ಬೆಂಗಳೂರಿನ ಹೆಸರಿಗೆ ಅಮೆರಿಕಾದಲ್ಲಿ 'ಕೀರ್ತಿ' ತಂದ ಅನೂಯಾ ಸ್ವಾಮಿ.. ಯಾರು ಈ 'ಪಂಕಜ'..?!

Published : Dec 17, 2025, 01:36 PM IST
Anooya Swamy

ಸಾರಾಂಶ

ಅಮೆರಿಕದ ಸಾಲ್ಟ್ ಲೇಕ್ ಸಿಟಿಯಲ್ಲಿ ಇದೇ ಜನವರಿ 22 ರಿಂದ ಫೆಬ್ರವರಿ 1, 2025 ರವರೆಗೆ ನಡೆಯಲಿರುವ ಈ ಜಗತ್ಪ್ರಸಿದ್ಧ ಚಲನಚಿತ್ರೋತ್ಸವದಲ್ಲಿ 'ಪಂಕಜ' ಪ್ರದರ್ಶನಗೊಳ್ಳಲಿದೆ. ವಿಶೇಷವೆಂದರೆ, ಸನ್‌ಡ್ಯಾನ್ಸ್ ಚಿತ್ರೋತ್ಸವದಲ್ಲಿ ಅಧಿಕೃತವಾಗಿ ಪ್ರದರ್ಶನಗೊಳ್ಳುತ್ತಿರುವ 'ಮೊಟ್ಟಮೊದಲ ಕನ್ನಡ ಕಿರುಚಿತ್ರ.

ಕನ್ನಡ ಚಿತ್ರರಂಗದ ಕೀರ್ತಿ ಪತಾಕೆ ಈಗ ವಿಶ್ವಮಟ್ಟದಲ್ಲಿ ರಾರಾಜಿಸುತ್ತಿದೆ. ರಿಷಬ್, ರಕ್ಷಿತ್, ಯಶ್ ಅಂತಹ ಸ್ಟಾರ್ ನಟರು ಕನ್ನಡ ಸಿನಿಮಾಗಳನ್ನು ಪ್ಯಾನ್ ಇಂಡಿಯಾ ಮಟ್ಟಕ್ಕೆ ತಲುಪಿಸಿದ್ದರೆ, ಇದೀಗ ಬೆಂಗಳೂರಿನ ಪ್ರತಿಭೆಯೊಬ್ಬರು ಕನ್ನಡದ ಕಂಪು ಅಮೆರಿಕದವರೆಗೂ ಹಬ್ಬುವಂತೆ ಮಾಡಿದ್ದಾರೆ. ಹೌದು, ಇದು ಕರುನಾಡಿಗೆ ಹೆಮ್ಮೆಯ ಕ್ಷಣ! ನಗರದ ಪ್ರತಿಭಾವಂತ ಯುವ ನಿರ್ದೇಶಕಿ ಅನೂಯಾ ಸ್ವಾಮಿ (Anooya Swamy) ನಿರ್ದೇಶನದ 'ಪಂಕಜ' (Pankaja) ಎಂಬ ಕನ್ನಡ ಕಿರುಚಿತ್ರ ವಿಶ್ವವಿಖ್ಯಾತ 'ಸನ್‌ಡ್ಯಾನ್ಸ್ ಫಿಲ್ಮ್ ಫೆಸ್ಟಿವಲ್'ಗೆ (Sundance Film Festival) ಆಯ್ಕೆಯಾಗಿ ಇತಿಹಾಸ ಸೃಷ್ಟಿಸಿದೆ.

ಏನಿದು ಸಾಧನೆ?

ಅಮೆರಿಕದ ಉತಾಹ್‌ನ ಸಾಲ್ಟ್ ಲೇಕ್ ಸಿಟಿಯಲ್ಲಿ ಇದೇ ಜನವರಿ 22 ರಿಂದ ಫೆಬ್ರವರಿ 1, 2025 ರವರೆಗೆ ನಡೆಯಲಿರುವ ಈ ಜಗತ್ಪ್ರಸಿದ್ಧ ಚಲನಚಿತ್ರೋತ್ಸವದಲ್ಲಿ 'ಪಂಕಜ' ಪ್ರದರ್ಶನಗೊಳ್ಳಲಿದೆ. ವಿಶೇಷವೆಂದರೆ, ಸನ್‌ಡ್ಯಾನ್ಸ್ ಚಿತ್ರೋತ್ಸವದಲ್ಲಿ ಅಧಿಕೃತವಾಗಿ ಪ್ರದರ್ಶನಗೊಳ್ಳುತ್ತಿರುವ 'ಮೊಟ್ಟಮೊದಲ ಕನ್ನಡ ಕಿರುಚಿತ್ರ' ಎಂಬ ಹೆಗ್ಗಳಿಕೆಗೆ 'ಪಂಕಜ' ಪಾತ್ರವಾಗಿದೆ. ಜೊತೆಗೆ ಈ ಅದ್ಭುತ ಸಾಧನೆ ಮಾಡಿದ ಮೊದಲ ಕನ್ನಡಿಗ ಫಿಲ್ಮ್‌ಮೇಕರ್ ಎಂಬ ಕೀರ್ತಿ ಅನೂಯಾ ಸ್ವಾಮಿ ಅವರ ಪಾಲಾಗಿದೆ. ಜಗತ್ತಿನ ಸಾವಿರಾರು ಸಿನಿಮಾಗಳ ನಡುವೆ ನಮ್ಮ ಕನ್ನಡದ ಕಿರುಚಿತ್ರವೊಂದು ಆಯ್ಕೆಯಾಗಿರುವುದು ಸಣ್ಣ ವಿಷಯವೇನಲ್ಲ.

ಏನಿದೆ ಕಥೆಯಲ್ಲಿ?

ಅಷ್ಟಕ್ಕೂ ಈ ಕಿರುಚಿತ್ರದ ಕಥಾವಸ್ತು ಏನು ಗೊತ್ತಾ? ಅಪ್ಪಟ ಬೆಂಗಳೂರಿನ ಸೊಗಡಿನ ಕಥೆ ಇದಾಗಿದೆ. ಬೆಂಗಳೂರಿನ ಕೊಳೆಗೇರಿ ಪ್ರದೇಶದ (Slums) ಹಿನ್ನೆಲೆಯಲ್ಲಿ ಈ ಕಥೆ ಸಾಗುತ್ತದೆ. ಕಾಣೆಯಾದ ತನ್ನ ಗಂಡನನ್ನು ಹುಡುಕಲು ಹೊರಡುವ ಮಹಿಳೆ ಮತ್ತು ಆಕೆಯ ಮಗಳ ಹುಡುಕಾಟದ ಪರಿಯೇ ಈ ಚಿತ್ರದ ಎಳೆ. ಅನೂಯಾ ಅವರ ನಿರ್ದೇಶನ ಶೈಲಿ ವಿಭಿನ್ನವಾಗಿದ್ದು, ಡಾರ್ಕ್ ಹ್ಯೂಮರ್ (Dark Humour) ಮತ್ತು ಸಾಮಾಜಿಕ ಕಳಕಳಿಯನ್ನು ಹದವಾಗಿ ಬೆರೆಸಿದ್ದಾರೆ. ಆಘಾತ (Trauma), ದುಃಖ ಮತ್ತು ನೈತಿಕ ದ್ವಂದ್ವಗಳನ್ನು ಪಾತ್ರಗಳ ಮೂಲಕ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದಾರಂತೆ.

ಯಾರೀ ಅನೂಯಾ ಸ್ವಾಮಿ?

ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ಅನೂಯಾ, ಸದ್ಯ ಸಿನಿಮಾ ಕನಸುಗಳನ್ನು ಹೊತ್ತು ನ್ಯೂಯಾರ್ಕ್‌ನಲ್ಲಿದ್ದಾರೆ. ಅಲ್ಲಿನ ಪ್ರತಿಷ್ಠಿತ 'ನ್ಯೂಯಾರ್ಕ್ ಯೂನಿವರ್ಸಿಟಿ ಟಿಶ್ ಸ್ಕೂಲ್ ಆಫ್ ದಿ ಆರ್ಟ್ಸ್'ನಲ್ಲಿ (NYU Tisch) ಅವರು ಸಿನಿಮಾ ಮತ್ತು ಟಿವಿ ಪ್ರೊಡಕ್ಷನ್‌ನಲ್ಲಿ ಎಂಎಫ್‌ಎ (MFA) ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ. ಇವರು ಆಸ್ಕರ್ ವಿಜೇತ ನಿರ್ದೇಶಕ ಸ್ಪೈಕ್ ಲೀ (Spike Lee) ಅವರಿಗೆ ಬೋಧನಾ ಸಹಾಯಕರಾಗಿಯೂ (Teaching Assistant) ಕೆಲಸ ಮಾಡಿದ್ದಾರೆ ಎಂಬುದು ಅವರ ಪ್ರತಿಭೆಗೆ ಸಾಕ್ಷಿ.

ಅಷ್ಟೇ ಅಲ್ಲದೆ, ಪ್ರತಿಷ್ಠಿತ 'ಬಾಫ್ಟಾ' (BAFTA) ಸ್ಕಾಲರ್‌ಶಿಪ್, ಆಂಗ್ ಲೀ ಸ್ಕಾಲರ್‌ಶಿಪ್ ಮತ್ತು 'ಸನ್‌ಡ್ಯಾನ್ಸ್ ಇನ್‌ಸ್ಟಿಟ್ಯೂಟ್ ಇಗ್ನೈಟ್ x ಅಡೋಬ್ ಫೆಲೋಶಿಪ್' ಸೇರಿದಂತೆ ಸಿನಿಮಾ ರಂಗದ ಅನೇಕ ಪ್ರತಿಷ್ಠಿತ ಪುರಸ್ಕಾರಗಳನ್ನು ಇವರು ಮುಡಿಗೇರಿಸಿಕೊಂಡಿದ್ದಾರೆ.

ಒಟ್ಟಿನಲ್ಲಿ, ಹಾಲಿವುಡ್ ಮಂದಿಯ ಎದುರು ಕನ್ನಡದ ಕಥೆಯೊಂದು ರಾರಾಜಿಸಲು ಸಜ್ಜಾಗಿರುವುದು ನಿಜಕ್ಕೂ ಸಂಭ್ರಮದ ಸಂಗತಿ. 'ಅನೂಯಾ ಸ್ವಾಮಿ ಮತ್ತು ಅವರ 'ಪಂಕಜ' ತಂಡಕ್ಕೆ ನಮ್ಮದೊಂದು ಸಲಾಂ' ಎಂದು ಸೋಷಿಯಲ್ ಮೀಡಿಯಾಗಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿವೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss ಗೆಲ್ಲೋರು ಯಾರು? ಮೊದಲೇ ಅವರಿಗೆ ಹೇಳಲಾಗತ್ತಾ? ದೊಡ್ಮನೆ ಗುಟ್ಟು ಕಿಚ್ಚ ಸುದೀಪ್​ ರಿವೀಲ್​
OSCARS 2025: ಜಾನ್ವಿ ಕಪೂರ್-ಇಶಾನ್ ಖಟ್ಟರ್-ವಿಶಾಲ್ ಜೇಥಾ 'ಹೋಮ್‌ಬೌಂಡ್' ಆಯ್ಕೆ? ಕರಣ್ ಜೋಹರ್ ಪೋಸ್ಟ್!