ಈ ಪುಟಾಣಿಯ ಭೇಟಿಗಾಗಿ ಕಾಯುತ್ತಿದ್ದಾರೆ ಕಿಚ್ಚ ಸುದೀಪ್

Published : Feb 23, 2019, 05:14 PM ISTUpdated : Feb 23, 2019, 05:18 PM IST
ಈ ಪುಟಾಣಿಯ ಭೇಟಿಗಾಗಿ ಕಾಯುತ್ತಿದ್ದಾರೆ ಕಿಚ್ಚ ಸುದೀಪ್

ಸಾರಾಂಶ

ಅಭಿಮಾನಿಯ ಭೇಟಿಗಾಗಿ ಕಾಯುತ್ತಿದ್ದಾರೆ ಕಿಚ್ಚ ಸುದೀಪ್ | ಸುದೀಪ್ ರನ್ನು ಭೇಟಿಯಾಗಲು ಕಾಯುತ್ತಿದ್ದಾಳೆ ವಿಶೇಷ ಚೇತನ ಮಗು | 

ಬೆಂಗಳೂರು (ಫೆ. 23): ಕಿಚ್ಚ ಸುದೀಪ್ ಅಪಾರ ಅಭಿಮಾನಿಗಳನ್ನು ಹೊಂದಿರುವ ಸ್ಟಾರ್ ನಟ. ಎಷ್ಟೇ ಬ್ಯುಸಿಯಾಗಿದ್ದರೂ ಅಭಿಮಾನಿಗಳು ಭೇಟಿಯಾಗಬೇಕು ಎಂದು ಹೇಳಿದರೆ ಇಲ್ಲ ಎಂದು ಹೇಳುವುದೇ ಇಲ್ಲ. ಎಷ್ಟೋ ಬಾರಿ ಅಭಿಮಾನಿಗಳನ್ನು ಭೇಟಿಯಾಗಿದ್ದಾರೆ. 

ಇದೀಗ ಸುದೀಪ್ ಹೃದಯ ಈ ಪುಟ್ಟ ವಿಶೇಷ ಚೇತನ ಮಗುವನ್ನು ಭೇಟಿ ಮಾಡಲು ಮಿಡಿಯುತ್ತಿದೆ. ವಿಶೇಷ ಚೇತನ ಮಗುವೊಂದು ಸುದೀಪ್ ರನ್ನು ಭೇಟಿಯಾಗಬೇಕೆಂಬ ಅದಮ್ಯ ಆಸೆಯನ್ನು ವ್ಯಕ್ತಪಡಿಸಿದೆ. ಅವರ ಮೇಲೆ ಅಪಾರ ಪ್ರೀತಿಯನ್ನು ಇಟ್ಟುಕೊಂಡಿದೆ. ‘ಸುದೀಪ್ ಮಾಮಾ, ನಿಮ್ಮನ್ನು ಮಾತಾಡಿಸಬೇಕು. ಬನ್ನಿ’ ಎಂದು ಮುದ್ಮುದ್ದಾಗಿ ಹೇಳಿದ್ದಾಳೆ. ಈ ವಿಡಿಯೋವನ್ನು ಸುದೀಪ್ ಟ್ವಿಟರ್ ಗೆ ಟ್ಯಾಗ್ ಮಾಡಲಾಗಿದೆ. 

 


ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಸುದೀಪ್, ‘ಈ ಪುಟಾಣಿಯ ಪ್ರೀತಿಗೆ ಖುಷಿಪಡಬೇಕೋ, ಈಕೆಯ ಸ್ಥಿತಿಗೆ ದುಃಖಿಸಬೇಕೋ ಗೊತ್ತಾಗುತ್ತಿಲ್ಲ. ಈ ವಿಡಿಯೋವನ್ನು ನನಗೆ ತಲುಪಿಸಿದ್ದಕ್ಕೆ ಧನ್ಯವಾದಗಳು. ಈ ಮಗು ಎಲ್ಲಿದ್ದಾಳೆ‘? ಎಂದು ಟ್ವೀಟ್ ಮಾಡಿದ್ದಾರೆ.   

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Paddu Gowda Passed Away: ʻಪ್ಯಾಟೆ ಮಂದಿ ಕಾಡಿಗ್‌ ಬಂದ್ರುʼ ಖ್ಯಾತಿ ಪದ್ದು ಗೌಡ ನಿಧನ; ಜೀವನಯಾನ ಮುಗಿಸಿದ ಮುಗ್ಧ ಸ್ನೇಹಜೀವಿ!
666 operation Dream Theatre Teaser: ಶಿವರಾಜ್‌ಕುಮಾರ್-ಧನಂಜಯ್ '666 ಆಪರೇಶನ್ ಡ್ರೀಮ್ ಥಿಯೇಟರ್ ಟೀಸರ್' ಬಿಡುಗಡೆ; ಭಾರೀ ಹೈಪ್ ಸೃಷ್ಟಿ!