
ಕಾಂತಾರ ಸಿನಿಮಾ ದೈವವಾಣಿ ಸುದ್ದಿಗೆ ಬಿಗ್ ಟ್ವಿಸ್ಟ್!
ಇತ್ತೀಚೆಗೆ ಬಹುದೊಡ್ಡ ಸುದ್ದಿಯಾದ ಮಂಗಳೂರಿನ ದೈವ ನುಡಿ ಘಟನೆಯ ಬಗ್ಗೆ ಇದೀಗ ಸ್ವತಃ ಕ್ಷೇತ್ರದಿಂದಲೇ ಸ್ಪಷಿಕರಣ ಬಂದಿದೆ. ಬಹುತೇಕರಿಗೆ ಗೊತ್ತಿರುವಂತೆ, ರಿಷಬ್ ಶೆಟ್ಟಿ ನಟನೆ-ನಿರ್ದೇಶನದ 'ಕಾಂತಾರ ಚಾಪ್ಟರ್ 1' ಸಿನಿಮಾ ಹಾಗೂ ಆ ಬಗ್ಗೆ ಶ್ರೀ ಕ್ಷೇತ್ರ ಪೇರಾರ ಜಾತ್ರೆಯಲ್ಲಿ ಹೇಳಿದೆ ಎನ್ನಲಾದ ದೈವ ನುಡಿಯ ಬಗ್ಗೆ ಸಾಕಷ್ಟು ಹೇಳಿಕೆಗಳು, ಚರ್ಚೆಗಳು ಹಾಗೂ ವಿವಾದಗಳು ಏರ್ಪಟ್ಟಿವೆ. ಆದರೆ, ಸುತ್ತುತ್ತಿರುವ ಸುದ್ದಿಯೇ ಬೇರೆಬೇರೆ ರೂಪದಲ್ಲಿ ರೌಂಡ್ ಹಾಕುತ್ತಿದೆ. ಆದರೆ, ಇದೀಗ ಶ್ರೀ ಕ್ಷೇತ್ರದಿಂದಲೇ ಸ್ಪಷ್ಟೀಕರಣ ಕೊಟ್ಟಿರುವ ಪ್ರೆಸ್ ನೋಟ್ ಬಂದಿದ್ದು ಎಲ್ಲಾ ವಿವಾದವೂ ಅಂತ್ಯ ಕಾಣುವ ಸಮಯ ಬಂದಿದೆ ಎನ್ನಬಹುದು!
ಹೌದು, ಇತ್ತೀಚೆಗೆ ಸೋಷಿಯಲ್ ಮೀಡಿಯಾ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿರುವ ಪೆರಾರ ಕ್ಷೇತ್ರದ ದೈವ ವಾಣಿ ಹಾಗೆ ಹೇಳಿಲ್ಲ ಎಂದಿದೆ ಅಲ್ಲಿನ ಆಡಳಿತ ಮಂಡಳಿ. 'ಮೊನ್ನೆ ಪೆರಾರ ಕ್ಷೇತ್ರದಲ್ಲಿ ದೈವವು ರಿಷಬ್ ಶೆಟ್ಟಿಯವರ ನಿರ್ದೇಶನದ ಕಾಂತಾರ ಹಾಗೂ ಕಾಂತಾರ ಚಾಪ್ಟರ್ 1' ಸಿನಿಮಾದ ಬಗ್ಗೆ ಯಾವ ಮಾತೂ ಆಡಿಲ್ಲ. ಆದರೂ ಒಂದಿಷ್ಟು ಜನರು 'ಹೋರಾಟಗಾರರ' ಹೆಸರಲ್ಲಿ ಮಾಧ್ಯಮದ ಎದುರು ಬಂದು 'ಕಾಂತಾರಕ್ಕೆ ದೈವದ ಎಚ್ಚರಿಕೆ' ಎಂದೆಲ್ಲಾ ಸುದ್ದಿ ಕೊಟ್ಟಿದ್ದಾರೆ.
ದೈವದ ಹೆಸರಿನಲ್ಲಿ ಹಣ ಮಾಡಿಕೊಂಡವರ 'ಹಣವನ್ನು ಆಸ್ಪತ್ರೆಗೆ ಸೇರಿಸುತ್ತೇನೆ' ಎಂದು ದೈವ ಹೇಳಿದೆ ಎಂದೆಲ್ಲಾ ಸುಳ್ಳು ಸುದ್ದಿ ಹಬ್ಬಿಸಿದೆ. ಇದೇ ವೇಳೆ, ಕಾಂತಾರಕ್ಕೆ ದೈವ ಒಪ್ಪಿಗೆ ಕೊಟ್ಟಿಲ್ಲ ಎನ್ನುವಂತಾ ಮಾತನಾಡಿದ್ದು ದೊಡ್ಡ ವಿವಾದವಾಗಿ ರಾಜ್ಯ, ರಾಷ್ಟ್ರದ ಮಾಧ್ಯಮದಲ್ಲಿ ದೊಡ್ಡ ಸುದ್ದಿಯಾಗಿತ್ತು, ದೈವದ ನುಡಿಯ ಬಗ್ಗೆಯೇ ಆಕ್ಷೇಪ ಎದ್ದಿತ್ತು. ಆದರೆ, ಆದರೆ ಅದು ಸುಳ್ಳು ಸುದ್ದಿ ಎಂದು ಇವತ್ತು ಅಲ್ಲಿನವರು ಪ್ರೆಸ್ ನೋಟ್ ರಿಲೀಸ್ ಮಾಡಿದ್ದಾರೆ.
ಪೆರಾರ ಕ್ಷೇತ್ರದ ಆಡಳಿತ ಮಂಡಳಿ ಬಿಡುಗಡೆ ಮಾಡಿರುವ ಪ್ರೆಸ್‌ನೋಟ್‌ನಲ್ಲಿ ಸ್ಪಷ್ಟವಾಗಿ ಈ ಬಗ್ಗೆ ಕ್ಲಾರಿಟಿ ಕೊಡಲಾಗಿದೆ. 'ಆ ತರದ ನುಡಿಯನ್ನು ದೇವರು ಕೊಟ್ಟಿಲ್ಲ. ಆ ಸಮಯದಲ್ಲಿ ದೈವದ ಮುಂದೆ ಕಾಂತಾರ ಸಿನಿಮಾದ ಬಗ್ಗೆ ಪ್ರಶ್ನೆಯೇ ಬಂದಿಲ್ಲ ಎಂದ ಮೇಲೆ, ಅದು ಆ ಬಗ್ಗೆ ಉತ್ತರವನ್ನು ಹೇಗೆ ಕೊಡಲು ಸಾಧ್ಯ?' ಎಂದು ಸ್ಪಷ್ಟವಾಗಿ ಹೇಳಿದೆ. ಇಷ್ಟರವರೆಗೂ ಹಬ್ಬುತ್ತಿದ್ದ ಆ ಸುದ್ದಿ ಸುಳ್ಳು ಎಂದು ಗೊತ್ತಾದ ಬಳಿಕ ಇದೀಗ, ಹೋರಾಟಗಾರರ ಹೆಸರಲ್ಲಿ ದೇವರನ್ನು ಬಳಸಿಕೊಂಡವರ (ನಕಲಿ ಹೋರಾಟಗಾರರು?) ಬಗ್ಗೆ ಸಾರ್ವಜನಿಕರು ಆಕ್ರೋಶ ವ್ತಕ್ತಪಡಿಸಿದ್ದಾರೆ.
ವಿವಾದ ಹಿನ್ನೆಲೆ:-
'ಕಾಂತಾರ ಚಾಪ್ಟರ್ 1' ಸಿನಿಮಾ ಬಿಡುಗಡೆ ಬಳಿಕ ಮನೊರಂಜನೆಗಾಗಿ, ಸಾಮಾಜಿಕ ಜಾಲತಾಣದಲ್ಲಿ ಲೈಕ್ಸ್ ಪಡೆಯಲು ದೈವದ ಅನುಕರಣೆ ಮಾಡೋ ಹುಚ್ಚಾಟ ಹೆಚ್ಚಾಗಿದೆ. ಇದಕ್ಕೆ ದೈವದ ಅನುಕರಣೆ ಮಾಡಿದ್ರೆ ಹುಷಾರ್ ಅನ್ನೋ ಎಚ್ಚರಿಕೊಂದು ಬಂದಿದೆ. ಕಾಂತಾರ ಅಧ್ಯಾಯ ಒಂದು ಸಿನಿಮಾ ನೋಡಿದ ಪ್ರೇಕ್ಷಕರೊಬ್ಬರು ತಮಿಳು ನಾಡಿ ಚಿತ್ರಮಂದಿರದಲ್ಲಿ ಪಂಜುರ್ಲಿ ದೈವದ ವೇಷ ಧರಿಸಿ ಬಂದಿದ್ದ. ಪಂಜುರ್ಲಿ ದೈವದ ಹಾಗೆ ಚಿತ್ರಮಂದಿರದ ತುಂಬೆಲ್ಲಾ ಕುಣಿದಿದ್ದಾನೆ. ಅಷ್ಟೆ ಅಲ್ಲ ಬೆಂಗಳೂರಿನಲ್ಲಿ ಚಿತ್ರಮಂದಿರದ ಹೊರಗೆ ಗುಳಿಗ ದೈವ ಮೈ ಮೇಲೆ ಬಂದಂತೆ ವ್ಯಕ್ತಿಯೊಬ್ಬ ಪ್ರಚಾರಕ್ಕಾಗಿ ನರ್ತಿಸಿದ್ದಾನೆ.
ಇದರ ಜೊತೆ ಸಿನಿಮಾ ನೋಡುತ್ತಲೇ ಮಹಿಳೆಯ ಮೇಲೆ ದೈವ ಆಹ್ವಾನ ಆದಂತೆ ವರ್ತಿಸುತ್ತಿರೋ ಘಟನೆಗಳು ನಡೆಯುತ್ತಿವೆ. ಇದನ್ನೆಲ್ಲಾ ಗಮನಿಸಿರೋ ದೈವ ನರ್ತಕರು. ಬೇಸರಗೊಂಡಿದ್ದು, ದೈವದ ಅಪಹಾಸ್ಯ, ಅನುಕರಣೆ ಮಾಡುವವರ ವಿರುದ್ಧ ಬಜಪೆ, ಪೆರಾರ, ಬ್ರಹ್ಮ ಬಲವಂಡಿ, ಪಿಲ್ಚಂಡಿ ದೈವಸ್ಥಾನಗಳಲ್ಲಿ ದೈವ ನರ್ತಕರು, ದೈವಾರಾಧಕರು ಸಾಮೂಹಿಕ ಪ್ರಾರ್ಥನೆ ಮಾಡಿದ್ದಾರೆ. ದೈವ ನರ್ತಕರು ಮತ್ತು ದೈವಾರಾಧಕರಿಗೆ ಪಿಲ್ಚಂಡಿ ದೈವ ನುಡಿ ಕೊಟ್ಟಿದೆ. ಸಿನಿಮಾ ನೋಡಿ ದೈವಕ್ಕೆ ಅಪಹಾಸ್ಯ ಆಗೋ ಹಾಗೆ ನಟಿಸೋರಿಗೆ ಎಚ್ಚರಿಕೆ ಕೊಟ್ಟಿದೆ ಎನ್ನಲಾಗಿತ್ತು.
'ಹುಚ್ಚು ಕಟ್ಟಿದವರಿಗೆ ಹುಚ್ಚು ಹಿಡಿಸುತ್ತೇನೆ 'ದೈವದ ಹೆಸರಿನಲ್ಲಿ ಮಾಡಿದ ದುಡ್ಡನ್ನ ಆಸ್ಪತ್ರೆಗೆ ಸುರಿಸುತ್ತೇನೆ'' ನಿಮ್ಮ ಹಿಂದೆ ನಾನಿದ್ದೇನೆ ಹೋರಾಟ ಮುಂದುವರೆಸಿ ಎಂದು ದೈವದ ಎದುರು ನೋವು ತೋಡಿಕೊಂಡ ದೈವಾರಾಧಕರಿಗೆ ಪಿಲ್ಚಂಡಿ ದೈವವು ಅಭಯ ನುಡಿ ಕೊಟ್ಟಿದೆ' ಎನ್ನಲಾಗಿತ್ತು. ಆದರೆ, ಇದೀಗ ಪೆರಾರ ದೇವಾಲಯದ ಆಡಳಿತ ಮಂಡಳಿಯು ‘ಕಾಂತಾರ ಸಿನಿಮಾದ ಬಗ್ಗೆ ಅಲ್ಲಿ ಪ್ರಶ್ನೆಯೇ ಬಂದಿರಲಿಲ್ಲ, ಹೀಗಾಗಿ ದೈವ ಕೊಟ್ಟ ಉತ್ತರ ಕೂಡ ಆ ಸಿನಿಮಾ ಬಗ್ಗೆ ಅಲ್ಲ. ಅದು ದೈವಕ್ಕೆ ಆಗಿರುವ ಅಪಚಾರ, ಅಪಹಾಸ್ಯ ಹಾಗೂ ಅಪಪ್ರಚಾರದ ಬಗ್ಗೆ ಕೇಳಲಾಗಿದ್ದ ಪ್ರಶ್ನೆಗೆ ದೈವವು ಕೊಟ್ಟಿರುವ ಉತ್ತರವಾಗಿತ್ತು' ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.