಿತ್ರದ ಮೊದಲ ಲುಕ್ ರಿಲೀಸ್ ಆಗಿದ್ದು, ಸಹಜವಾಗಿಯೇ ಎಲ್ಲರ ಕುತೂಹಲ ಹೆಚ್ಚಿಸಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಜೀವನಾಧಾರಿತ 'ಪಿಎಂ ನರೇಂದ್ರ ಮೋದಿ' ಚಿತ್ರದ ಮೊದಲ ಲುಕ್ ರಿಲೀಸ್ ಆಗಿದ್ದು ಎಲ್ಲೆಡೆ ವೈರಲ್ ಆಗುತ್ತಿದೆ.

ಬಾಲಿವುಡ್ ಖ್ಯಾತ ನಟ ವಿವೇಕ್ ಒಬೇರಾಯ್ ಈ ಬಯೋಪಿಕ್‌ನಲ್ಲಿ ಮೋದಿ ಪಾತ್ರ ನಿಭಾಯಿಸಲಿದ್ದಾರೆ. ಮೊದಲ ಸಲ ಪೋಸ್ಟರ್ ನೋಡಿದವರಿಗೆ ಥೇಟ್ ಮೋದಿಯನ್ನೇ ನೋಡಿದಂತಾಗುತ್ತದೆ. ಆ ಬಿಳಿ ಕೂದಲು, ಗಡ್ಡ ಹಾಗೂ ಖಾದಿ ಕುರ್ತಾ ತೊಟ್ಟಿದ್ದು, ಈ ಚಿತ್ರದ ಮೇಕಪ್ ಮ್ಯಾನ್‌ಗೆ ಕ್ರೆಡಿಟ್ ಸಲ್ಲುತ್ತದೆ.

ಸೇಮ್ ಟು ಸೇಮ್ ಮೋದಿ ಹಾಗೆ ನಿಂತಿರುವ ವಿವೇಕ್ ಹಿಂದೆ ಭಾರತದ ರಾಷ್ಟ್ರ ಧ್ವಜವಿದೆ. ಅದರೊಂದಿಗೆ ಸೂರ್ಯ ಉದಯವಾಗುತ್ತಿದೆ. ಬಯೋಪಿಕ್ ಸಿನಿಮಾಗಳ ಪ್ರಖ್ಯಾತ ನಿರ್ದೇಶಕ ಓಮಂಗ್ ಕುಮಾರ್ ಈಗಾಗಲೇ ಹಿಟ್ ಚಿತ್ರಗಳಾದ ಮೇರಿ ಕೋಮ್ ಹಾಗೂ ಸರಬ್ಜಿತ್‌ನಂಥ ಚಿತ್ರಗಳಿಂದ ಹೆಸರು ಮಾಡಿದ್ದಾರೆ. ಈ ಸಾಲಿನಲ್ಲಿ ಮೋದಿ ಬಯೋಪಿಕ್ ಕೂಡ ಸೇರಿಕೊಳ್ಳಲಿದೆ.

ಈ ಸಿನಿಮಾವನ್ನು ಈಗಾಗಲೇ ಉತ್ತರಖಾಂಡ್, ಹಿಮಾಚಲ ಪ್ರದೇಶ, ದೆಹಲಿ ಹಾಗೂ ಗುಜರಾತ್‌ನಲ್ಲಿ ಚಿತ್ರೀಕರಿಸಲು ನಿರ್ಧರಿಸಲಾಗಿದೆ. ಸಂದೀಪ್ ಎಸ್. ಸಿಂಗ್ ನಿರ್ಮಾಣದ ಈ ಚಿತ್ರ ಕನ್ನಡ ಸೇರಿ 23 ಭಾಷೆಗಳಲ್ಲಿ ತೆರೆಕಾಣಲಿದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ಲಕ್ಷ್ಮೀಪುತ್ರ' ಬಿಡುಗಡೆಗೆ ಮುನ್ನ ಭಾವಿ ಪತ್ನಿ ಜೊತೆ ನಟ ಚಿಕ್ಕಣ್ಣ ಟೆಂಪಲ್​ ರನ್​: ಫೋಟೋ ವೈರಲ್​
ಕುಂಭಮೇಳ ಚೆಲುವೆ ಮೋನಾಲಿಸಾಗೆ ಪೊಲೀಸ್ ರಕ್ಷಣೆಗೆ 'ಒಕೆ' ಎಂದ ಕೋರ್ಟ್; ಎಲ್ಲಿದ್ದಾರೆ ಈಗ ರುದ್ರಾಕ್ಷಿ ಸುಂದರಿ?!