
ಕ್ರಿಕೆಟ್ ವಿಶ್ವಕಪ್ ಬಂದಾಗ್ಲೆಲ್ಲ ಬಟ್ಟೆ ಬಿಚ್ಚುತ್ತೇನೆ ಎಂದು ಹೇಳುತ್ತಿದ್ದ ನಟಿ ಪೂನಂ ಪಾಂಡೆಯ ವಿವಾದಿತ ಹೇಳಿಕೆಗಳ ರಹಸ್ಯ ಬಯಲಾಗಿದೆ. ಪೂನಂ ಹೀಗೆಲ್ಲ ಹೇಳಿಕೆ ನೀಡಿದ್ದು, ಆತ್ಮಸಂತೋಷದಿಂದ ಅಲ್ವಂತೆ. ಬಾಲಿವುಡ್‌ನಲ್ಲಿ ಮೇಲೇರಲು ಇಂಥ ಹೇಳಿಕೆ ನೀಡಿದ್ದಂತೆ. ಇತ್ತೀಚೆಗೆ ಮುಂಬೈನಲ್ಲಿ ನಡೆದ ‘ದಿ ವೀಕೆಂಡ್’ ಎಂಬ ಶಾರ್ಟ್‌ಫಿಲ್ಮ್‌ನ ಪ್ರಮೋಷನ್‌ನಲ್ಲಿ ಪೂನಂ ಈ ಸತ್ಯವನ್ನು ಬಿಚ್ಚಿಟ್ಟರು. ‘ನನ್ನ ಕುಟುಂಬದಲ್ಲಿ ಯಾರೂ ಸಿನಿಮಾ ಹಿನ್ನೆಲೆಯವರಲ್ಲ. ಏನೇ ಸರ್ಕಸ್ ಮಾಡಿದರೂ ಚಿತ್ರರಂಗದಲ್ಲಿ ಮೇಲೆ ಬರಲು ನನ್ನಿಂದ ಸಾಧ್ಯವಾಗುತ್ತಿರಲಿಲ್ಲ. ಇಲ್ಲಿ ಮುಂದೆ ಬರಲು ಗಾಡ್‌ಫಾದರ್ ಇರಬೇಕು, ಇಲ್ಲವೇ ದೊಡ್ಡ ದೊಡ್ಡ ನಿರ್ಮಾಪಕರ ಸಂಪರ್ಕ ಇಟ್ಟುಕೊಂಡಿರಬೇಕು. ಇವ್ಯಾವುದೂ ನನ್ನ ಬಳಿ ಇರಲಿಲ್ಲ. ಇದೇ ವೇಳೆ ಇಡೀ ಭಾರತ ವಿಶ್ವಕಪ್‌ನ ಗುಂಗಿನಲ್ಲಿತ್ತು. ಈ ಕಾರಣದಿಂದಾಗಿ ೨೦೧೧ರಲ್ಲಿ ಭಾರತ ಗೆದ್ದರೆ ಬೆತ್ತಲೆಯಾಗಿ ಓಡುವೆ ಎಂಬ ಹೇಳಿಕೆ ಕೊಟ್ಟೆಯಷ್ಟೇ’ ಎಂದಿದ್ದಾರೆ ಪೂನಂ.
‘ಈ ಹೇಳಿಕೆಯಿಂದ ನನಗೆ ಅದೃಷ್ಟ ಖುಲಾಯಿಸಿತು. ನನಗೆ ಒಂದೇ ಒಂದು ಬೇಸರವಿದೆ. ಮಾಧುರಿ ದೀಕ್ಷಿತ್ ನನಗೆ ಸ್ಫೂರ್ತಿ. ಅವರಂತೆ ಸೃಜನಶೀಲತೆಯಿಂದ ನಟಿಸಲಿಲ್ಲ ಎಂಬ ಬೇಸರ ಆಗಾಗ್ಗೆ ಕಾಡುತ್ತದೆ. ಮೇಲಿಂದ ಮೇಲೆ ವಿವಾದಿತ ಹೇಳಿಕೆ ನೀಡಿ ಮೇಲೆ ಬರಲು ಬಹಳ ಕಷ್ಟಪಟ್ಟಿರುವೆ. ದಿ ವೀಕೆಂಡ್ ಎನ್ನುವಂಥದ್ದು ಹಸಿಬಿಸಿ ಸಿನಿಮಾ. ಯಾಕೆ ನಾನು ಇಂಥ ಚಿತ್ರಗಳಲ್ಲಿ ನಟಿಸುತ್ತೇನೆಂದರೆ, ಇವತ್ತಿನ ಯುವಕರು ಬಯಸುತ್ತಿರುವುದೂ ಇದನ್ನೇ’ ಎನ್ನುವ ಸ್ಪಷ್ಟನೆಯನ್ನೂ ಪೂನಂ ಕೊಟ್ಟರು. ಅಂದಹಾಗೆ, ‘ದಿ ವಿಕೆಂಡ್’ ಅಡಲ್ಟ್ ಚಿತ್ರ ಸೆಪ್ಟೆಂಬರ್ ೨೪ರಂದು ತೆರೆಕಾಣುತ್ತಿದೆ.
(ಕೃಪೆ: ಕನ್ನಡಪ್ರಭ)
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.