ಪಾಕಿಸ್ತಾನದಲ್ಲಿ ಬ್ಯಾನ್ ಆದ್ರೂ 'ಧುರಂಧರ್ 2' ನೋಡಿದ ರಿಪೋರ್ಟರ್: ವಿಡಿಯೋ ವೈರಲ್, ಸಿಕ್ಕಾಪಟ್ಟೆ ಟ್ರೋಲ್

Published : Mar 21, 2026, 05:12 PM IST
Dhurandhar 2

ಸಾರಾಂಶ

ಪಾಕಿಸ್ತಾನದಲ್ಲಿ 'ಧುರಂಧರ್: ದಿ ರಿವೆಂಜ್' ಚಿತ್ರವನ್ನು ಬ್ಯಾನ್ ಮಾಡಲಾಗಿದೆ. ಆದರೆ ಅಲ್ಲಿ ನಡೆದ ಒಂದು ಘಟನೆ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಪಾಕಿಸ್ತಾನಿ ಪತ್ರಕರ್ತರೊಬ್ಬರು ನೋಡುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ.

ರಣವೀರ್ ಸಿಂಗ್ ನಟನೆಯ ಸ್ಪೈ ಆ್ಯಕ್ಷನ್ ಸಿನಿಮಾ 'ಧುರಂಧರ್: ದಿ ರಿವೆಂಜ್' ಪಾಕಿಸ್ತಾನದಲ್ಲಿ ಬ್ಯಾನ್ ಆಗಿದೆ. ಆದರೂ ಅಲ್ಲಿನ ಜನ ಕದ್ದುಮುಚ್ಚಿ ಸಿನಿಮಾ ನೋಡ್ತಿದ್ದಾರೆ. ಅಷ್ಟೇ ಅಲ್ಲ, ಪಾಕ್ ಪತ್ರಕರ್ತನೊಬ್ಬ ಪೈರಸಿ ಕಾಪಿ ನೋಡ್ತಿರೋ ವಿಡಿಯೋ ವೈರಲ್ ಆಗಿದ್ದು, ಇಂಟರ್‌ನೆಟ್‌ನಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ.

ಪಾಕಿಸ್ತಾನದಲ್ಲಿ 'ಧುರಂಧರ್: ದಿ ರಿವೆಂಜ್' ಚಿತ್ರವನ್ನು ಬ್ಯಾನ್ ಮಾಡಲಾಗಿದೆ. ಆದರೆ ಅಲ್ಲಿ ನಡೆದ ಒಂದು ಘಟನೆ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಪಾಕಿಸ್ತಾನಿ ಪತ್ರಕರ್ತರೊಬ್ಬರು, ಅದೂ ಪೈರಸಿ ಕಾಪಿಯಲ್ಲಿ, ಟಿವಿಯಲ್ಲಿ ಈ ಸಿನಿಮಾ ನೋಡುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ವೈರಲ್ ಆಗ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಮೀಮ್‌ಗಳ ಸುರಿಮಳೆಯೇ ಆಗಿದೆ. ರಣವೀರ್ ಸಿಂಗ್ ಅವರ ಈ ಸಿನಿಮಾ ಬಾಕ್ಸ್ ಆಫೀಸ್ ನಂತರ ಈಗ ಇಂಟರ್‌ನೆಟ್‌ನಲ್ಲೂ 'ತಹಲ್ಕಾ' ಸೃಷ್ಟಿಸಿದೆ.

'ಧುರಂಧರ್ 2' ನೋಡುವ ವಿಡಿಯೋ ಶೇರ್ ಮಾಡಿದ ಪಾಕ್ ಪತ್ರಕರ್ತ

ಖಾಲಿದ್ ಮಹಮೂದ್ ಎಂಬ ಎಕ್ಸ್ (X) ಬಳಕೆದಾರರೊಬ್ಬರು ತಾವೇ ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಇದರಲ್ಲಿ ಅವರು ಟಿವಿಯಲ್ಲಿ ಸಿನಿಮಾ ನೋಡುತ್ತಿರುವುದು ಕಾಣಿಸುತ್ತೆ. ಸ್ಕ್ರೀನ್ ನೋಡಿದ್ರೆ ಸಾಕು, ಅದು ಕ್ಯಾಮ್ ಪ್ರಿಂಟ್ (ಥಿಯೇಟರ್‌ನಲ್ಲಿ ರೆಕಾರ್ಡ್ ಮಾಡಿದ ಕಾಪಿ) ಅಂತ ಸ್ಪಷ್ಟವಾಗಿ ಗೊತ್ತಾಗುತ್ತೆ. 'ಲಾಹೋರ್‌ನಲ್ಲಿ ಧುರಂಧರ್ 2 ನೋಡುತ್ತಿದ್ದೇನೆ' ಅಂತ ಅವರು ಕ್ಯಾಪ್ಶನ್ ಕೂಡ ಕೊಟ್ಟಿದ್ದಾರೆ. ಈ ವಿಡಿಯೋ ಭಾರತ ತಲುಪುತ್ತಿದ್ದಂತೆ ದೊಡ್ಡ ಸುದ್ದಿಯಾಗಿದೆ. ಜನರು ಪೈರಸಿ ಬಗ್ಗೆ ಪ್ರಶ್ನೆ ಎತ್ತುತ್ತಿದ್ದು, ಆ ಪತ್ರಕರ್ತನನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ.
 

 

ವೈರಲ್ ವಿಡಿಯೋಗೆ ಬರುತ್ತಿದೆ ತರಹೇವಾರಿ ಕಮೆಂಟ್‌

ಪಾಕ್ ಪತ್ರಕರ್ತನ ಪೋಸ್ಟ್ ನೋಡಿದ ನೆಟ್ಟಿಗರು ಸಿಕ್ಕಾಪಟ್ಟೆ ಕಾಲೆಳೆಯುತ್ತಿದ್ದಾರೆ. ಒಬ್ಬರು, 'ಟಿವಿ ಸ್ಕ್ರೀನ್ ಒಡೆದಂಗಿದೆ, ಟಿ20 ಮ್ಯಾಚ್ ನೋಡಿದ್ನಾ ಏನೋ!' ಅಂತ ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, 'ಸಿನಿಮಾ ಅಷ್ಟು ಚೆನ್ನಾಗಿದೆ, ಪಾಕಿಸ್ತಾನದಲ್ಲೂ ಕದ್ದುಮುಚ್ಚಿ ನೋಡ್ತಿದ್ದಾರೆ!' ಎಂದಿದ್ದಾರೆ. ಮತ್ತೊಬ್ಬರು, 'ನಿಮ್ಮ ಈ ತ್ಯಾಗಕ್ಕೆ ಧನ್ಯವಾದಗಳು ಸರ್... ನೀವು ನಮ್ಮ ಅನಾಮಧೇಯ ಹೀರೋ!' ಎಂದು ಬರೆದಿದ್ದಾರೆ. 'ಪಾಕಿಸ್ತಾನದಲ್ಲಿ ಸ್ಪೈ ಆಗಿ ಮೊದಲ ದಿನ' ಅಂತ ಒಬ್ಬರು ತಮಾಷೆ ಮಾಡಿದ್ದಾರೆ.

'ಲಾಹೋರ್‌ನಲ್ಲಿ ಕೂತು ಪಾಕಿಸ್ತಾನದ ಸರ್ವನಾಶವನ್ನೇ ನೋಡ್ತಿದ್ದಾನೆ' ಅಂತ ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. 'ಈ ಭಿಕ್ಷುಕರ ಹತ್ತಿರ ಒಂದು ಒಳ್ಳೆ ಟಿವಿ ಕೂಡ ಇಲ್ಲ' ಅಂತ ಒಬ್ಬರು ವ್ಯಂಗ್ಯವಾಡಿದ್ದಾರೆ. 'ಉಗಿದು ನೆಕ್ಕೋ ಚಾಳಿ ಇನ್ನೂ ಬಿಟ್ಟಿಲ್ಲ' ಅಂತ ಮತ್ತೊಬ್ಬರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. 'ಸಿನಿಮಾ ಹೇಗಿತ್ತು?' ಅಂತ ಒಬ್ಬರು ತಮಾಷೆಗೆ ಕೇಳಿದರೆ, 'ಎಂಜಾಯ್ ಮಾಡಿ... ರೇಟಿಂಗ್ ಕೊಡೋದು ಮರೀಬೇಡಿ!' ಅಂತ ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.

ಬಾಕ್ಸ್ ಆಫೀಸ್‌ನಲ್ಲೂ 'ಧುರಂಧರ್ 2' ಹವಾ

'ಧುರಂಧರ್: ದಿ ರಿವೆಂಜ್' ಕೇವಲ ವಿವಾದಗಳಿಂದ ಮಾತ್ರವಲ್ಲ, ಗಳಿಕೆಯಲ್ಲೂ ಮುಂದಿದೆ. ಈ ಸಿನಿಮಾ ಭಾರತದಲ್ಲಿ 250 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಇನ್ನು ವಿಶ್ವಾದ್ಯಂತ ಇದರ ಗಳಿಕೆ 350 ಕೋಟಿ ರೂಪಾಯಿ ದಾಟಿದೆ. ಆದಿತ್ಯ ಧರ್ ನಿರ್ದೇಶನದ ಈ ಚಿತ್ರದಲ್ಲಿ ರಣವೀರ್ ಸಿಂಗ್ ಜೊತೆಗೆ ಅರ್ಜುನ್ ರಾಂಪಾಲ್, ಸಂಜಯ್ ದತ್, ಆರ್. ಮಾಧವನ್, ಸಾರಾ ಅರ್ಜುನ್ ಮತ್ತು ರಾಕೇಶ್ ಬೇಡಿ ಅವರಂತಹ ಕಲಾವಿದರು ನಟಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಹುಳ ಬಿಟ್ಟ ಡಿವೈನ್ ಸ್ಟಾರ್ ಪೋಸ್ಟ್; ಹೊಂಬಾಳೆ ಫಿಲಂಸ್, ರಿಷಬ್ ಶೆಟ್ಟಿ ನಡುವೆ ಏನಾಯ್ತು..?
ಖುಲಾಯಿಸಿತು ಅದೃಷ್ಟ…. ಗೋಲ್ಡನ್ ಸ್ಟಾರ್’ಗೆ ನಾಯಕಿಯಾದ ‘ರಾಮಾಚಾರಿ’ ಸೀರಿಯಲ್ ನಟಿ