
ಬಾಲಿವುಡ್'ನ ಪದ್ಮಾವತಿ ಚಿತ್ರ ದೊಡ್ಡ ಭರವಸೆ ಮೂಡಿಸಿದೆ. ಅದಕ್ಕೆ ಕಲಾವಿದರ ಡೆಡಿಕೇಷನೇ ಕಾರಣ. ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿ ಅಲ್ಲಾವುದ್ದೀನ್ ಖಿಲ್ಜಿ ಆಗಿದ್ದಾರೆ ನಟ ರಣವೀರ್ ಸಿಂಗ್. ಅದಕ್ಕೆ ಖಿಲ್ಜಿ ಪಾತ್ರ ಜನರನ್ನ ಸೆಳೆಯುತ್ತಿದೆ. ಒಂದು ವರ್ಷಗಳ ಕಾಲ ಈ ಪಾತ್ರದಲ್ಲಿಯೇ ಇದ್ದ ರಣವೀರ್ ಪರಸ್ಥಿತಿ ವಿಚಿತ್ರವಾಗಿಯೇ ಇದೆ. ಈಗ ಖಿಲ್ಜಿ ಥರನೇ ರಣವೀರ್ ವರ್ತನೆ ಇದೆಯಂತೆ
ಖಿಲ್ಜಿ ಪಾತ್ರದಿಂದ ರಣವೀರ್ ಹೊರ ಬಂದೇ ಇಲ್ಲ. ಸ್ನೇಹಿತರು ಈತನ ವರ್ತನೆ ಕಂಡು ಮನೋವೈದ್ಯರನ್ನು ಸಂಪರ್ಕಿಸು ಅಂತ ಸಲಹೆನೂ ಕೊಟ್ಟಿದ್ದಾರಂತೆ . ರಣವೀರ್ ಆ ಕೆಲಸವನ್ನೂ ಮಾಡಿ ಆಗಿದೆ. ರಣವೀರ್'ಗೆ ಬಂದ ಸ್ಥಿತಿ ದೀಪಿಕಾಗೂ ಬಂದೊದಗಿದೆ.
ಪದ್ಮಾವತಿಯಾಗಿ ಒಂದು ವರ್ಷ ಇದ್ದ ದೀಪಿಕಾ ಇನ್ನೂ ಅದೇ ಮೂಡ್ 'ನಲ್ಲಿಯೇ ಇದ್ದಾರಂತೆ. ಯಾಕಂದ್ರೆ ಚಿತ್ರದ ಕೊನೆಯ ದೃಶ್ಯ ಈ ಬೆಡಗಿಯನ್ನ ಡಿಸ್ಟರ್ಬ್ ಮಾಡಿದೆ. ಆದ್ದರಿಂದ ದೀಪಿಕಾ ಕೂಡ ಮನೋವೈದ್ಯರನ್ನ ಸಂಪರ್ಕಿಸಿ ಆಗಿದೆ. ಪರಕಾಯ ಪ್ರವೇಶದ ಪರಿಣಾಮ ಎಷ್ಟಿರುತ್ತೆ ಅಲ್ಲವೇ..?ಅದಕ್ಕೇ ಅಲ್ಲವೇ ಇವರನ್ನ ಗ್ರೇಟ್ ಕಲಾವಿದರು ಅನ್ನೋದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.