ಸ್ಯಾಂಡಲ್ ವುಡ್ ನಟಿ ಮಿಲನಾ ನಾಗರಾಜ್ ಫುಲ್ ಟೈಮ್ ಅಮ್ಮನ ಡ್ಯೂಟಿಯಲ್ಲಿ ಬ್ಯುಸಿಯಾಗಿದ್ದಾರೆ. ಮಗಳೊಂಡಿಗೆ ಕ್ವಾಲಿಟಿ ಸಮಯ ಕಳೆಯುತ್ತಿದ್ದಾರೆ ನಟಿ.
sandalwood Jan 17 2026
Author: Pavna Das Image Credits:Instagram
Kannada
ಮುದ್ದು ಮಗಳು ಪರಿ
ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಜೋಡಿಯ ಮುದ್ದಿನ ಮಗಳು ಪರಿ. ಸದ್ಯಕ್ಕಂತೂ ಮಿಲನಾ ಸೋಶಿಯಲ್ ಮೀಡಿಯಾದಲ್ಲಿ ಮುದ್ದಿನ ಮಗಳ ಫೋಟೊ, ಮುದ್ದಾದ ವಿಡಿಯೋಗಳೇ ತುಂಬಿದೆ.
Image credits: Instagram
Kannada
ಕ್ಯೂಟ್ ಫೋಟೊಸ್
ಇದೀಗ ನಟಿ ಸಂಕ್ರಾಂತಿ ಹಬ್ಬದ ಸಂಭ್ರಮದ ಬಳಿಕ ತಮ್ಮ ಇನ್’ಸ್ಟಾಗ್ರಾಂನಲ್ಲಿ ಮಗಳ ಜೊತೆಗಿನ ಮುದ್ದಾದ ಫೋಟೊಗಳನ್ನು ಶೇರ್ ಮಾಡಿದ್ದಾರೆ.
Image credits: Instagram
Kannada
ಪುಟ್ಟ ದೇವತೆ
ಓ ನನ್ನ ಪುಟ್ಟ ದೇವತೆ ಎಂದು ಕ್ಯಾಪ್ಶನ್ ಕೊಟ್ಟಿರುವ ಮಿಲನಾ ನಾಗರಾಜ್, ಮಗಳ ತುಂಟಾಟದ ಕ್ಯೂಟ್ ಫೋಟೊಗಳ ಜೊತೆಗೆ ತಮ್ಮ ಫೋಟೊ ಕೂಡ ಶೇರ್ ಮಾಡಿದ್ದಾರೆ.
Image credits: Instagram
Kannada
ಅಮ್ಮ-ಮಗಳ ಮುದ್ದಾದ ಜೋಡಿ
ಮಿಲನಾ ಕಸ್ಟಮೈಸ್ ಮಾಡಿರುವ ಮರೂನ್ ಕಾಟನ್ ಡ್ರೆಸ್ ಧರಿಸಿದ್ರೆ, ಪರಿ ಹಸಿರು ಬಣ್ಣದ ಮುದ್ದಾದ ಫ್ರಾಕ್ ಧರಿಸಿ, ಸ್ಮೈಲ್ ಮಾಡಿ, ಅಮ್ಮನ ಜೊತೆ ಪೋಸ್ ಕೊಟ್ಟಿದ್ದಾರೆ.
Image credits: Instagram
Kannada
ಅಮೃತಾ ಅಯ್ಯಂಗಾರ್ ಏನ್ ಹೇಳಿದ್ರು?
ಈ ಮುದ್ದಾದ ಫೋಟೋ ನೋಡಿ ಅಮೃತಾ ಅಯ್ಯಂಗಾರ್ ನನ್ನ ಮುದ್ದು ಬಂಗಾರಿ ಎಂದು ಕಾಮೆಂಟ್ ಮಾಡಿದ್ದಾರೆ.
Image credits: Instagram
Kannada
ಲವ್ ಮಾಕ್ಟೇಲ್ 3ರಲ್ಲಿ ನಟಿಸುತ್ತಾರ?
ಮಿಲನಾ ನಾಗರಾಜ್ ಮತ್ತೆ ಲವ್ ಮಾಕ್ಟೇಲ್ ಶಾರ್ಟ್ ಹೇರ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದರಿಂದ ನಟಿ ಮತ್ತೆ ಲವ್ ಮಾಕ್ಟೇಲ್ 3 ಸೀರೀಸ್ ನಲ್ಲಿ ನಟಿಸುತ್ತಿದ್ದಾರೆ ಎನ್ನುವ ಕ್ಲೂ ಸಿಕ್ಕಿದೆ.
Image credits: Instagram
Kannada
ಲವ್ ಮಾಕ್ಟೇಲ್ ನಿರ್ಮಾಪಕಿ
ಕನ್ನಡದ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದಾಗಿರುವ ಲವ್ ಮಾಕ್ಟೇಲ್ ಸೀರೀಸ್ ಗಳನ್ನು ಮಿಲನಾ ನಾಗರಾಜ್ ಅವರೇ ನಿರ್ಮಾಣ ಮಾಡಿದ್ದಾರೆ. ಎರಡು ಸಿನಿಮಾದಲ್ಲೂ ನಟಿಸಿದ್ದು, ಮೂರನೇ ಸಿನಿಮಾ ಶೂಟಿಂಗ್ ನಡೆಯುತ್ತಿದೆ.