ಮಾಳವೀಕ ಮುತ್ತಿನ ಕತೆಗೆ ಬಿಗ್'ಬಾಸ್ ನಿರ್ದೇಶಕ ಪರಮೇಶ್ವರ್ ಗುಂಡ್ಕಲ್ ಉತ್ತರ

By Suvarna Web DeskFirst Published Oct 12, 2017, 6:03 PM IST
Highlights

100 ದಿನಗಳ ಕಾಲ ಹೊರ ಜಗತ್ತಿನಿಂದ ದೂರವಿರುವ ಕಾರಣದಿಂದ ಸ್ಪರ್ಧಿಗಳಿಗೂ ಆತಂಕವಿರುತ್ತದೆ. ಈ ಸಂದರ್ಭದಲ್ಲಿ ಅವರಿಗೆ ಧೈರ್ಯ ಹಾಗೂ ಉತ್ಸಾಹ ತುಂಬಿ ಕಳುಹಿಸಿರುತ್ತೇನೆ. ಆ ವಿಡಿಯೋದಲ್ಲಿರುವಂತೆ ಪ್ರಥಮ್ ಬಗ್ಗೆ ಮಾತನಾಡಿದ್ದೇನೆ ಎಂದು ನೀವು ಹೇಳಿದ್ದೀರಿ. ಆದರೆ ಪ್ರಥಮ್ ಬಗ್ಗೆ ನಾನು ಮಾತನಾಡಿಲ್ಲ.

ಬೆಂಗಳೂರು(ಅ.12): ಸದಾ ವಿವಾದಗಳಿಗೆ ಹೆಸರಾಗಿರುವ ಕನ್ನಡ ರಿಯಾಲಿಟಿ ಶೋ ಬಿಗ್ ಬಾಸ್. 2 ದಿನಗಳ ಹಿಂದಷ್ಟೆ ಸಾಮಾಜಿಕ ಜಾಲತಾಣಗಳಲ್ಲಿ ನಟಿ ಹಾಗೂ ಕಳೆದ ಆವೃತ್ತಿಯ ಸ್ಪರ್ಧಿ ಮಾಳವೀಕ ಹಾಗೂ ಕಾರ್ಯಕ್ರಮದ ನಿರ್ದೇಶಕ ಪರಮೇಶ್ವರ್ ಗುಂಡ್ಕಲ್ ಅವರಿಬ್ಬರ ನಡುವೆ ನಡೆದಿರುವ ಒಂದು ದೃಶ್ಯ ಬಾರಿ ಸಂಚಲನ ಸೃಷ್ಟಿಸಿತ್ತು.

ಖಾಸಗಿ ಕೋಣೆಗೆ ಹೋಗುವ ಮಾಳವೀಕ ನಿರ್ದೇಶಕ ಗುಂಡ್ಕಲ್ ಅವರ ಜೊತೆ ಒಂದೆರಡು ನಿಮಿಷ ಮಾತನಾಡಿ ಕೊನೆಗೆ ಹೊರಗಡೆ ಬಂದು ಇಬ್ಬರು ಮುತ್ತು ಕೊಡುವ ದೃಶ್ಯ ಎಲ್ಲಡೆ ಹರಿದಾಡಿತ್ತು. ಮೊದಲೇ ವಿವಾದಗಳಿಂದ ಕೂಡಿರುವ ಕಾರ್ಯಕ್ರಮ ಈ ದೃಶ್ಯ ಬಿಡುಗಡೆಯಾದ ಮೇಲೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿವಾದ ಸೃಷ್ಟಿಸಿದೆ. ಹಲವರು ಸಾಮಾಜಿಕ ಜಾಲತಾಣಗಳಲ್ಲಿ ನೇರವಾಗಿ ಪ್ರಶ್ನೆಗಳನ್ನು ಎತ್ತಿದ್ದರು.

ಈ ದೃಶ್ಯಕ್ಕೆ ಸಂಬಂಧಿಸಿದಂತೆ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಕಾರ್ಯಕ್ರಮ ನಿರ್ದೇಶಕ ಪರಮೇಶ್ವರ್ ಗುಂಡ್ಕಲ್ ಹಾಗೂ ನಿರೂಪಕ ಸುದೀಪ್ ಸ್ಪಷ್ಟನೆ ನೀಡಿದ್ದಾರೆ.

ಪರಮೇಶ್ವರ್ ಗುಂಡ್ಕಲ್ : ಇದು ಮಾಳವೀಕ ಅವರನ್ನು ಸೀಕ್ರೆಟ್ ರೂಮಿಗೆ ಬಿಡುವ ವಿಡಿಯೋ ಇದಾಗಿದೆ. ವಿಡಿಯೋವನ್ನು ನೀವು ನೋಡಿದ್ದೀರಿ. ಆ ವಿಡಿಯೋ ಹಿಂದಾಗಲಿ ಹಾಗೂ ಮುಂದಾಗಲಿ ಹೆಚ್ಚಿನದೇನು ಇದೆ ಅಂಥ ಅನಿಸುವುದಿಲ್ಲ.ಒಂದು ನಿರಾಶೆ ಏನೆಂದರೆ ಏನು ಇಲ್ಲದ ವಿಡಿಯೋದಲ್ಲಿ ಏನೋ ಇದೆ ಎಂದು. ಆದರೆ ಆ ವಿಡಿಯೋದಲ್ಲಿ ಏನು ಇಲ್ಲ.

ಇದೇ ಸಂದರ್ಭದಲ್ಲಿ ಸುದ್ದಿಗಾರರೊಬ್ಬರು ನೀವು ಆ ವಿಡಿಯೋಗೆ ಸಂಬಂಧಿಸಿದಂತೆ ತಳಮಳಗೊಂಡಿದ್ದೀರಿ ಎಂದು ಪ್ರಶ್ನೆ ಕೇಳಿದಾಗ. 'ನನ್ನ ಬಳಿ ಮೈಕ್ ಇರುವುದಿಲ್ಲ ಬಹುಶಃ ಅದೇ ನಿಮಗೆ ಗುಸುಗುಸು ಎಂದು ಕೇಳಿಸಿರುತ್ತದೆ. ಆವೃತ್ತಿ 3ರಲ್ಲಿ ಪೂಜಾ ಗಾಂಧಿ, 4ರಲ್ಲಿ ಶೀತಲ್, ಶಾಲಿನಿ ಹಾಗೂ ಪ್ರಥಮ್ ಹಾಗೂ ಮಾಳವೀಕ ಸೀಕ್ರೇಟ್ ರೂಮಿಗೆ ಹೋಗುವ ಎಲ್ಲ ಸಂದರ್ಭಗಳಲ್ಲಿ ನಾನು ಜೊತೆಗಿದ್ದು ಅವರಿಗೆ ವಿವರಣೆ ನೀಡಿ ಕಳಿಸಿರುತ್ತೇನೆ.

ಪ್ರಥಮ್ ಬಗ್ಗೆ ಮಾಳವೀಕ ಜೊತೆ ಮಾತನಾಡಿಲ್ಲ

100 ದಿನಗಳ ಕಾಲ ಹೊರ ಜಗತ್ತಿನಿಂದ ದೂರವಿರುವ ಕಾರಣದಿಂದ ಸ್ಪರ್ಧಿಗಳಿಗೂ ಆತಂಕವಿರುತ್ತದೆ. ಈ ಸಂದರ್ಭದಲ್ಲಿ ಅವರಿಗೆ ಧೈರ್ಯ ಹಾಗೂ ಉತ್ಸಾಹ ತುಂಬಿ ಕಳುಹಿಸಿರುತ್ತೇನೆ. ಆ ವಿಡಿಯೋದಲ್ಲಿರುವಂತೆ ಪ್ರಥಮ್ ಬಗ್ಗೆ ಮಾತನಾಡಿದ್ದೇನೆ ಎಂದು ನೀವು ಹೇಳಿದ್ದೀರಿ. ಆದರೆ ಪ್ರಥಮ್ ಬಗ್ಗೆ ನಾನು ಮಾತನಾಡಿಲ್ಲ.

ಬಿಗ್ ಬಾಸ್ ನಿಮಯದ ಪ್ರಕಾರ ಸ್ಪರ್ಧಿಗಳನ್ನು ಹೊರತುಪಡಿಸಿ ಬೇರೆ ಯಾರು ಹೋಗುವಂತಿಲ್ಲ ಎಂಬ ಪ್ರಶ್ನೆಗೆ 'ನಾನು ಕಾರ್ಯಕ್ರಮದ ನಿರ್ದೇಶಕ ಶೂರಿಟಿ ಕೊಡುವ ಸಲುವಾಗಿ ಹೋಗಬೇಕಾಗುತ್ತದೆ. ಬೇರೆ ಯಾರಾದರೂ ಹೋದರೆ ಮಾಹಿತಿ ಸೋರಿಕೆಯಾಗುವ ಸಂಭವವಿರುತ್ತದೆ. ಆ ಕಾರಣದಿಂದ ನಾನೇ ಹೋಗುತ್ತೇನೆ. ಒಂದು ವೇಳೆ ಮಾಳವೀಕ ಅವರಿಗೆ ನಾನು ಸಹಾಯ ಮಾಡಿದ್ದರೆ ಅವರೇ 4ನೇ ಆವೃತ್ತಿಯ ವಿಜೇತರಾಗಬೇಕಿತ್ತು.ಅವರು 2ನೇ ಸ್ಥಾನವನ್ನು ಪಡೆಯದೇ 4ನೇ ಸ್ಥಾನ ಪಡೆದರು'ಎಂದು ಸ್ಪಷ್ಟಪಡಿಸಿದರು.

ಸುದೀಪ್:

ವಿಡಿಯೋದಲ್ಲಿರುವಂತೆ ಏನು ಇಲ್ಲ. ಇದು ಕೇವಲ ಊಹಾಪೋಹ' ಎಂದು ತೆರೆ ಎಳೆದಿದ್ದಾರೆ.

click me!