
ಚೆನ್ನೈ: ಬಹುನಿರೀಕ್ಷಿತ ಕಾಲಾ ಚಿತ್ರದ ಶೀರ್ಷಿಕೆ ಮತ್ತು ಕತೆಯ ಹಕ್ಕುಸ್ವಾಮ್ಯ ವಿವಾದಕ್ಕೆ ಸಂಬಂಧಿಸಿದಂತೆ ನಟರಾದ ರಜನೀಕಾಂತ್, ಧನುಷ್, ನಿರ್ದೇಶಕ ಪಿ.ಎ. ರಂಜಿತ್‌ಗೆ ಮದ್ರಾಸ್ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ಸಹಾಯಕ ನಿರ್ದೇಶಕ ರಾಜಶೇಖರನ್ ಎನ್ನುವವರು ದಶಕದ ಹಿಂದೆಯೇ ತಾನು ಕಾಲಾ ಕರಿಕಾಲನ್ ಚಿತ್ರದ ನಾಯಕನಾಗಿ ಅಭಿನಯಿಸುವಂತೆ ರಜನಿ ಅವರನ್ನು ಕೇಳಿಕೊಂಡಿದ್ದೆ.
ಹೀಗಾಗಿ ಚಿತ್ರದ ಕತೆ ತನಗೆ ಸೇರಿದ್ದು ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ. ಫೆ.12ರ ಒಳಗಾಗಿ ನೋಟಿಸ್‌ಗೆ ಉತ್ತರಿಸುವಂತೆ ಕೋರ್ಟ್ ರಜನೀಕಾಂತ್ ಮತ್ತು ಇತರರಿಗೆ ತಿಳಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.