ಆಸ್ಕರ್ ಸ್ಪರ್ಧೆಗೆ ’ವಿಲೇಜ್ ರಾಕ್‌ಸ್ಟಾರ್ಸ್’ ಆಯ್ಕೆ

By Web DeskFirst Published Sep 23, 2018, 11:06 AM IST
Highlights

ಮುಂದಿನ ವರ್ಷದ ಆಸ್ಕರ್ ಪ್ರಶಸ್ತಿ ಸ್ಪರ್ಧೆಗೆ ಭಾರತವನ್ನು ಪ್ರತಿನಿಧಿಸಲು ರೀಮಾ ದಾಸ್‌ರ ರಾಷ್ಟ್ರ ಪ್ರಶಸ್ತಿ ವಿಜೇತ ಅಸ್ಸಾಮಿ ಚಿತ್ರ ‘ವಿಲೇಜ್ ರಾಕ್‌ಸ್ಟಾರ್ಸ್‌’ ಆಯ್ಕೆಯಾಗಿದೆ. 

ಮುಂಬೈ (ಸೆ. 23): ಮುಂದಿನ ವರ್ಷದ ಆಸ್ಕರ್ ಪ್ರಶಸ್ತಿ ಸ್ಪರ್ಧೆಗೆ ಭಾರತವನ್ನು ಪ್ರತಿನಿಧಿಸಲು ರೀಮಾ ದಾಸ್‌ರ ರಾಷ್ಟ್ರ ಪ್ರಶಸ್ತಿ ವಿಜೇತ ಅಸ್ಸಾಮಿ ಚಿತ್ರ ‘ವಿಲೇಜ್ ರಾಕ್‌ಸ್ಟಾರ್ಸ್‌’ ಆಯ್ಕೆಯಾಗಿದೆ.

ಫಿಲಂ ಫೆಡರೇಶನ್ ಆಫ್ ಇಂಡಿಯಾದ ಆಸ್ಕರ್ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಈ ವಿಷಯ ಶನಿವಾರ ಪ್ರಕಟಿಸಿದ್ದಾರೆ. 91 ನೇ ಅಕಾಡೆಮಿ ಪುರಸ್ಕಾರದ ಅತ್ಯುತ್ತಮ ವಿದೇಶಿ ಭಾಷಾ ವಿಭಾಗಕ್ಕೆ ಭಾರತದ ಪರವಾಗಿ ‘ವಿಲೇಜ್ ರಾಕ್‌ಸ್ಟಾರ್ಸ್‌’ ಪೈಪೋಟಿ ನೀಡಲಿದೆ.  ಅಸ್ಸಾಮಿ ಚಿತ್ರವೊಂದಕ್ಕೆ ಇದೇ ಮೊದಲ ಬಾರಿ ಇಂತಹ ಮಾನ್ಯತೆ ಸಿಕ್ಕಿದೆ.

ಚಿತ್ರಕತೆ:

ಬಡತನದಲ್ಲಿ ಹುಟ್ಟಿದ ಧುನು ಎಂಬ ಬಾಲಕಿಯು ರಾಕ್ ಬ್ಯಾಂಡ್ ತಂಡ ಕಟ್ಟಬೇಕು, ಗಿಟಾರ್ ಹೊಂದಬೇಕು ಎಂಬ ತನ್ನ ಕನಸನ್ನು ನನಸಾಗಿಸಲು ಪಡುವ ಪರಿಪಾಟಲು ಚಿತ್ರಕತೆಯ ಸಾರ. ಬಾಲನಟಿ ಭನಿತಾ ದಾಸ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾಳೆ. ಚಿತ್ರ 2017 ರ ಟೊರೊಂಟೊ ಇಂಟರ್‌ನ್ಯಾಶನಲ್ ಫಿಲಂ ಫೆಸ್ಟಿವಲ್‌ನಲ್ಲಿ ಪ್ರದರ್ಶನ ಕಂಡಿತ್ತು. ಅಲ್ಲದೆ, 70 ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ‘ವಿಲೇಜ್ ರಾಕ್‌ಸ್ಟಾರ್ಸ್‌’ ಮೆಚ್ಚುಗೆಗೆ ಪಾತ್ರವಾಗಿದೆ. 

click me!