Shubha Poonja: ಕೈ ಸಹಾಯವಿಲ್ದೇ ಮಾವು ತಿಂದು, ಪಾತ್ರೆ ಸೋಪ್​ನಲ್ಲಿ ಬಟ್ಟೆ ತೊಳೆದ ಶುಭಾ ಪೂಂಜಾ!

Published : May 27, 2025, 06:21 PM ISTUpdated : May 28, 2025, 10:22 AM IST
Shubha Poonja

ಸಾರಾಂಶ

ಸ್ಯಾಂಡಲ್‌ವುಡ್‌ನ ನಟಿ ಶುಭಾ ಪೂಂಜಾ ಇದೀಗ ಕೈ ಸಹಾಯವಿಲ್ಲದೇ ಮಾವಿನ ಹಣ್ಣಿನ ಸಿಪ್ಪೆ ಬಿಡಿಸಿ ತಿನ್ನುವ ಹಾಗೂ ವಾಷಿಂಗ್​ ಮಷಿನ್​ ಸಹಾಯವಿಲ್ಲದೇ ಬಟ್ಟೆ ತೊಳೆಯುವ ಚಾಲೆಂಜ್​ ತೆಗೆದುಕೊಂಡು ಸಕ್ಸಸ್​ ಆಗಿದ್ದಾರೆ. ನೋಡಿ ಈ ವಿಡಿಯೋ .

ಸ್ಯಾಂಡಲ್‌ವುಡ್‌ನ ನಟಿ ಶುಭಾ ಪೂಂಜಾ ಮದುವೆಯಾಗಿ ಐದು ವರ್ಷಗಳಾಗಿದ್ದು, ಸದ್ಯ ವೈವಾಹಿಕ ಜೀವನವನ್ನು ಎಂಜಾಯ್​ ಮಾಡುತ್ತಿದ್ದಾರೆ. ಇದರ ಜೊತೆಗೆ ಸಿನಿಮಾದಲ್ಲಿಯೂ ಬಿಜಿ ಆಗಿದ್ದಾರೆ. 2020ರಲ್ಲಿ ಲಾಕ್‌ಡೌನ್‌ನಲ್ಲಿ ಇವರ ಮದುವೆ ದಿಢೀರ್​ ನಡೆದಿತ್ತು. ಕೊನೆಗೆ ಈ ವಿಷಯವನ್ನು ರಿವೀಲ್​ ಮಾಡಿದ್ದ ನಟಿ ಎಲ್ಲರಿಗೂ ಶಾಕ್​ ಕೊಟ್ಟಿದ್ದರು. ಅಂದಹಾಗೆ ಇವರ ಮದುವೆ ಸುಮಂತ್ (Sumanth) ಎನ್ನುವವರ ಜೊತೆ ನಡೆದಿದೆ. ಮಂಗಳೂರಿನಲ್ಲಿ ಲಾಕ್​ಡೌನ್​ ಸಮಯದಲ್ಲಿ ಸರಳವಾಗಿ ನಡೆದಿದೆ. ಈ ಹಿಂದೆ ಪ್ರೇಮಿಗಳ ದಿನದಂದು ತಮ್ಮ ಮದುವೆಯ ಬಗ್ಗೆ ಅಪ್​ಡೇಟ್​ ನೀಡಿದ್ದರು ಶುಭಾ. ಅದಾಗಲೇ ಬಿಗ್​ಬಾಸ್​ ಮನೆಗೂ ಹೋಗಿದ್ದ ನಟಿ, ಅಲ್ಲಿಂದ ಬಂದ ಬಳಿಕ ಮದುವೆಗೆ ಮನೆಯವರು ತುಂಬಾ ಒತ್ತಾಯ ಮಾಡುತ್ತಿದ್ದರು. ಎರಡು ದಿನಗಳ ಮುನ್ನ ಮದುವೆ ಪ್ಲ್ಯಾನ್ ಮಾಡಲಾಗಿತ್ತು. ಅದಕ್ಕೇ ತುಂಬಾ ಜನರಿಗೆ ಕರೆಯದೇ ಮದ್ವೆ ಮಾಡಿಕೊಂಡ್ವಿ ಎಂದಿದ್ದರು.

ಇದೀಗ ಶುಭಾ, ವರ್ಷದ ಬಳಿಕ ವಿಡಿಯೋ ಮಾಡಿ ಅದನ್ನು ಶೇರ್​ ಮಾಡಿದ್ದಾರೆ. ಅದರಲ್ಲಿ ಅವರು ತಮ್ಮ ಜೀವನದ ಹಲವು ವಿಷಯಗಳನ್ನು ಹೇಳಿಕೊಂಡಿದ್ದಾರೆ. ಆದರೆ ಎಲ್ಲರ ಗಮನ ಸೆಳೆದದ್ದು ಅವರು ಕೈಯ ಸಹಾಯವಿಲ್ಲದೇ ಮಾವಿನ ಹಣ್ಣಿನ ಸಿಪ್ಪೆ ಬಿಡಿ ತಿಂದಿರುವುದು ಮತ್ತು ಗಂಡನ ಬಟ್ಟೆಯನ್ನು ಪಾತ್ರೆಯ ಸೋಪ್​ನಲ್ಲಿಯೇ ತೊಳೆದಿರುವುದು. ಇದು ಸಕತ್​ ಮಜಾಕೊಡುವ ವಿಷಯವಾಗಿದೆ. ಈ ವಿಡಿಯೋ ಅಪ್​ಲೋಡ್​ ಮಾಡಿದ ಬಳಿಕ ಪತಿಗೆ ಈ ವಿಷಯ ತಿಳಿಸುತ್ತೇನೆ ಎಂದಿದ್ದಾರೆ. ವಾಷಿಂಗ್​ ಮಷಿನ್​ ಬಂದ ಮೇಲೆ ಬಹುತೇಕ ಮನೆಯಲ್ಲಿ ಬಟ್ಟೆಯ ಸೋಪ್​ ಇಲ್ಲವೇ ಇಲ್ಲವಾಗಿದೆ. ಇದೇ ಕಾರಣಕ್ಕೆ ಶುಭಾ ಮನೆಯಲ್ಲಿ ಬಟ್ಟೆಯ ಸೋಪ್​ ಇರಲಿಲ್ಲ. ಆದರೆ ಕೈಯಿಂದಲೇ ಬಟ್ಟೆ ತೊಳೆಯುವ ಚಾಲೆಂಜ್​ ತೆಗೆದುಕೊಂಡ ಅವರು, ಬಟ್ಟೆ ತೊಳೆಯುವ ಕಲ್ಲಿನ ಮೇಲೆ ಗಂಡನ ಬಟ್ಟೆಯನ್ನು ಪಾತ್ರ ಸೋಪ್​ನಿಂದ ತೊಳೆದಿದ್ದಾರೆ. ಅದಕ್ಕಿಂತಲೂ ಮುಖ್ಯವಾಗಿ ಕೈ ಸಹಾಯವಿಲ್ಲದೇ ಮಾವಿನ ಹಣ್ಣಿನ ಸಿಪ್ಪೆಯನ್ನು ಬಾಯಿಯಿಂದ ಬಿಡಿಸಿ ತಿಂದದ್ದು ಕುತೂಹಲವಾಗಿದೆ.

ಇನ್ನು ಇವರ ಮದುವೆಯಾಗಿದ್ದು ಸಿಕ್ಕಾಪಟ್ಟೆ ಕುತೂಹಲವೇ. ಈ ಬಗ್ಗೆ ಈ ಹಿಂದೆ ಅವರು ಮಾತನಾಡಿದ್ದರು. ಎರಡು ದಿನದ ಮುನ್ನ ಮದುವೆ ಪ್ಲ್ಯಾನ್ ಆಗಿದ್ದು. ನಾವು ವಾಸ ಮಾಡುತ್ತಿದ್ದ ಮನೆ 800 ವರ್ಷ ಹಳೆ ಮನೆ. ಫುಲ್ ಪೇಂಟ್ ಬಿದ್ದಿತ್ತು, ಗೋಡೆ ಸರಿಯಾಗಿಲ್ಲ ಏನೂ ಇಲ್ಲ. ಏನ್ ಚಿನ್ನಿ ಇಲ್ಲಿ ಮದುವೆಯಾಗಿ ಒಂದು ಫೋಟೋ ತೆಗೆದರೂ ಹೇಗಿರುತ್ತೆ ಅಂದ. ಮದುವೆ ಹಿಂದಿನ ದಿನ ಫುಲ್ ಪೇಂಟ್ ಮಾಡಿದ್ದಾರೆ. ಮದುವೆ ಬಂದ ಗೆಸ್ಟ್ ಸೆಲೆಬ್ರಿಟಿ ಮಂಜು ಮತ್ತು ರಾಘು ಬಂದರು ಅವರಿಂದಲೂ ಪೇಂಟ್ ಮಾಡಿಸಲಾಗಿತ್ತು ಎಂದಿದ್ದರು. ಮದುವೆಯ ದಿನ ರಾತ್ರಿ 8 ಗಂಟೆಗೆ ಹೂ ತರಲು ಮಾರ್ಕೆಟ್‌ಗೆ ಹೋಗಲಾಗಿತ್ತು. ತುಂಬಾ ಬಾಡಿರುವ ಹೂವುಗಳು ಇದ್ದವು. ಅದನ್ನೇ ಖರೀದಿ ಮಾಡಿದ್ರು. ಅದಕ್ಕಾಗಿಯೇ ನಮ್ಮ ಮದುವೆ ಹಾರ ಕೂಡ ಬಾಡಿದೆ. ಮದುವೆ ಪಟ್ ಪಟ್ ಅಂತ ಮುಗಿದೇ ಹೋಯ್ತು. ಅಷ್ಟರಲ್ಲಿ ಸುಮಂತ್ ಪಂಚೆ ಬಿಚ್ಚಿ ಶಾರ್ಟ್- ಬನಿಯನ್ ಹಾಕೊಂಡು ಬಂದ. ಹೀಗಾಗಿ ನನ್ನ ಮದುವೆ ಫೋಟೋ ಅಂತ ಇರುವುದು ಕೇವಲ ನಾಲ್ಕು ಅಷ್ಟೆ. ಮೀಡಿಯಾದವರು ಕರೆ ಮಾಡಿ ಫೋಟೋ ಕಳುಹಿಸಿ ಎನ್ನುತ್ತಿದ್ದರು. 4 ಫೋಟೋ ಇದೆ ಅದು ಬಿಟ್ಟು ಬೇರೆ ಕೊಡಿ ಎಂದು ದುಂಬಾಲು ಬಿದ್ದಿದ್ದರು. ನಮ್ಮ ಬಳಿ ಇದ್ರೆ ತಾನೇ ಕೊಡೋದು? ನಮ್ಮ ಅಮ್ಮ ಅವರ ಅಪ್ಪ ಅಮ್ಮ ಜೊತೆಗೂ ಸುಮಂತ್ ಫೋಟೋ ತೆಗೆಸಿಕೊಂಡಿಲ್ಲ. ಮುಂದೆ ಮಕ್ಕಳು ಅಮ್ಮ ಮದುವೆ ಫೋಟೋ ವಿಡಿಯೋ ತೋರಿಸಿ ಎಂದು ಕೇಳಿದರೆ ಆ ನಾಲ್ಕು ಫೋಟೋ ಅಷ್ಟೇ ತೋರಿಸಬೇಕು ಎಂದು ತಮಾಷೆ ಮಾಡಿದ್ದರು ಶುಭಾ.

ಯುಟ್ಯೂಬ್​ಗೆ ನೀಡಿದ್ದ ಸಂದರ್ಶನವೊಂದರಲ್ಲಿ ಶುಭಾ, ತಮ್ಮ ಪತಿಗೆ ಹೇಗೆ ಟಾರ್ಚರ್​ ಕೊಡುತ್ತೇವೆ ಎಂದು ಮಾತನಾಡಿದ್ದರು. ಒಂದು ವೇಳೆ ಮತ್ತೊಮ್ಮೆ ಬಿಗ್​ಬಾಸ್​ಗೆ ಆಫರ್​ ಬಂದರೆ ಏನು ಮಾಡ್ತೀರಾ ಎಂಬ ಪ್ರಶ್ನೆಗೆ ಶುಭಾ, ಅಬ್ಬಾ ನಾನಂತೂ ತುಂಬಾ ಅವರಿಗೆ ಟಾರ್ಚರ್​ ಕೊಡ್ತೇನೆ. ಇನ್ನೊಮ್ಮೆ ಏನಾದ್ರೂ ಬಿಗ್​ಬಾಸ್​ಗೆ ಆಫರ್​ ಬಂದ್ರೆ ಅವರು ದುಡ್ಡು ಕೊಡುವುದು ಬೇಡ, ನಾನೇ ದುಡ್ಡು ಕೊಟ್ಟು ನಿನ್ನನ್ನು ಕಳಿಸುತ್ತೇನೆ. ಪ್ರತಿವಾರ ನೀನು ಅಲ್ಲಿಯೇ ಇರಲು ದುಡ್ಡು ಕೊಡ್ತಾನೇ ಇರ್ತೇನೆ. ನೂರು ದಿನವೂ ಅಲ್ಲೇ ಇರುವಂತೆ ಮಾಡುತ್ತೇನೆ ಎಂದು ತಮಾಷೆ ಮಾಡಿದ್ದರು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?