
ಖ್ಯಾತ ನಟ, ನಟಿಯರ ಬಳಿ ಹೊಸ ಸಿನಿಮಾಕ್ಕೆ ಆಫರ್ ಕೊಡಲು ಹೋದರೆ ಮೊದಲು ಕಾಡುವುದು ಡೇಟ್ಸ್ ಸಮಸ್ಯೆ. ಒಪ್ಪಿಕೊಂಡಿರುವ ಸಿನಿಮಾಗಳನ್ನು ಮೊದಲು ಮುಗಿಸಬೇಕು ಎಂದೆಲ್ಲಾ ಹಪಹಪಿಸುತ್ತಾರೆ. ದಿನ ಬೆಳಗಾದರೆ ಬ್ಯುಸಿ ಶೆಡ್ಯೂಲ್‌ನಲ್ಲೇ ಮುಳುಗುತ್ತಾರೆ. ಈಗ ಇಂಥಹುದೇ ಸ್ಥಿತಿಯಲ್ಲಿದ್ದಾರೆ ಪೂಜಾ ಹೆಗ್ಡೆ.
ಒಂದು ಕಡೆ ಜೂನಿಯರ್ ಎನ್‌ಟಿಆರ್ ಜೊತೆಗೆ ‘ಅರವಿಂದ ಸಮೇತ’ ಮತ್ತೊಂದು ಕಡೆ ಮಹೇಶ್ ಬಾಬು ಜೊತೆಗೆ ‘ಮಹರ್ಷಿ’ ಇನ್ನೊಂದು ಕಡೆ ಪ್ರಭಾಸ್ ಜೊತೆಗೆ ಒಂದು ಸಿನಿಮಾದಲ್ಲಿ ಫುಲ್ ಬ್ಯುಸಿಯಾಗಿಬಿಟ್ಟಿದ್ದಾರೆ. ಅದು ಎಷ್ಟರ ಮಟ್ಟಿಗೆ ಎಂದರೆ ಬೆಳಿಗ್ಗೆ ಹೈದರಾಬಾದ್‌ನಲ್ಲಿದ್ದರೆ ಸಂಜೆ ಜೈಪುರ್, ಮತ್ತೆ ನಾಳೆ ಬೆಳಿಗ್ಗೆ ಮತ್ತೊಂದು ಲೊಕೇಷನ್. ಕನಿಷ್ಟ ದಿನಕ್ಕೆ ಇನ್ನೂರರಿಂದ ಮುನ್ನೂರು ಕಿ.ಮೀ. ಪ್ರಯಾಣ ಮಾಡುತ್ತಿರುವ ಪೂಜಾಗೆ ಈಗ ಸಾಕಪ್ಪಾ ಸಾಕು ಎನ್ನುವಂತಾಗಿದೆಯಂತೆ. ಪ್ರಯಾಣ ಒಂದು ಕಡೆಯಾದರೆ ಸ್ಕ್ರಿಪ್ಟ್ ರೀಡಿಂಗ್, ಲೊಕೇಷನ್ ಬದಲಾವಣೆ, ಜತೆ ಫಿಟ್‌ನೆಸ್ ಕಡೆಗೆ ಗಮನ ಎಲ್ಲವೂ ಸೇರಿ ಈಗ ಪೂಜಾ ಫುಲ್ ಡಲ್ ಆಗಿದ್ದಾರಂತೆ. ಅಲ್ಲದೇ ಮುಂದೆ ಹೀಗೆ ಮಾಡಿಕೊಳ್ಳದೇ ಎಲ್ಲವನ್ನೂ ಸರಿಯಾಗಿ ಮ್ಯಾನೇಜ್ ಮಾಡುವ ನಿರ್ಧಾಕ್ಕೆ ಬಂದಿದ್ದಾರೆ ಪೂಜಾ. ಹಾಗೆ ನೋಡಿದರೆ ಈ ಬ್ಯುಸಿ ಶೆಡ್ಯೂಲ್ ಅನ್ನು ಮ್ಯಾನೇಜ್ ಮಾಡುವುದು ಕೂಡ ಒಂದು ಕಲೆ. ಪೂಜಾ ಕಲಿಕೆಯ ಹಾದಿಯಲ್ಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.