ಈ ಗ್ರಾಮದ ಜನರಿಗೆ ಸ್ಯಾಂಡಲ್'ವುಡ್'ನ ಮಾಣಿಕ್ಯನೇ ದೇವರಂತೆ!

Published : Oct 31, 2016, 02:30 AM ISTUpdated : Apr 11, 2018, 12:59 PM IST
ಈ ಗ್ರಾಮದ ಜನರಿಗೆ ಸ್ಯಾಂಡಲ್'ವುಡ್'ನ ಮಾಣಿಕ್ಯನೇ ದೇವರಂತೆ!

ಸಾರಾಂಶ

ಸುಮಾರು 500ಕ್ಕೂ ಹೆಚ್ಚು ಮನೆಗಳಿರುವ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಬಗ್ಗನಡು ಗ್ರಾಮದ ಪ್ರತಿ ಮನೆ, ಅಂಗಡಿ ಅಷ್ಟೇ ಯಾಕೆ ಚಿಕ್ಕ ಮಕ್ಕಳ ಕೈ ಮೇಲೂ ಸುದೀಪ್ ಚಿತ್ರಗಳು ಕಾಣಿಸುತ್ತವೆ. ಎಲ್ಲೆಂದರಲ್ಲಿ ಸುದೀಪ್ ಫೋಟೋ ಇಟ್ಟು ಪೂಜಿಸುತ್ತಾರೆ. ಈ ಗ್ರಾಮದಲ್ಲಿ ಸುದೀಪ್  ದೇವರಾಗಿಬಿಟ್ಟಿದ್ದಾರೆ. ಅಂದರೆ ಇಲ್ಲಿನ ಗ್ರಾಮಸ್ಥರ ಪಾಲಿಗೆ ಕಿಚ್ಚ ಸುದೀಪ್ ಅಂದರೆ ದೇವರಂತೆ.

ಚಿತ್ರದುರ್ಗ(ಅ.31): ತಮ್ಮ ನೆಚ್ಚಿನ ಸಿನಿಮಾ ನಟ ನಟಿಯರಿಗಾಗಿ ದೇವಾಲಯಗಳನ್ನು ಕಟ್ಟಿ ಪೂಜಿಸುವುದನ್ನು ನಾವು ನೋಡಿದ್ದೇವೆ, ಕೇಳಿದ್ದೇವೆ. ಆದರೆ ಇಲ್ಲೊಂದು ಗ್ರಾಮದ ಪ್ರತಿ ಮನೆ ಮನೆಯಲ್ಲೂ ಸ್ಯಾಂಡಲ್'ವುಡ್'ನ ಖ್ಯಾತ ನಾಯಕನ ಪೋಟೋ ಇಟ್ಟು ಪೂಜಿಸುತ್ತಾರೆ. ಯಾರೂ ಆ ನಟ ಅಂತೀರಾ? ಹಾಗಾದ್ರೆ ಈ ಸ್ಟೋರಿ ಓದಿ.

ಸುಮಾರು 500ಕ್ಕೂ ಹೆಚ್ಚು ಮನೆಗಳಿರುವ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಬಗ್ಗನಡು ಗ್ರಾಮದ ಪ್ರತಿ ಮನೆ, ಅಂಗಡಿ ಅಷ್ಟೇ ಯಾಕೆ ಚಿಕ್ಕ ಮಕ್ಕಳ ಕೈ ಮೇಲೂ ಸುದೀಪ್ ಚಿತ್ರಗಳು ಕಾಣಿಸುತ್ತವೆ. ಎಲ್ಲೆಂದರಲ್ಲಿ ಸುದೀಪ್ ಫೋಟೋ ಇಟ್ಟು ಪೂಜಿಸುತ್ತಾರೆ. ಈ ಗ್ರಾಮದಲ್ಲಿ ಸುದೀಪ್  ದೇವರಾಗಿಬಿಟ್ಟಿದ್ದಾರೆ. ಅಂದರೆ ಇಲ್ಲಿನ ಗ್ರಾಮಸ್ಥರ ಪಾಲಿಗೆ ಕಿಚ್ಚ ಸುದೀಪ್ ಅಂದರೆ ದೇವರಂತೆ.

ಕಳೆದ ಶುಕ್ರವಾರವಷ್ಟೇ ರಿಲೀಸ್ ಆಗಿರುವ ಮುಕುಂದ ಮುರಾರಿ ಚಿತ್ರದಲ್ಲಿ ಕಿಚ್ಚ ಸುದೀಪ್ ದೇವರ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸಾಕ್ಷಾತ್ ಕೃಷ್ಣನಂತೆ ಕಾಣಿಸಿಕೊಂಡಿದ್ದಾರೆ. ಇದನ್ನು ನೋಡಿಯೇ ಇಲ್ಲಿನ ಗ್ರಾಮಸ್ಥರು ಸುದೀಪ್'ನನ್ನು ಪೂಜಿಸುತ್ತಾರೆ ಅಂದುಕೊಂಡರೆ ನಮ್ಮ ನಿಮ್ಮ ಊಹೆ ತಪ್ಪು. ಯಾಕೆಂದರೆ ಸುದೀಪ್ ಚಿತ್ರರಂಗಕ್ಕೆ ಕಾಲಿಟ್ಟಿದಾಗಿನಿಂದಲೂ ಇಲ್ಲಿನ ಜನರು ಕಿಚ್ಚನನ್ನು ಪೂಜಿಸುತ್ತಾ ಬಂದಿದ್ದಾರೆ. ಅಲ್ಲದೇ ಪ್ರತಿ ಮಂಗಳವಾರ ಗ್ರಾಮ ದೇವತೆ ಕರಿಯಮ್ಮ ದೇವಿಗೆ ಪೂಜೆ ಮಾಡುವಾಗ ಸುದೀಪ್ ಭಾವಚಿತ್ರವಿಟ್ಟು ಪೂಜೆ ಮಾಡ್ತಾರಂತೆ

ಸುದೀಪ್ ಹುಟ್ಟಹಬ್ಬದಂದು ಶಾಲಾ ಮಕ್ಕಳಿಗೆ ನೋಟ್‌ ಪುಸ್ತಕ ವಿತರಿಸುತ್ತಾರೆ. ಕಾರ್ತಿಕ ಹಬ್ಬದಂದು ಇಡೀ ಊರಿಗೆ ಊರೇ ಸುದೀಪ್ ಕಟೌಟ್. ಪೋಷ್ಟರ್‌'ಗಳೇ ತುಂಬಿ ಹೋಗಿರುತ್ತವೆ. ಸುದೀಪ್'ನನ್ನು ದೇವರಂತೆ ಪೂಜಿಸುವ ಇಲ್ಲಿನ ಗ್ರಾಮಸ್ಥರು, ಸುದೀಪ್ ಆಗಮನಕ್ಕಾಗಿ ಕಾಯುತ್ತಾ ಕುಳಿತಿದ್ದಾರೆ. ಅಭಿಮಾನಿಗಳ ಆಸೆ ಈಡೇರಿಸುತ್ತಾ ಸ್ಯಾಂಡಲ್‌ವುಡ್ ಮಾಣಿಕ್ಯಾ ಕಾದು ನೋಡಬೇಕು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಇನ್‌ಫ್ಲುಯೆನ್ಸರ್‌ನ್ನು ಮಂಚಕ್ಕೆ ಕರೆದ್ನಾ ಮಾಜಿ ಬಿಗ್ ಬಾಸ್ ಸ್ಪರ್ಧಿ? ಚಾಟ್ ಸ್ಕ್ರೀನ್‌ಶಾಟ್ ಲೀಕ್
2026ರ ಆರಂಭದಲ್ಲೇ ಖ್ಯಾತ ನಟಿ ಬದುಕಲ್ಲಿ ಬಿರುಗಾಳಿ, ಮದ್ವೆಯಾದ ಎರಡೇ ವರ್ಷಕ್ಕೆ ಡಿವೋರ್ಸ್